100 ಕೋಟಿ ಕೊಟ್ರೆ ಸಿಗುತ್ತಂತೆ ರಾಜ್ಯಪಾಲ, ರಾಜ್ಯಸಭಾ ಸ್ಥಾನ!

ರಾಜ್ಯಸಭಾ ಸ್ಥಾನ ಮತ್ತು ರಾಜ್ಯಪಾಲರ ಹುದ್ದೆ ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ ಜನರಿಗೆ ವಂಚಿಸಲು ಯತ್ನಿಸಿದ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಸೋಮವಾರ ಬಹುರಾಜ್ಯ ವಂಚಕರ ದಂಧೆಯನ್ನು ಭೇದಿಸಿದ್ದು, ನಾಲ್ವರನ್ನು ಬಂಧಿಸಿದೆ. 

Written by - Chetana Devarmani | Last Updated : Jul 25, 2022, 05:07 PM IST
  • ರಾಜ್ಯಸಭಾ, ರಾಜ್ಯಪಾಲರ ಹುದ್ದೆ ಕೊಡಿಸುವುದಾಗಿ ಸುಳ್ಳು ಭರವಸೆ
  • ಜನರಿಗೆ ವಂಚಿಸಲು ಯತ್ನಿಸಿದ ಆರೋಪ
  • ಬಹುರಾಜ್ಯ ವಂಚಕರ ದಂಧೆಯನ್ನು ಭೇದಿಸಿದ ಸಿಬಿಐ
100 ಕೋಟಿ ಕೊಟ್ರೆ ಸಿಗುತ್ತಂತೆ ರಾಜ್ಯಪಾಲ, ರಾಜ್ಯಸಭಾ ಸ್ಥಾನ!   title=
ಸಿಬಿಐ

ನವದೆಹಲಿ: ರಾಜ್ಯಸಭಾ ಸ್ಥಾನ ಮತ್ತು ರಾಜ್ಯಪಾಲರ ಹುದ್ದೆ ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ ಜನರಿಗೆ ವಂಚಿಸಲು ಯತ್ನಿಸಿದ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಸೋಮವಾರ ಬಹುರಾಜ್ಯ ವಂಚಕರ ದಂಧೆಯನ್ನು ಭೇದಿಸಿದ್ದು, ನಾಲ್ವರನ್ನು ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ಸಂಸ್ಥೆ ಇತ್ತೀಚೆಗೆ ಶೋಧ ನಡೆಸಿದ್ದು, ಗ್ಯಾಂಗ್‌ನ ನಾಲ್ವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. 

ಇದನ್ನೂ ಓದಿ: Suspected Terrorist Arrested: ಬೆಂಗಳೂರಲ್ಲಿ ವಾಸವಿದ್ದ ಶಂಕಿತ ಉಗ್ರ ಸಿಸಿಬಿ ವಶಕ್ಕೆ

ಶೋಧ ಕಾರ್ಯಾಚರಣೆ ವೇಳೆ ಆರೋಪಿಗಳಲ್ಲಿ ಒಬ್ಬ ಸಿಬಿಐ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಜೆನ್ಸಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಆತನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯಸಭೆಯ ಸ್ಥಾನ, ರಾಜ್ಯಪಾಲರ ನೇಮಕ, ಕೇಂದ್ರ ಸರ್ಕಾರದ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ನೇಮಕ ಮಾಡುವುದಾಗಿ ಸುಳ್ಳು ಭರವಸೆ ನೀಡಿ 100 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ನಾಲ್ವರನ್ನು ಸಿಬಿಐ ಬಂಧಿಸಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಮಹಾರಾಷ್ಟ್ರದ ಲಾತೂರ್‌ನ ಕಮಲಾಕರ್ ಪ್ರೇಮಕುಮಾರ್ ಬಂಡಗರ್, ಕರ್ನಾಟಕದ ಬೆಳಗಾವಿಯ ರವೀಂದ್ರ ವಿಠಲ್ ನಾಯಕ್ ಮತ್ತು ದೆಹಲಿ-ಎನ್‌ಸಿಆರ್ ಮೂಲದ ಮಹೇಂದ್ರ ಪಾಲ್ ಅರೋರಾ, ಅಭಿಷೇಕ್ ಬೂರಾ ಮತ್ತು ಮೊಹಮ್ಮದ್ ಐಜಾಜ್ ಖಾನ್ ಅವರನ್ನು ಹೆಸರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಸಿಎಂ ಮನೆ ಮುಂದೆ ದಾಂಧಲೆ ಪ್ರಕರಣ: ಆರೋಪಪಟ್ಟಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಹೆಸರು!!

ಆರೋಪಿಗಳು 100 ಕೋಟಿ ರೂಪಾಯಿ ಹಣ ನೀಡಿದ್ರೆ ರಾಜ್ಯಸಭೆ ಸ್ಥಾನ ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ ಜನರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎಫ್ಐಆರ್‌ನಲ್ಲಿ ಆರೋಪಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News