Bangalore: ಚಿಕನ್ ಪೀಸ್‌ಗಾಗಿ ಗಲಾಟೆ.. ಕಸ್ಟಮರ್ಸ್‌ ಮೇಲೆ ಹೋಟೆಲ್ ಸಿಬ್ಬಂದಿ ಹಲ್ಲೆ

ಊಟಕ್ಕೆ ಬಂದವರ ಮೇಲೆ ಹೋಟೆಲ್ ಸಿಬ್ಬಂದಿ ಹಲ್ಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಊಟಕ್ಕೆ ಬಂದವರ ಮೇಲೆ ಸಪ್ಲೈಯರ್ಸ್, ಮ್ಯಾನೇಜರ್ ಗಳಿಂದ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

Written by - VISHWANATH HARIHARA | Edited by - Chetana Devarmani | Last Updated : Jun 26, 2022, 12:52 PM IST
  • ಊಟಕ್ಕೆ ಬಂದವರ ಮೇಲೆ ಹೋಟೆಲ್ ಸಿಬ್ಬಂದಿ ಹಲ್ಲೆ
  • ತಲೆ ಓಪನ್ ಆಗುವ ಹಾಗೆ ಹೊಡೆದ ಹೋಟೆಲ್ ಸಿಬ್ಬಂದಿ
  • ನವರಂಗ್ ಬಳಿಯ ಹೋಟೆಲ್ ನಲ್ಲಿ ಘಟನೆ
Bangalore: ಚಿಕನ್ ಪೀಸ್‌ಗಾಗಿ ಗಲಾಟೆ.. ಕಸ್ಟಮರ್ಸ್‌ ಮೇಲೆ ಹೋಟೆಲ್ ಸಿಬ್ಬಂದಿ ಹಲ್ಲೆ title=
ಸಿಬ್ಬಂದಿ ಹಲ್ಲೆ

ಬೆಂಗಳೂರು: ಊಟಕ್ಕೆ ಬಂದವರ ಮೇಲೆ ಹೋಟೆಲ್ ಸಿಬ್ಬಂದಿ ಹಲ್ಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಊಟಕ್ಕೆ ಬಂದವರ ಮೇಲೆ ಸಪ್ಲೈಯರ್ಸ್, ಮ್ಯಾನೇಜರ್ ಗಳಿಂದ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸ್ಟೀಲ್‌ ಜಗ್, ರಾಡ್ ಗಳಿಂದ ಊಟಕ್ಕೆ ಬಂದವರ ಮೇಲೆ ಹಲ್ಲೆ ಮಾಡಲಾಗಿದ್ದು, ತಲೆ ಓಪನ್ ಆಗುವ ಹಾಗೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. 

ಇದನ್ನೂ ಓದಿ:  Bangalore Accident: ಲಾರಿ, ಬಸ್, ಕಾರುಗಳ ನಡುವೆ ಸರಣಿ ಅಪಘಾತ

ಸಿಲಿಕಾನ್‌ ಸಿಟಿಯ ನವರಂಗ್ ಬಳಿಯ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ. ನಿನ್ನೆ ತಡರಾತ್ರಿ 1 ಗಂಟೆಗಯ ಸುಮಾರಿಗೆ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. ಮೂರು ಜನರ ಮೇಲೆ ಹಲ್ಲೆ ಮಾಡಿದ್ದು, ಇಬ್ಬರ ತಲೆಗೆ  ಗಂಭೀರ ಗಾಯವಾಗಿದೆ. 

ಅಭಿಶೇಕ್, ಅನೀಶ್, ಜಾನ್ಸನ್ ಎಂಬುವರ ಮೇಲೆ ಹಲ್ಲೆ ಮಾಡಲಾಗಿದೆ. ಚಿಕನ್ ಪೀಸ್ ಕಡಿಮೆ ಹಾಕಿ ಬಿಲ್ ಜಾಸ್ತಿ ಕೊಟ್ಟಿದ್ದೀರಾ ಎಂದು ಜಾನ್ಸನ್ ಎಂಬುವವರು ಜಗಳ ಶುರು ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು, ವಾಗ್ವಾದ ವಿಕೋಪಕ್ಕೆ ತಿರುಗಿದೆ. 

ಇದನ್ನೂ ಓದಿ:  WATCH: ವಾಹನಗಳ ಮೇಲೆ ಆನೆ ದಾಳಿ, ಆತಂಕಗೊಂಡ ವಾಹನ ಸವಾರರು

ಮೂವರಿಗೆ ಹೋಟೆಲ್‌ ಸಿಬ್ಬಂದಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News