ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾಗೆ ಪುತ್ರಿ ಐರಾ ನಿರ್ಮಾಪಕಿ..!

ರಾಕಿಂಗ್ ಸ್ಟಾರ್ ಯಶ್.. ಕರುನಾಡಿನ ಮಣ್ಣಿನ ಹೆಮ್ಮೆಯ ಪುತ್ರ.. ಕನ್ನಡನಾಡಿನ ಜನತೆಗೆ ಸಾಲುಸಾಲು ಸಿನಿಮಾಗಳನ್ನ ಕೊಡೋ ಮೂಲಕ ಭರ್ಜರಿ  ಮನರಂಜನೆ ನೀಡಿ ಜನಮನ ಗೆದ್ದಿದ್ದಾರೆ.

Written by - YASHODHA POOJARI | Edited by - Manjunath N | Last Updated : Dec 1, 2022, 06:03 PM IST
  • ಅದೇನೇ ಇರಲಿ ಸ್ಯಾಂಡಲ್ವುಡ್ನಿಂದ ಹಿಡಿದು ಎಲ್ಲಾ ಚಿತ್ರರಂಗದಲ್ಲೂ ಯಶ್19 ಯಾವಾಗ ಅನ್ನೋ ಟಾಕ್ ಮಾತ್ರ ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ.
  • ಯಶ್ ಇದೀಗ ಸಾಧನೆಯ ಉತ್ತುಂಗದಲ್ಲಿದ್ದಾರೆ.
  • ಮುಂದೆ ಯಾವ ಸಿನಿಮಾ ಮಾಡಿದ್ರೂ ನೋಡಿಮಾಡಿ ಮುಂದುವರೆಯಬೇಕಾಗುತ್ತೆ.
ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾಗೆ ಪುತ್ರಿ ಐರಾ ನಿರ್ಮಾಪಕಿ..!   title=
file photo

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್.. ಕರುನಾಡಿನ ಮಣ್ಣಿನ ಹೆಮ್ಮೆಯ ಪುತ್ರ.. ಕನ್ನಡನಾಡಿನ ಜನತೆಗೆ ಸಾಲುಸಾಲು ಸಿನಿಮಾಗಳನ್ನ ಕೊಡೋ ಮೂಲಕ ಭರ್ಜರಿ  ಮನರಂಜನೆ ನೀಡಿ ಜನಮನ ಗೆದ್ದಿದ್ದಾರೆ.

ಇದೀಗ ಇಡೀ ವಿಶ್ವವೇ ರಾಕಿ ಬಾಯ್ ಬಗ್ಗೆ ಮಾತನಾಡೋ ಲೆವೆಲ್ಲಿಗೆ ಮೈಸೂರಿನ ಹುಡುಗ ಬೆಳೆದು ನಿಂತಿದ್ದಾರೆ ಅಂದ್ರೆ ನೀವೇ ಅವರ ಶ್ರಮ ಎಷ್ಟಿರಬಹುದು ಅನ್ನೋದನ್ನ ಲೆಕ್ಕಾ ಹಾಕಿ. ಕಂಡ ಕನಸನ್ನ ನನಸು ಮಾಡಿ ಇವತ್ತು ಟಾಪ್ ಲಿಸ್ಟ್ನಲ್ಲಿ ಯಶ್ ಹೆಸ್ರು ಇದೆ ಅಂದ್ರೆ ಅದು ಕರುನಾಡಿಗೆ ಹೆಮ್ಮೆ ಅಲ್ಲವೇ. ಎರಡು KGF ಯಶ್ ಹಿಂದೆ ತಿರುಗಿ ನೋಡದ ಹಾಗೇ ದೊಡ್ಡ ಪಟ್ಟದಲ್ಲಿ ಕೂರಿಸಿದೆ.KGF  ಪಾರ್ಟ್ ಒನ್ ಮತ್ತು ಟೂ ಆದ ಬಳಿಕ ಯಶ್ ಯಾವ ಸಿನಿಮಾ ಮಾಡುತ್ತಾರೆ ಅನ್ನೋ ಪ್ರಶ್ನೆ ಇವತ್ತಿಗೂ ಅಭಿಮಾನಿಗಳ ಕೇಳೋ ಪ್ರಶ್ನೆಯಾಗಿದೆ.ಆದ್ರೆ ಇವತ್ತಿನವರೆಗೂ ಯಶ್ ಮಾತ್ರ ಆ ಪ್ರಶ್ನೆಗೆ ಉತ್ತರಿಸಿಲ್ಲ.

ಇದನ್ನೂ ಓದಿ : Notice to Roger Binny: ಬಿಸಿಸಿಐ ಮುಖ್ಯಸ್ಥ ರೋಜರ್ ಬಿನ್ನಿಗೆ ನೋಟಿಸ್ ಜಾರಿ: ಇದಕ್ಕೆ ಸೊಸೆ ಮಯಾಂತಿಯೇ ಕಾರಣ!!

ಇದೀಗ ರಾಕಿಂಗ್ ಸ್ಟಾರ್ ಯಶ್ ಬಗೆಗಿನ ಒಂದು ಬ್ರೇಕಿಂಗ್ ನ್ಯೂಸ್ ನಿಮಗಾಗಿ.ಅದೇನಪ್ಪ ಅಂದ್ರೆ ಯಶ್ ಮುಂದಿನ ಸಿನಿಮಾಗೆ ಮಗಳು ಐರಾ ನಿರ್ಮಾಪಕಿಯಂತೆ.ಇದು ಹೆಂಗಪ್ಪಾ ಅಂತ ಕನ್ಫ್ಯೂಸ್ ಆಗ್ಬೇಡಿ. ಮ್ಯಾಟರ್ ಕೇಳಿದ್ರೆ ನೀವು ವಾಟರ್ ಹೀಟರ್ ತರ ಶಾಕ್ ಆಗಬೋದು. ಮಗಳು ಐರಾ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ಸ್ಥಾಪಿಸಿ ಸಿನಿಮಾ ಮಾಡೋ ಪ್ಲಾನ್ ನಲ್ಲಿ ಯಶ್ ಇದ್ದಾರೆ ಅನ್ನೋ ಮಾಹಿತಿ ಇದೀಗ ಟಾಮ್ ಟಾಮ್ ಆಗಿದೆ.

ಇದನ್ನೂ ಓದಿ : Rahul Dravid-Rohit Sharma Meeting: ದ್ರಾವಿಡ್- ರೋಹಿತ್ ಶರ್ಮಾಗೆ ಬಿಸಿಸಿಐ ಬಿಗ್ ರಿಲೀಫ್! ಸಭೆ ಮುಂದೂಡಿದ ಮಂಡಳಿ

ಅದೇನೇ ಇರಲಿ ಸ್ಯಾಂಡಲ್ವುಡ್ನಿಂದ ಹಿಡಿದು ಎಲ್ಲಾ ಚಿತ್ರರಂಗದಲ್ಲೂ ಯಶ್19 ಯಾವಾಗ ಅನ್ನೋ ಟಾಕ್ ಮಾತ್ರ ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ.ಯಶ್ ಇದೀಗ ಸಾಧನೆಯ ಉತ್ತುಂಗದಲ್ಲಿದ್ದಾರೆ.ಮುಂದೆ ಯಾವ ಸಿನಿಮಾ ಮಾಡಿದ್ರೂ ನೋಡಿಮಾಡಿ ಮುಂದುವರೆಯಬೇಕಾಗುತ್ತೆ. ಸೋ ಯಶ್ ಮುಂದಿನ ನಡೆ  ಮಾತ್ರ ತೀರಾ ನಿಗೂಢವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

Trending News