ಮೊಮ್ಮಕ್ಕಳಿಗಾಗಿ ಎರಡೇ ಎರಡು ಟೊಮಾಟೊ ಹಣ್ಣು ಕಿತ್ತ ವೃದ್ಧ ಮಹಿಳೆ, ಹೊಲದ ಮಾಲೀಕ ಮಾಡಿದ್ದೇನು?

ಚಿಂತಾಮಣಿ ತಾಲ್ಲೂಕಿನ ಗಾಜಲಹಳ್ಳಿ ಗ್ರಾಮ ಸರ್ವೆ ನಂ23 ರ ಪಕ್ಕದ‌ ಜಮೀನಿನ ಕುರುಬೂರು ಗ್ರಾಮದ‌ ನಾರಾಯಣಸ್ವಾಮಿ ಎಂಬುವರ ಟೊಮೇಟೊ ತೋಟದಲ್ಲಿ ಶಾಂತಮ್ಮ ತನ್ನ ಮೊಮ್ಮಕ್ಕಳಿಗೆ ತಿನ್ನಲೆಂದು ಎರಡು ಟೊಮೆಟೊ ಹಣ್ಣುಗಳನ್ನು  ಕಿತ್ತು ಕೊಟ್ಟಿದ್ದಾರೆ.

Written by - Yashaswini V | Last Updated : Jul 18, 2024, 04:34 PM IST
  • ಮೊಮ್ಮಕ್ಕಳಿಗಾಗಿ ಪಕ್ಕದ ಜಮೀನಿನಲ್ಲಿ ಟೊಮಾಟೊ ಕಿತ್ತ ವೃದ್ಧೆ
  • ವಿಷಯ ತಿಳಿದ ತೋಟದ ಮಾಲಿಕನಿಂದ ವೃದ್ದೆ ಮತ್ತು ಕುಟುಂಬಸ್ಥರ ಮೇಲೆ ಹಲ್ಲೆ
  • ಚಿಳ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ‌ ಗಾಜಲಹಳ್ಳಿಯಲ್ಲಿ ನಡೆದಿರುವ ಘಟನೆ
ಮೊಮ್ಮಕ್ಕಳಿಗಾಗಿ ಎರಡೇ ಎರಡು ಟೊಮಾಟೊ ಹಣ್ಣು ಕಿತ್ತ ವೃದ್ಧ ಮಹಿಳೆ, ಹೊಲದ ಮಾಲೀಕ ಮಾಡಿದ್ದೇನು?  title=

ಚಿಕ್ಕಬಳ್ಳಾಪುರ: ಈ ಬಾರಿ ರಾಜ್ಯದಲ್ಲಿ ಮಾನ್ಸೂನ್ ಅಬ್ಬರ ಜೋರಾಗಿದೆ. ಮಳೆಯಿಂದಾಗಿ ತರಕಾರಿ ಬೆಲೆಗಳು ಗಗನಮುಖಿಯಾಗಿವೆ. ಅಡುಗೆ ಮನೆಯ ರಾಜ ಟೊಮಾಟೊ ಬೆಲೆಯೂ ಕೂಡ ಆಗಸದತ್ತ ಮುಖ ಮಾಡಿದೆ. ಏತನ್ಮಧ್ಯೆ, ತನ್ನ ಮೊಮ್ಮಕ್ಕಳಿಗೆ ತಿನ್ನಲು ಪಕ್ಕದ ಟೊ‌ಮೆಟೊ ತೋಟದಲ್ಲಿ  ಎರಡೇ ಎರಡು ಹಣ್ಣು ಕಿತ್ತುಕೊಟ್ಟ ವೃದ್ದ‌ ಮಹಿಳೆ‌ ಮತ್ತು ಆಕೆಯ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

ಚಿಳ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ‌ ಗಾಜಲಹಳ್ಳಿ ಗ್ರಾಮದ ಶಾಂತಮ್ಮ(60) ಮತ್ತು ಅವರ ಮಗಳಾದ ಶೋಭಮ್ಮ(42) ಎಂಬುವವ ಕುಟುಂಬದ ಮೇಲೆ ಕುರುಬೂರು ಗ್ರಾಮದ ನಾರಾಯಣಸ್ವಾಮಿ ಕುಟುಂಬದವರು ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ- ಸಕ್ಕರೆ ನಾಡಿನಲ್ಲಿ ಪುಡಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಿದ ನೂತನ ಎಸ್‌ಪಿ

ತಾಲ್ಲೂಕಿನ ಗಾಜಲಹಳ್ಳಿ ಗ್ರಾಮ ಸರ್ವೆ ನಂ23 ರ ಪಕ್ಕದ‌ ಜಮೀನಿನ ಕುರುಬೂರು ಗ್ರಾಮದ‌ ನಾರಾಯಣಸ್ವಾಮಿ ಎಂಬುವರ ಟೊಮೇಟೊ ತೋಟದಲ್ಲಿ ಶಾಂತಮ್ಮ ತನ್ನ ಮೊಮ್ಮಕ್ಕಳಿಗೆ ತಿನ್ನಲೆಂದು ಎರಡು ಟೊಮೆಟೊ ಹಣ್ಣುಗಳನ್ನು  ಕಿತ್ತು ಕೊಟ್ಟಿದ್ದಾರೆ. ಈ ವಿಷಯ ತಿಳಿದ ತೋಟದ ಮಾಲಿಕ ನಾರಾಯಣಸ್ವಾಮಿ ರವರ ಕುಟುಂಬ ಶಾಂತಮ್ಮನವರ ಮನೆಗೆ ನುಗ್ಗಿ  ಹಲ್ಲೆ‌ಮಾಡಿ ಗಾಯಗೊಳಿಸಿದ್ದಾರೆಂದು ಗಾಯಾಳುಗಳು ತಿಳಿಸಿದ್ದಾರೆ.

ಇದನ್ನೂ ಓದಿ- Lovers Death: ನೈಸ್ ರಸ್ತೆ ಬಳಿಯ ಕೆರೆಯಲ್ಲಿ ನಾಪತ್ತೆಯಾಗಿದ್ದ ಪ್ರೇಮಿಗಳ ಶವ ಪತ್ತೆ!

ಸದ್ಯ ಹಲ್ಲೆಗೊಳಗಾದ ಶಾಂತಮ್ಮ‌ಮತ್ತು ಶೋಭಮ್ಮ ಚಿಂತಾಮಣಿ ನಗರದ ಸಾರ್ವಜನಿಕ‌ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News