ವಿದೇಶಿ ಯೂಟ್ಯೂಬರ್ ಮೇಲೆ ಹಲ್ಲೆಗೆ ಯತ್ನ: ಆರೋಪಿ ಅಂದರ್

ಬೆಂಗಳೂರನ್ನ ಸುತ್ತಾಡಲು ಬಂದಿದ್ದ ನೆದರ್ಲೆಂಡ್ಸ್‌ ಮೂಲದ ಖ್ಯಾತ ಯೂಟ್ಯೂಬರ್ ಪೆದ್ರೋ ಮೋಟಾಗೆ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರಿಂದ  ನವಾಬ್ ಹಯಾತ್ ಶರೀಫ್ ಎಂಬಾತನನ್ನು ಬಂಧಿಸಲಾಗಿದೆ.  

Written by - VISHWANATH HARIHARA | Edited by - Yashaswini V | Last Updated : Jun 12, 2023, 01:28 PM IST
  • ನೆದರ್ಲೆಂಡ್ ಮೂಲದ ಪೆದ್ರೋ ಕಳೆದ ಎರಡು ತಿಂಗಳಿನಿಂದ ಕರ್ನಾಟಕ ಪ್ರವಾಸದಲ್ಲಿದ್ದಾರೆ.
  • ಬೆಂಗಳೂರನ್ನ ಪರಿಚಯಿಸುತ್ತಾ ವ್ಲಾಗ್ ಮಾಡುತ್ತಿರುವಾಗ ತಡೆದ ಈ ಕಿಡಿಗೇಡಿ ಪೆದ್ರೋರನ್ನ ರಸ್ತೆಯಲ್ಲಿ ಎಳೆದಾಡಿ ಹಣ ಕಿತ್ತುಕೊಳ್ಳಲು ಯತ್ನಿಸಿದ್ದ.
  • ಆರೋಪಿಯಿಂದ ಪೆದ್ರೋ ತಪ್ಪಿಸಿಕೊಂಡ ದೃಶ್ಯಗಳು ಲೈವ್ ರೆಕಾರ್ಡಿಂಗ್ ನಲ್ಲಿ ಸೆರೆಯಾಗಿದ್ದವು.
ವಿದೇಶಿ ಯೂಟ್ಯೂಬರ್ ಮೇಲೆ ಹಲ್ಲೆಗೆ ಯತ್ನ: ಆರೋಪಿ ಅಂದರ್ title=

ಬೆಂಗಳೂರು : ಅತಿಥಿ ದೇವೋಭವ ಎಂಬ ಪರಿಕಲ್ಪನೆಯನ್ನ ಅತ್ಯಂತ ಗೌರವದಿಂದ ಆಚರಿಸುವ ದೇಶ ಭಾರತ. ಭಾರತದ ಯೂಟ್ಯೂಬರ್ ಗಳು ಗಡಿ ದಾಟಿ ವಿಶ್ವದ ಮೂಲೆ ಮೂಲೆ ಪರಿಚಯಿಸುತ್ತಿರುವ ಈ ದಿನಗಳಲ್ಲಿ ಭಾರತೀಯರನ್ನ ಅಲ್ಲಿನ ಜನ ಬರಮಾಡಿಕೊಳ್ಳುವ ರೀತಿಯೂ ಸಹ ಉತ್ತಮವಾಗಿರುತ್ತೆ.  ಸದ್ಯ ಸಿಲಿಕಾನ್ ಸಿಟಿಯ ಚಿಕ್ಕಪೇಟೆಯಲ್ಲಿ ಯೂಟ್ಯೂಬರ್ ಮೇಲೆ ಹಲ್ಲೆಗೆ ಯತ್ನಿಸಿದ ವ್ಯಕ್ತಿಯನ್ನು ಚಿಕ್ಕಪೇಟೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರನ್ನ ಸುತ್ತಾಡಲು ಬಂದಿದ್ದ ನೆದರ್ಲೆಂಡ್ಸ್‌ ಮೂಲದ ಖ್ಯಾತ ಯೂಟ್ಯೂಬರ್ ಪೆದ್ರೋ ಮೋಟಾಗೆ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರಿಂದ  ನವಾಬ್ ಹಯಾತ್ ಶರೀಫ್ ಎಂಬಾತನನ್ನು ಬಂಧಿಸಲಾಗಿದೆ.  

ಇದನ್ನೂ ಓದಿ- ಖ್ಯಾತ ನಟನ ಮದುವೆ ಪಾರ್ಟಿಯಲ್ಲಿ ಗಲಾಟೆ: ವೈಷ್ಣವಿ ಬಿಲ್ಡರ್ಸ್ ದರ್ಶನ್ ಕೊಲೆಗೆ ವೇದಾಂತ್ ದುಗಾರ್ ಯತ್ನ ಆರೋಪ

ನೆದರ್ಲೆಂಡ್ ಮೂಲದ ಪೆದ್ರೋ ಕಳೆದ ಎರಡು ತಿಂಗಳಿನಿಂದ ಕರ್ನಾಟಕ ಪ್ರವಾಸದಲ್ಲಿದ್ದಾರೆ. ಬೆಂಗಳೂರನ್ನ ಪರಿಚಯಿಸುತ್ತಾ ವ್ಲಾಗ್ ಮಾಡುತ್ತಿರುವಾಗ ತಡೆದ ಈ ಕಿಡಿಗೇಡಿ ಪೆದ್ರೋರನ್ನ ರಸ್ತೆಯಲ್ಲಿ ಎಳೆದಾಡಿ ಹಣ ಕಿತ್ತುಕೊಳ್ಳಲು ಯತ್ನಿಸಿದ್ದ.  ಆರೋಪಿಯಿಂದ ಪೆದ್ರೋ ತಪ್ಪಿಸಿಕೊಂಡ ದೃಶ್ಯಗಳು ಲೈವ್ ರೆಕಾರ್ಡಿಂಗ್ ನಲ್ಲಿ ಸೆರೆಯಾಗಿದ್ದವು.

ಇದನ್ನೂ ಓದಿ- ಪಕ್ಕದ್ಮನೆ ಮಹಿಳೆ ಸ್ನಾನ ಮಾಡುತ್ತಿದ್ದಾಗ ಇಣುಕಿ ನೋಡಿದ ಕಾಮುಕನ ಬಂಧನ..!

ಘಟನೆಯ ಕುರಿತು ಮುದಾಸಿರ್ ಅಹಮದ್ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಆರೋಪಿಯ ಕೃತ್ಯದ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಸದ್ಯ ಆರೋಪಿಯನ್ನು ವಿರುದ್ಧ ಸುಮಟೋ ಕೇಸ್ ದಾಖಲಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News