ಲಕ್ಷಾಂತರ ರೂ. ಮೌಲ್ಯದ ಮೊಬೈಲ್ ಟವರ್ ಕದ್ದ ಖತರ್ನಾಕ್ ಕಳ್ಳರು

Mobile Tower Stolen: ಖತರ್ನಾಕ್ ಕಳ್ಳರು ಮೊಬೈಲ್ ಟವರ್‌ನ್ನೇ ಕದ್ದಿರುವ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದ ಟವರ್ ಪರಿಶೀಲಿಸಲೆಂದು ಕಂಪನಿಯ ಅಧಿಕಾರಿಗಳು ಶನಿವಾರ (ನವೆಂಬರ್ 26) ಟವರ್ ಇದ್ದ ಸ್ಥಳಕ್ಕೆ ಆಗಮಿಸಿದಾಗ ಈ ಘಟನೆ ಬಗ್ಗೆ ತಿಳಿದುಬಂದಿದೆ.   

Written by - Yashaswini V | Last Updated : Nov 29, 2022, 01:42 PM IST
  • ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಟವರ್‌ನ್ನೇ ಕದ್ದ ಕಳ್ಳರು
  • ಮೊಬೈಲ್ ಟವರ್‌ನ್ನೇ ಕದ್ದಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ಬೆಳಕಿಗೆ ಬಂದಿದೆ
  • ಸುಮಾರು 15-16 ವರ್ಷಗಳ ಅಳವಡಿಸಲಾಗಿದ್ದ ಟವರ್ ಕದ್ದ ಖದೀಮರು
ಲಕ್ಷಾಂತರ ರೂ. ಮೌಲ್ಯದ ಮೊಬೈಲ್ ಟವರ್ ಕದ್ದ ಖತರ್ನಾಕ್ ಕಳ್ಳರು  title=
Mobile Tower Stolen

Mobile Tower Stolen: ಟೆಲಿಕಾಂ ಕಂಪನಿಯ ಅಧಿಕಾರಿಗಳಂತೆ ನಟಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಟವರ್‌ನ್ನೇ ಕದ್ದಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ಬೆಳಕಿಗೆ ಬಂದಿದೆ.  ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದ ಟವರ್ ಪರಿಶೀಲಿಸಲೆಂದು ಕಂಪನಿಯ ಅಧಿಕಾರಿಗಳು ಶನಿವಾರ (ನವೆಂಬರ್ 26) ಟವರ್ ಇದ್ದ ಸ್ಥಳಕ್ಕೆ ಆಗಮಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಿರುವ ಟವರ್ ಅಳವಡಿಸಿರುವ ಜಮೀನಿನ ಮಾಲೀಕರು, ಸುಮಾರು 15-16 ವರ್ಷಗಳ ಹಿಂದೆ ಈ ಜಾಗದಲ್ಲಿ ಟವರ್ ಅಳವಡಿಸಲಾಗಿತ್ತು. ಇತ್ತೀಚಿಗೆ ತಾವು ಟೆಲಿಕಾಂ ಕಂಪನಿಯ ಅಧಿಕಾರಿಗಳು ಎಂದು ಹೇಳಿಕೊಂಡು ಬಂದಿದ್ದ ಖದೀಮರು ಟವರ್ ಅಳವಡಿಸಲು ಮಾಡಿಕೊಂಡಿದ್ದ ಒಪ್ಪಂದ ಮುಗಿದಿದೆ ಎಂದು ಹೇಳಿ ಅದನ್ನು ಕದ್ದೊಯ್ದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ- ಹಿಟ್ ಅಂಡ್ ರನ್ ಮಾಡಿ ಎಸ್ಕೇಪ್ ಆಗಿದ್ದ ಅಪರಾಧಿ ಪೊಲೀಸ್ ಬಲೆಗೆ

ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಲಕ್ಷಾಂತರ ರೂಪಾಯಿ ಮೌಲ್ಯದ ಟವರ್ ಅನ್ನು ಕೆಡವಲು ಖದೀಮರು ಎರಡು-ಮೂರು ದಿನ ಸಮಯ ತೆಗೆದುಕೊಂಡಿದ್ದು ಬಳಿಕ ಆ ಟವರ್ ಅನ್ನು ಟ್ರಕ್‌ನಲ್ಲಿ ಕೊಂಡೊಯ್ದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ- ಪ್ರೇಯಸಿ ಜೊತೆ ಐಷಾರಾಮಿ ಜೀವನ ನಡೆಸೋಕೆ ಎಟಿಎಂ ದೋಚಿದ್ದ ಸೆಕ್ಯೂರಿಟಿ ಗಾರ್ಡ್ ಬಂಧನ

ಮಾಧ್ಯಮ ವರದಿಗಳ ಪ್ರಕಾರ, ಪಾಟ್ನಾದ ಗರ್ದ್ನಿಬಾಗ್ ಪೊಲೀಸ್ ಠಾಣೆಯ ಯಾರ್ಪುರ್ ರಜಪೂತಾನ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಘಟನೆ ಕುರಿತಂತೆ ಗಾರ್ಡ್ನಿಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಟವರ್ ಅನ್ನು ಕೆಡವಲು ಉಪಕರಣಗಳು ಮತ್ತು ಗ್ಯಾಸ್ ಕಟರ್‌ಗಳೊಂದಿಗೆ ಶಸ್ತ್ರಸಜ್ಜಿತವಾದ ಸುಮಾರು 25 ಕಳ್ಳರ ತಂಡವು ಸ್ಥಳಕ್ಕೆ ಆಗಮಿಸಿತ್ತು ಎಂದು ದೂರುದಾರರು ಮಾಹಿತಿ ಹಂಚಿಕೊಂಡಿದ್ದಾರೆ. ಇದೀಗ ಈ ಖತರ್ನಾಕ್ ಕಳ್ಳರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News