UP Rape Case: ಮಾವನಿಂದ ಸೊಸೆ ಮೇಲೆ ಅತ್ಯಾಚಾರ! ಗಂಡ ಏನಂದ ಗೊತ್ತಾ..?

UP Rape Case: ತನ್ನ ಹೆಂಡತಿಯ ಮೇಲೆ ಅತ್ಯಾಚಾರ ನಡೆಸಿದ ತಂದೆಯನ್ನು ಪ್ರಶ್ನಿಸುವ ಬದಲು ಆ ವ್ಯಕ್ತಿ ಆಕೆಗೆ ಮನಬಂದಂತೆ ಥಳಿಸಿ ಮನೆಯಿಂದ ಹೊರಹಾಕಿದ್ದಾನೆ.

Written by - Puttaraj K Alur | Last Updated : Sep 14, 2023, 07:34 PM IST
  • ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ
  • ಗಂಡ ಮನೆಯಲ್ಲಿ ಇಲ್ಲದ ವೇಳೆ ಸೊಸೆ ಮೇಲೆ ಮಾವನೇ ಅತ್ಯಾಚಾರ ನಡೆಸಿದ್ದಾನೆ
  • ನನ್ನ ತಂದೆಯ ಜೊತೆಗೆ ದೈಹಿಕ ಸಂಬಂಧ ಹೊಂದಿರುವ ನೀನು ಅಮ್ಮನ ಸಮಾನವೆಂದ ಗಂಡ
UP Rape Case: ಮಾವನಿಂದ ಸೊಸೆ ಮೇಲೆ ಅತ್ಯಾಚಾರ! ಗಂಡ ಏನಂದ ಗೊತ್ತಾ..? title=
ಸೊಸೆ ಮೇಲೆ ಮಾವನ ಅತ್ಯಾಚಾರ

ನವದೆಹಲಿ: ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಗಂಡ ಮನೆಯಲ್ಲಿ ಇಲ್ಲದ ವೇಳೆ ಸೊಸೆ ಮೇಲೆ ಮಾವನೇ ಅತ್ಯಾಚಾರ ನಡೆಸಿದ್ದಾನೆ. ಈ ವಿಷಯ ಯಾರಿಗೂ ಹೇಳದಂತೆ ಆಕೆಗೆ ಜೀವ ಬೆದರಿಕೆಯನ್ನೂ ಹಾಕಿದ್ದಾನೆ. ತಂದೆಗೆ ಸಮಾನರಾದ ಮಾವನೇ ತನ್ನ ಮೇಲೆ ಅತ್ಯಾಚಾರ ಎಸಗಿದ್ದರಿಂದ ಮಹಿಳೆಗೆ ಆಘಾತವಾಗಿದೆ.

ತನ್ನ ಮೇಲೆ ಅತ್ಯಾಚಾರ ನಡೆಸಿರುವ ವಿಚಾರವನ್ನು ಸಂತ್ರಸ್ತ ಮಹಿಳೆ ಗಂಡನಿಗೆ ತಿಳಿಸಿದ್ದಾಳೆ. ಆದರೆ ಆಕೆಯ ಗಂಡ ಹೇಳಿದ ವಿಷಯ ಕೇಳಿ ಆ ಮಹಿಳೆಗೆ ಶಾಕ್ ಉಂಟಾಗಿದೆ. ‘ನನ್ನ ತಂದೆಯ ಜೊತೆಗೆ ದೈಹಿಕ ಸಂಬಂಧ ಹೊಂದಿರುವ ನೀನು ಅಮ್ಮನ ಸಮಾನ. ನಿನ್ನೊಂದಿಗೆ ನಾನು ಸಂಸಾರ ನಡೆಸುವುದಿಲ್ಲ’ ಅಂತಾ ಹೇಳಿ ಆ ಮಹಿಳೆಯನ್ನು ಮನೆಯಿಂದ ಹೊರಹಾಕಿದ್ದಾನೆ.

ಇದನ್ನೂ ಓದಿ: ಮುಂಬೈ ವಿಮಾನ ನಿಲ್ದಾಣದಲ್ಲಿ ಖಾಸಗಿ ಜೆಟ್ ವಿಮಾನ ಪತನ

ತನ್ನ ಹೆಂಡತಿಯ ಮೇಲೆ ಅತ್ಯಾಚಾರ ನಡೆಸಿದ ತಂದೆಯನ್ನು ಪ್ರಶ್ನಿಸುವ ಬದಲು ಆ ವ್ಯಕ್ತಿ ಆಕೆಗೆ ಮನಬಂದಂತೆ ಥಳಿಸಿ ಮನೆಯಿಂದ ಹೊರಹಾಕಿದ್ದಾನೆ. ಇದೀಗ ತನಗೆ ನ್ಯಾಯ ಕೊಡಿಸುವಂತೆ 26 ವರ್ಷದ ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಕಳೆದ ವರ್ಷಷ್ಟೇ ವಿವಾಹವಾಗಿದ್ದ ಮಹಿಳೆ ಸೆಪ್ಟೆಂಬರ್ 7ರಂದು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ.

‘ಆಗಸ್ಟ್ 5ರಂದು ಪತಿ ಮನೆಯಲ್ಲಿ ಇಲ್ಲದಿದ್ದ ವೇಳೆ ಮಾವ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ. ನನ್ನ ಪತಿ ಅವರ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ನಾನು ಮತ್ತು ಮಾವ ಮನೆಯಲ್ಲಿ ಇಬ್ಬರೇ ಇದ್ದವು. ಆಗ ಬಲವಂತವಾಗಿ ನನ್ನ ಮೇಲೆ ಮಾವ ಅತ್ಯಾಚಾರ ನಡೆಸಿದ್ದಾರೆ. ಬಳಿಕ ನನಗೆ ಜೀವ ಬೆದರಿಕೆಯನ್ನೂ ಹಾಕಿದ್ದಾರೆ ಅಂತಾ ಮಹಿಳೆ ಅಳಲು ತೋಡಿಕೊಂಡಿದ್ದಾಳೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆಕೆಯ ಮಾವ ಮತ್ತು ಗಂಡನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ಪೋರ್ನ್ ವಿಡಿಯೋ ನೋಡುವುದು ಅಪರಾಧವೇ? ಕಠಿಣ ಶಿಕ್ಷೆ, ಕಾನೂನುಗಳ ಬಗ್ಗೆ ಈಗಲೇ ತಿಳಿದುಕೊಳ್ಳಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.
  

Trending News