ಪತ್ರಾ ಚಾವ್ಲ್ ಭೂ ಹಗರಣ : ಸಂಜಯ್ ರಾವತ್ ಮನೆ ತಲುಪಿದ ಇಡಿ ತಂಡ

ಶಿವಸೇನಾ ಸಂಸದ ಸಂಜಯ್ ರಾವತ್ ಅವರ ಮುಂಬೈ ಮನೆಗೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಬಂದು ವಿಚಾರಣೆ ನಡೆಸುತ್ತಿದ್ದಾರೆ. ಸಂಜಯ್ ರಾವತ್ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಲಾಗಿದೆ. 

Written by - Channabasava A Kashinakunti | Last Updated : Jul 31, 2022, 09:56 AM IST
  • ಶಿವಸೇನಾ ಸಂಸದ ಸಂಜಯ್ ರಾವತ್
  • ಮುಂಬೈ ಮನೆಗೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು
  • ಮಹಾರಾಷ್ಟ್ರ ಮತ್ತು ಶಿವಸೇನೆ ನಡುವಿನ ಹೋರಾಟ ಮುಂದುವರಿಯುತ್ತದೆ
ಪತ್ರಾ ಚಾವ್ಲ್ ಭೂ ಹಗರಣ : ಸಂಜಯ್ ರಾವತ್ ಮನೆ ತಲುಪಿದ ಇಡಿ ತಂಡ title=

ಮುಂಬೈ : ಶಿವಸೇನಾ ಸಂಸದ ಸಂಜಯ್ ರಾವತ್ ಅವರ ಮುಂಬೈ ಮನೆಗೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಬಂದು ವಿಚಾರಣೆ ನಡೆಸುತ್ತಿದ್ದಾರೆ. ಸಂಜಯ್ ರಾವತ್ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಲಾಗಿದೆ. 

ಮುಂಬೈನ ಪತ್ರಾ ಚಾಲ್‍ನ ಮರು-ಅಭಿವೃದ್ಧಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ರಾವತ್‍ಗೆ ಸಮನ್ಸ್ ನೀಡಿತ್ತು. ಆದರೆ ಅವರು ಈ ಸಮನ್ಸ್ ನಿರಾಕರಿಸಿ ಇದು ರಾಜಕೀಯ ದ್ವೇಷದ ಕಾರಣದಿಂದ ನನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ : Jammu and Kashmir : ಬಾರಾಮುಲ್ಲಾದಲ್ಲಿ ಗುಂಡಿನ ಚಕಮಕಿ : ಎಲ್‌ಇಟಿ ಭಯೋತ್ಪಾದಕನ ಎನ್‌ಕೌಂಟರ್‌!

ಸಂಜಯ್ ರಾವುತ್ ಟ್ವೀಟ್

ಇಡಿ ತಂಡವು ವಿಚಾರಣೆಗಾಗಿ ಸಂಜಯ್ ರಾವುತ್ ಅವರ ಮನೆಗೆ ತಲುಪಿದ ನಂತರ, "ಮಹಾರಾಷ್ಟ್ರ ಮತ್ತು ಶಿವಸೇನೆ ನಡುವಿನ ಹೋರಾಟ ಮುಂದುವರಿಯುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಸಂಜಯ್ ರಾವುತ್, ಸುಳ್ಳು ಕ್ರಮ, ಸುಳ್ಳು ಸಾಕ್ಷ್ಯ, ನಾನು ಶಿವಸೇನೆಯನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ನಾನು ಸತ್ತರೂ ನಾನು ಶರಣಾಗುವುದಿಲ್ಲ. ಜೈ ಮಹಾರಾಷ್ಟ್ರ.

ಏನಿದು ಪತ್ರಾ ಚಾಲ್ ಹಗರಣ?

ಮುಂಬೈನ ಗೋರೆಗಾಂವ್‌ನಲ್ಲಿರುವ ಸಿದ್ಧಾರ್ಥ್ ನಗರ, ಇದನ್ನು ಪತ್ರಾ ಚಾಲ್ ಎಂದೂ ಕರೆಯುತ್ತಾರೆ. ಪತ್ರಾ ಚಾವ್ಲ್ 47 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಪತ್ರಾ ಚಾಲ್‌ನ ಪುನರಾಭಿವೃದ್ಧಿಯಲ್ಲಿನ ರಿಗ್ಗಿಂಗ್ ಕುರಿತು ಇಡಿ ತನಿಖೆ ನಡೆಸುತ್ತಿದೆ. 2008 ರಲ್ಲಿ, ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ (MHADA) ಪತ್ರಾ ಚಾಲ್‌ನ ಪುನರಾಭಿವೃದ್ಧಿಯ ಕೆಲಸವನ್ನು ಪ್ರಾರಂಭಿಸಿತು. ಇದು 672 ಬಾಡಿಗೆದಾರರನ್ನು ಹೊಂದಿತ್ತು. ಪುನರಾಭಿವೃದ್ಧಿಯ ಗುತ್ತಿಗೆಯನ್ನು ಗುರು ಆಶಿಶ್ ಕನ್ಸ್ಟ್ರಕ್ಷನ್ ಲಿಮಿಟೆಡ್‌ಗೆ ನೀಡಲಾಯಿತು.

14 ವರ್ಷಗಳ ನಂತರವೂ ಬಾಡಿಗೆದಾರರು ತಮ್ಮ ಮನೆಗಳನ್ನು ಮರಳಿ ಪಡೆಯಲು ಕಾಯುತ್ತಿದ್ದಾರೆ. ಈ ಜಾಗವನ್ನು ಫ್ಲ್ಯಾಟ್‌ ನಿರ್ಮಿಸದೆ ಒಂಬತ್ತು ಬಿಲ್ಡರ್‌ಗಳಿಗೆ 901.79 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಮೂಲಕ ನಿರ್ಮಾಣ ಸಂಸ್ಥೆ ಅಕ್ರಮವಾಗಿ 1,034.79 ಕೋಟಿ ರೂ. ಗಳಿಸಿದೆ. 

ಏಪ್ರಿಲ್‍ನಲ್ಲಿ, ಜಾರಿ ನಿರ್ದೇಶನಾಲಯವು ತನ್ನ ತನಿಖೆಯ ಭಾಗವಾಗಿ ರಾವತ್ ಅವರ ಪತ್ನಿ ವರ್ಷಾ ರಾವತ್ ಮತ್ತು ಅವರ ಇಬ್ಬರು ಸಹಚರರ 11.15 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಇದನ್ನೂ ಓದಿ : 'ನಾನು ಮಾತನಾಡಲು ಆರಂಭಿಸಿದರೆ ಭೂಕಂಪನವಾಗಲಿದೆ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News