Chamarajanagar : ಹುಟ್ಟುಹಬ್ಬದ ದಿನವೇ ಉಪನ್ಯಾಸಕಿ ಸೂಸೈಡ್

Lecturer commits suicide : ಚಾಮರಾಜನಗರದ ಜೆಎಸ್ ಎಸ್ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಇವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

Written by - Chetana Devarmani | Last Updated : Aug 9, 2022, 06:00 PM IST
  • ಹುಟ್ಟುಹಬ್ಬದ ದಿನವೇ ಉಪನ್ಯಾಸಕಿ ಆತ್ಮಹತ್ಯೆ
  • ಚಾಮರಾಜನಗರದಲ್ಲಿ ಬರ್ಥ್ ಡೇ ದಿನವೇ ಉಪನ್ಯಾಸಕಿ ಸೂಸೈಡ್
  • ಯಳಂದೂರು ತಾಲೂಕಿನ ಅಂಬಳೆ ಗ್ರಾಮದಲ್ಲಿ ಘಟನೆ
Chamarajanagar : ಹುಟ್ಟುಹಬ್ಬದ ದಿನವೇ ಉಪನ್ಯಾಸಕಿ ಸೂಸೈಡ್   title=
ಉಪನ್ಯಾಸಕಿ ಸೂಸೈಡ್

ಚಾಮರಾಜನಗರ: ಮಾನಸಿಕ ಒತ್ತಡಕ್ಕೆ ನಗರದ ಖಾಸಗಿ ಕಾಲೇಜಿನ ಉಪನ್ಯಾಸಕಿಯೊಬ್ಬರು ಅಸುನೀಗಿದ್ದು ನೂರಾರು ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಎಲ್ಲದಕ್ಕಿಂತ ಹೆಚ್ಚಾಗಿ ಪಾಲಕರು  ಮರುಗಿದ್ದಾರೆ‌. ಆಕೆ ಬಾಳಿ ಬದುಕಬೇಕಿದ್ದ ಯುವತಿ. ಆದ್ರೆ ಆಕೆಗೆ ಏನಾಯ್ತೋ ಏನೋ? ತನ್ನ ಹುಟ್ಟುಹಬ್ಬದ ದಿನವೇ ತನ್ನ ಜೀವನವನ್ನು ಕೊನೆಗಾಣಿಸಿಕೊಂಡಿದ್ದಾಳೆ ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಚಂದನಾ(26) ಎಂಬ ಉಪನ್ಯಾಸಕಿ. ಚಂದನಾ ಚಾಮರಾಜನಗರದ ಜೆಎಸ್‌ಎಸ್‌ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜೆಎಸ್‌ಎಸ್‌ ಕಾಲೇಜಿನ ಹಾಸ್ಟೆಲ್‌ನಲ್ಲೇ ವಾಸ್ತವ್ಯ ಹೂಡಿದ್ದರು. ಈಕೆ ಎಲ್ಲರ ಜೊತೆಯಲ್ಲೂ ಸಹಾ ಉತ್ತಮ‌ ಭಾಂದವ್ಯ ಹೊಂದಿದ್ರು. ಇವತ್ತು ಆಕೆಯ ಹುಟ್ಟುಹಬ್ಬ ಇತ್ತು. ಹೀಗಾಗಿ ಆಕೆಯ ಸ್ನೇಹಿತರು,ವಿದ್ಯಾರ್ಥಿಗಳು ಶುಭಾಶಯ ಕೋರಿದ್ರು. ಆದ್ರೆ ಇದಾದ ನಂತರ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನ ಜೊತೆ ಕೊಠಡಿಯಲ್ಲಿದ್ದ ಸ್ನೇಹಿತರು ಹೊರಹೋದ ನಂತರ ತನ್ನ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಚೋರ ಮಗನಿಗೆ ಚಂಡಾಳ ಅಪ್ಪನೇ ಗುರು: ಬರೋಬ್ಬರಿ 65 ಕಳ್ಳತನ ಮಾಡಿದ್ದ ಚೋರ್ ಇಮ್ರಾನ್ ಅಂದರ್

ಡೆತ್ ನೋಟ್ ನಲ್ಲಿ ಮಾನಸಿಕ ಒತ್ತಡ ಬಯಲು: 

ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿರುವ ಚಂದನಾ " ಯಾಕೆ ಯಾರೂ ನನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಪ್ರಾರಂಭಿಸಿದ್ದು,  ತನ್ನ ಮನದಾಳದ ನೋವನ್ನು ಅಕ್ಷರ ರೂಪ ನೀಡಿ ಕೊನೆಗೆ ನನ್ನ ಸಾವಿಗೆ ಯಾರು ಕಾರಣರಲ್ಲ.‌ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಇಬ್ಬರು ಅಕ್ಕಂದಿರಿಗೆ ಸಾರಿ ಕೇಳಿರುವ ಚಂದನಾ ತಂಗಿ ಉದ್ದೇಶಿಸಿ ಯಾವುದೇ ಕಾರಣಕ್ಕೂ ಉಪನ್ಯಾಸಕಿ ಹುದ್ದೆಗೆ ಬರಬೇಡ ಎಂದು ತನ್ನ ಕೊನೆಯ ಸಲಹೆಯನ್ನು ಕೊಟ್ಟಿದ್ದಾರೆ. 

ತಂದೆ ಜೊತೆ ಕೊನೆಯ ಬಾರಿ ಪಾನಿಪೂರಿ: 

ಇಂದು ಚಂದನಾಳ ಹುಟ್ಟುಹಬ್ಬವಾಗಿದ್ದು ಆಕೆಯ ತಂದೆ ಕೇಕ್ ಕಟ್ ಮಾಡಿಸಲು ಸಕಲ ಸಿದ್ಧತೆಯನ್ನು ನಡೆಸಿದ್ದರು. ಸೋಮವಾರ ಸಂಜೆ ಅಷ್ಟೇ ಮಗಳೊಟ್ಟಿಗೆ ಪಾನಿಪೂರಿ ಸೇವಿಸಿ ಊರಿಗೆ ಬರುವಂತೆ ಹೇಳಿದ್ದರಂತೆ,  ಬೆಳಗ್ಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಕೂಡಲೇ ಅವರ ತಂದೆ ಹಾಸ್ಟೆಲ್‌ನ ಸೆಕ್ಯೂರಿಟಿಗೆ ಕರೆ ಮಾಡಿ‌ ಚಂದನಾ ಫೋನ್ ಎತ್ತದೇ ಇರುವುದನ್ನು ತಿಳಿಸಿದ್ದಾರೆ. ಈ ವೇಳೆ ಚಂದನಾ ಕೊಠಡಿ ಬಳಿ ಹೋದ ಸೆಕ್ಯೂರಿಟಿಗೆ ಚಂದನಾ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೂಡಲೇ ಆತ ಹಾಸ್ಟೆಲ್‌ನ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾನೆ. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಮಹಜರ್ ನಡೆಸಿದ್ರು. ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ‌. 

ಇದನ್ನೂ ಓದಿ : ​Nitin Gadkari: ವಾಹನ ಸವಾರರಿಗೆ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News