Chitradurga: ಪಾಳುಬಿದ್ದ ಮನೆಯಲ್ಲಿ ಐವರ ಅಸ್ಥಿಪಂಜರಗಳು ಪತ್ತೆ..!

ಜಗನ್ನಾಥ ರೆಡ್ಡಿ ಅವರ ಸಂಬಂಧಿಕರಾದ ಪವನ್ ಕುಮಾರ್ ಎಂಬುವರು ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ‘ಈ ಮನೆಯಲ್ಲಿ ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ, ಅವರ ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣಾರೆಡ್ಡಿ ಹಾಗೂ ನರೇಂದ್ರ ರೆಡ್ಡಿ ವಾಸವಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಇವರು ಯಾರೂ ನಮ್ಮ ಸಂಪರ್ಕದಲ್ಲಿ ಇರಲಿಲ್ಲ’ ಅಂತಾ ಹೇಳಿದ್ದಾರೆ.

Written by - Puttaraj K Alur | Last Updated : Dec 29, 2023, 01:22 PM IST
  • ಚಿತ್ರದುರ್ಗ ನಗರದ ಪಾಳುಬಿದ್ದ ಮನೆಯೊಂದರಲ್ಲಿ ಐವರ ಅಸ್ಥಿಪಂಜರಗಳು ಪತ್ತೆ
  • ಪಾಳುಬಿದ್ದ ಮನೆಯೊಂದರಲ್ಲಿ ಐವರು ವ್ಯಕ್ತಿಗಳ ಮೃತದೇಹದ ಅಸ್ಥಿಪಂಜರ ಪತ್ತೆ
  • ಚಳ್ಳಕೆರೆ ನಗರದ ಚಳ್ಳಕೆರೆ ಗೇಟ್ ಬಳಿ ಇರುವ ಜೈಲ್ ರಸ್ತೆಯ ಮನೆಯಲ್ಲಿ ಘಟನೆ
Chitradurga: ಪಾಳುಬಿದ್ದ ಮನೆಯಲ್ಲಿ ಐವರ ಅಸ್ಥಿಪಂಜರಗಳು ಪತ್ತೆ..! title=
ಐವರ ಅಸ್ಥಿಪಂಜರಗಳು ಪತ್ತೆ!

ಚಿತ್ರದುರ್ಗ: ಚಳ್ಳಕೆರೆ ನಗರದ ಚಳ್ಳಕೆರೆ ಗೇಟ್ ಬಳಿ ಇರುವ ಜೈಲ್ ರಸ್ತೆಯ ಸಮೀಪದ ಪಾಳು ಮನೆಯೊಂದರಲ್ಲಿ ಐವರ ಅಸ್ಥಿಪಂಜರಗಳು ಪತ್ತೆಯಾಗಿವೆ. ಮನೆಯಲ್ಲಿ ಅಸ್ಥಿಪಂಜರಗಳಿವೆ ಎಂಬುದರ ಬಗ್ಗೆ ಮಾಹಿತಿ ಪಡೆದು ಸ್ಥಳ ಪರಿಶೀಲನೆಗೆ ಆಗಮಿಸಿದ ಪೊಲೀಸರಿಗೆ ಶಾಕ್ ಆಗಿದೆ. ಗುರುವಾರ ತಡರಾತ್ರಿವರೆಗೂ ಪರಿಶೀಲನೆ ನಡೆಸಿದ ಪೊಲೀಸರಿಗೆ ಐದು ಅಸ್ಥಿ ಪಂಜರಗಳು ಇರುವುದು ತಿಳಿದುಬಂದಿದೆ.

ಈ ಮನೆ ದೊಡ್ಡಸಿದ್ದವ್ವನಹಳ್ಳಿ ಮೂಲದ ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ ಎಂಬುವವರಿಗೆ ಸೇರಿದೆ. ಅವರು ತಮ್ಮ ಪತ್ನಿ ಪ್ರೇಮಾವತಿ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣಾ ರೆಡ್ಡಿ ಮತ್ತು ನರೇಂದ್ರ ರೆಡ್ಡಿ ಜೊತೆಗೆ ವಾಸವಾಗಿದ್ದರಂತೆ. ಆದರೆ ಈಗ ಸಿಕ್ಕಿರುವ ಅಸ್ಥಿಪಂಜರಗಳು ಯಾರವು ಅನ್ನೋದು ಇನ್ನೂ ದೃಢಪಟ್ಟಿಲ್ಲ. ಜಗನ್ನಾಥ ರೆಡ್ಡಿ ಮತ್ತವರ ಕುಟುಂಬಸ್ಥರು ಕಳೆದ ಕೆಲವು ದಿನಗಳಿಂದ ಯಾರಿಗೂ ಕಾಣಿಸಿಲ್ಲ. ಹೀಗಾಗಿ ಇವು ಅವರದ್ದೇ ಇರಬಹುದು ಅಂತಾ ಹೇಳಲಾಗುತ್ತಿದೆ.  

ಇದನ್ನೂ ಓದಿ: ಈ ವಾರದ ಕ್ಯಾಪ್ಟನ್ ಪಟ್ಟ ಯಾರಿಗೆ..? ಸ್ಪರ್ಧಿಗಳ ಕುಟುಂಬಸ್ಥರು ಹೇಳಿದ್ದು ಈ ಒಬ್ಬ ವ್ಯಕ್ತಿ ಹೆಸರು

ದಾವಣಗೆರೆಯಿಂದ ವಿಧಿ-ವಿಜ್ಞಾನ ತಜ್ಞರ ತಂಡ ಆಗಮಿಸಿ ಪರಿಶೀಲಿಸಿದ್ದು, ತಲೆಯ ಬುರುಡೆಗಳು ಪತ್ತೆಯಾಗಿವೆ. ಅಸ್ಥಿಪಂಜರಗಳು ಪತ್ತೆಯಾಗಿರುವ ಸುದ್ದಿ ಕೇಳಿ ಚಳ್ಳಕೆರೆ ಗೇಟ್ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಮನೆಯ ಬಾಗಿಲು ತೆರೆದಿಲ್ಲವೆಂದು ಅಕ್ಕಪಕ್ಕದ ನಿವಾಸಿಗಳು ತಿಳಿಸಿದ್ದಾರೆ. ಈ ಹಿಂದೆ ಇದೇ ಮನೆಯಿಂದ ದುರ್ನಾತ ಬರುತ್ತಿತ್ತು. ಆದರೆ ಇಲಿ ಅಥವಾ ಯಾವುದೋ ಪ್ರಾಣಿ ಸತ್ತಿರಬಹುದು ಎಂದು ಸ್ಥಳೀಯರು ಸುಮ್ಮನಾಗಿದ್ದರಂತೆ.

ಜಗನ್ನಾಥ ರೆಡ್ಡಿ ಅವರ ಸಂಬಂಧಿಕರಾದ ಪವನ್ ಕುಮಾರ್ ಎಂಬುವರು ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ‘ಈ ಮನೆಯಲ್ಲಿ ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ, ಅವರ ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣಾರೆಡ್ಡಿ ಹಾಗೂ ನರೇಂದ್ರ ರೆಡ್ಡಿ ವಾಸವಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಇವರು ಯಾರೂ ನಮ್ಮ ಸಂಪರ್ಕದಲ್ಲಿ ಇರಲಿಲ್ಲ’ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ₹40,000 crore scam: ಯತ್ನಾಳ್ ಹೇಳಿದ ಆ ‘ರಾತ್ರಿ ರಹಸ್ಯ’ ಯಾವುದು ವಿಜಯೇಂದ್ರ?- ಕಾಂಗ್ರೆಸ್

'ಇದೀಗ ಪತ್ತೆಯಾಗಿರುವ ಅಸ್ಥಿಪಂಜರಗಳು ಅವರದ್ದೇ ಆಗಿರಬಹುದು. 3 ವರ್ಷಗಳ ಹಿಂದೆಯೇ ಅವರ ಸಾವನ್ನಪ್ಪಿರಬಹುದು. ಇಡೀ ಕುಟುಂಬದ ಸಾವಿನ ಬಗ್ಗೆ ಅನುಮಾನವಿದ್ದು, ಪೊಲೀಸರು ಸಮಗ್ರ ತನಿಖೆ ನಡೆಸಬೇಕೆಂದು’ ಅವರು ಮನವಿ ಮಾಡಿದ್ದಾರೆ. ಇನ್ನು ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಐಜಿಪಿ ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News