ಗಜೇಂದ್ರಗಡ ಪಟ್ಟಣದಲ್ಲಿ ನರಿ ಅವಾಂತರ

ಬುಧವಾರ (ಡಿಸೆಂಬರ್ 14) ಬೆಳ್ಳಂಬೆಳಗ್ಗೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣಕ್ಕೆ ಕಾಲಿಟ್ಟಿದ್ದ ನರಿಯೊಂದು ಕಂಡ ಕಂಡಲ್ಲಿ ಸ್ಥಳೀಯರ ಮೇಲೆ ದಾಳಿ ನಡೆಸಿದ್ದು, ನರಿ ಸೃಷ್ಟಿಸಿದ ಅವಾಂತರದಿಂದಾಗಿ ಹಲವರು ಗಾಯಗೊಂಡಿದ್ದಾರೆ.

Written by - Yashaswini V | Last Updated : Dec 14, 2022, 01:24 PM IST
  • ಇಂದು ಬೆಳ್ಳಂಬೆಳಗ್ಗೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನರಿ ಪ್ರತ್ಯಕ್ಷ
  • ಸಾರ್ವಜನಿಕರನ್ನು ಬೆನ್ನಟ್ಟಿ ನರಿ ದಾಳಿ
  • ತಮ್ಮನ್ನು ರಕ್ಷಿಸಿಕೊಳ್ಳಲು ನರಿಯನ್ನೇ ಅಟ್ಟಾಡಿಸಿಕೊಂಡು ಕೊಂದಿರುವ ಸಾರ್ವಜನಿಕರು
ಗಜೇಂದ್ರಗಡ ಪಟ್ಟಣದಲ್ಲಿ ನರಿ ಅವಾಂತರ title=
Fox disaster

ಗದಗ: ರಾಜ್ಯದಲ್ಲಿ ಇಷ್ಟು ದಿನ ಚಿರತೆ, ಆನೆ ದಾಳಿಯಾಯ್ತು ಇದೀಗ ನರಿ ದಾಳಿಯ ಬಗ್ಗೆ ವರದಿಯಾಗಿದೆ. ಇಂದು (ಡಿಸೆಂಬರ್ 14) ಮುಂಜಾನೆ ಸಾರ್ವಜನಿಕರ ಮೇಲೆ ದಾಳಿ ನಡೆಸಿ ಉಪಟಳ ಸೃಷ್ಟಿಸಿದ್ದ ನರಿಯಲ್ಲಿ ಸ್ಥಳೀಯ ಜನರೇ ಅಟ್ಟಾಡಿಸಿ ಕೊಂದಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಎಂಬ ಪಟ್ಟಣದಲ್ಲಿ ಮುನ್ನಲೆಗೆ ಬಂದಿದೆ. 

ಬುಧವಾರ (ಡಿಸೆಂಬರ್ 14) ಬೆಳ್ಳಂಬೆಳಗ್ಗೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣಕ್ಕೆ ಕಾಲಿಟ್ಟಿದ್ದ ನರಿಯೊಂದು ಕಂಡ ಕಂಡಲ್ಲಿ ಸ್ಥಳೀಯರ ಮೇಲೆ ದಾಳಿ ನಡೆಸಿದ್ದು, ನರಿ ಸೃಷ್ಟಿಸಿದ ಅವಾಂತರದಿಂದಾಗಿ ಹಲವರು ಗಾಯಗೊಂಡಿದ್ದಾರೆ.

ಇದನ್ನೂ ಓದಿ- ಚಿರತೆ ದಾಳಿಗೆ ಮತ್ತೊಂದು ಬಲಿ!!​

ನರಿ ಉಪಟಳದಿಂದಾಗಿ ಬೇಸತ್ತಿದ್ದ ಗಜೇಂದ್ರಗಡ ಪಟ್ಟಣದ ಸ್ಥಳೀಯ ಜನರು ನರಿಯನ್ನೇ ಬೆನ್ನಟ್ಟಿ ಅದನ್ನು ಅಟ್ಟಾಡಿಸಿಕೊಂಡು ಕೊಂದಿರುವುದಾಗಿ ವರದಿ ಆಗಿದೆ.

ಇದನ್ನೂ ಓದಿ- ಅರಣ್ಯದಂಚಿನ ಗ್ರಾಮಗಳಲ್ಲಿ 13 ಆನೆಗಳು ಪ್ರತ್ಯಕ್ಷ, ಬೆಳೆ ಹಾನಿ ಆತಂಕದಲ್ಲಿ ಸ್ಥಳೀಯರು

ಇದಕ್ಕೂ ಮುನ್ನ ನರಿಯು ಗದಗ ಜಿಲ್ಲೆಯ ಅಸುಂಡಿ ಎಂಬ ಗ್ರಾಮದ ಸಹಕಾರ ಸಂಸ್ಥೆಯ ಪ್ರೌಢಶಾಲೆಯ ಆವರಣದಲ್ಲಿ ಉಪಟಳ ಸೃಷ್ಟಿಸಿತ್ತು. ಶಾಲಾ ಆವರಣದಲ್ಲಿ ನರಿತಂದ ಅವಾಂತರದಿಂದಾಗಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಬೆಚ್ಚಿಬಿದ್ದಿದ್ದರು. 

ಇನ್ನು ಶಾಲಾ ಆವರಣದಲ್ಲಿ ನರಿ ಅವಾಂತರದ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು ಆ ನರಿಯನ್ನು ಸೆರೆ ಹಿಡಿದು ಬಿಂಕದ ಕಟ್ಟಿ ಮೃಗಾಲಯಕ್ಕೆ ಬಿಟ್ಟಿದ್ದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News