ಚಾಮರಾಜನಗರ: ವನ್ಯಜೀವಿ ಬೇಟೆ ಪ್ರತ್ಯೇಕ ಪ್ರಕರಣದಲ್ಲಿ ಜಿಂಕೆ ಹಾಗೂ ಕಡವೆ ಮಾಂಸವನ್ನು ವಶಪಡಿಸಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದಿದೆ.
ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಕಡವೆ ಬೇಟೆಯಾಡಿದ್ದ ಮಾರ್ಟಳ್ಳಿ ಸಮೀಪದ ಸಂದನಪಾಳ್ಯ ಗ್ರಾಮದ ಕೊಳಂದೈರಾಜ್ ಎಂಬುವವನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಇದನ್ನೂ ಓದಿ- ವಿದೇಶಿ ಯೂಟ್ಯೂಬರ್ ಮೇಲೆ ಹಲ್ಲೆಗೆ ಯತ್ನ: ಆರೋಪಿ ಅಂದರ್
ರಾಮಾಪುರ ವನ್ಯಜೀವಿ ವಲಯದಲ್ಲಿ ಕಡವೆ ಬೇಟೆಯಾಡಿ ಅದರ ಮಾಂಸವನ್ನ ಪಾಲು ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿದೆ. ಅರಣ್ಯಾಧಿಕಾರಿಗಳನ್ನು ಕಂಡು ಸ್ಥಳದಲ್ಲಿದ್ದ ಜಾನ್ ಮತ್ತು ಕುಮಾರ್ ಎಂಬುವವರು ಪರಾರಿಯಾಗಿದ್ದು ಕೊಳಂದೈರಾಜ್ ಸಿಕ್ಕಿ ಬಿದ್ದಿದ್ದಾನೆ. ಕೂಡಲೇ ಆರೋಪಿ ಕೊಳಂದೈರಾಜ್, ಕಡವೆ ಮಾಂಸ ಹಾಗೂ ಅದನ್ನು ಬೇಟೆಯಾಡಲು ಬಳಸಿದ್ದ ಕೊಡಲಿ, ಮಚ್ಚು ಮುಂತಾದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿರುವ ಅರಣ್ಯಾಧಿಕಾರಿಗಳು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ- ಖ್ಯಾತ ನಟನ ಮದುವೆ ಪಾರ್ಟಿಯಲ್ಲಿ ಗಲಾಟೆ: ವೈಷ್ಣವಿ ಬಿಲ್ಡರ್ಸ್ ದರ್ಶನ್ ಕೊಲೆಗೆ ವೇದಾಂತ್ ದುಗಾರ್ ಯತ್ನ ಆರೋಪ
ಮನೆಯಲ್ಲಿ ಜಿಂಕೆ ಮಾಂಸ:
ಮತ್ತೊಂದು ಪ್ರಕರಣದಲ್ಲಿ ಹನೂರು ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ ತಂತಿಯಲ್ಲಿ ನೇತು ಹಾಕಿದ್ದ 3 ಕೆಜಿಯಷ್ಟು ಜಿಂಕೆ ಮಾಂಸವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಂಪಯ್ಯಹಟ್ಟಿ ಗ್ರಾಮದವರಾದ ಸೋಮಣ್ಣ ಹಾಗೂ ನರಸಿಂಹ ಎಂಬುವವರು ತಲೆಮರೆಸಿಕೊಂಡಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ಇವರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.