ಕ್ಲಬ್ ಹೌಸ್ ಗ್ರೂಪ್‌ನಲ್ಲಿ ಡಿಪಿಗೆ ಪಾಕಿಸ್ತಾನ‌‌ದ ಧ್ವಜ ಹಾಕಿ ಅಗೌರವ: ಕಿಡಿಗೇಡಿಗಳ ವಿರುದ್ಧ FIR

ಸಾಮಾಜಿಕ ಜಾಲತಾಣದ ಕ್ಲಬ್ ಹೌಸ್ ಗ್ರೂಪ್ ನಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜ ಹಾಕಿ ದೇಶಕ್ಕೆ ಅಗೌರವ ತೋರಿಸಿದ್ದ ಆರೋಪದಡಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ‌. 

Written by - VISHWANATH HARIHARA | Edited by - Chetana Devarmani | Last Updated : Aug 17, 2022, 12:58 PM IST
  • ಕ್ಲಬ್ ಹೌಸ್ ಗ್ರೂಪ್‌ನಲ್ಲಿ ಡಿಪಿಗೆ ಪಾಕಿಸ್ತಾನ‌‌ದ ಧ್ವಜ ಹಾಕಿ ಅಗೌರವ
  • ದೇಶಕ್ಕೆ ಅಗೌರವ ತೋರಿಸಿದ್ದ ಆರೋಪದಡಿ ಪ್ರಕರಣ ದಾಖಲು
  • ಕಿಡಿಗೇಡಿಗಳ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ FIR
ಕ್ಲಬ್ ಹೌಸ್ ಗ್ರೂಪ್‌ನಲ್ಲಿ ಡಿಪಿಗೆ ಪಾಕಿಸ್ತಾನ‌‌ದ ಧ್ವಜ ಹಾಕಿ ಅಗೌರವ: ಕಿಡಿಗೇಡಿಗಳ ವಿರುದ್ಧ FIR  title=
ಕ್ಲಬ್ ಹೌಸ್ ಗ್ರೂಪ್‌

ಬೆಂಗಳೂರು: ಸಾಮಾಜಿಕ ಜಾಲತಾಣದ ಕ್ಲಬ್ ಹೌಸ್ ಗ್ರೂಪ್ ನಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜ ಹಾಕಿ ದೇಶಕ್ಕೆ ಅಗೌರವ ತೋರಿಸಿದ್ದ ಆರೋಪದಡಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ‌. ಆಗಸ್ಟ್ 14 ರಂದು ಕ್ಲಬ್ ಹೌಸ್ ಗ್ರೂಪ್ ಡಿಪಿಯನ್ನು ಪಾಕಿಸ್ತಾನದ ಧ್ಚಜ ಹಾಕಿ‌ ರಾಷ್ಟ್ರಗೀತೆಯನ್ನು ಮೊಳಗಿಸಿ ದೇಶಕ್ಕೆ ಅಗೌರವ ಸೂಚಿಸಿದ್ದರು. ಈ ಹಿನ್ನೆಲೆ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. 

ಇದನ್ನೂ ಓದಿ: 

ಪಾಕಿಸ್ತಾನ ಪರ ಜಿಂದಾಬಾದ್ ಎಂದು ಕೂಗಿದ್ದರು‌‌‌. ಪ್ರತಿಯೊಬ್ಬರು ಪಾಕಿಸ್ತಾನದ ಭಾವುಟವನ್ನ ಡಿಪಿ ಹಾಕುವಂತೆ‌ ಪ್ರಚೋದಿಸಿದ್ದರು.‌ ಈ ಗ್ರೂಪ್ ಚಾಟ್ ಹಾಗೂ ಸಂಭಾಷಣೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪಾಕಿಸ್ತಾನ ಪರ ರಾಷ್ಟ್ರಧ್ವಜ ಡಿಪಿಯಲ್ಲಿ ಹಾಕಿರುವ ವಿಚಾರ  ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರ ಗಮನಕ್ಕೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ. ಆದರೆ ಈ ಪ್ರಕರಣ ಸಂಬಂಧ ಪೊಲೀಸರು ಇನ್ನೂ ಯಾರನ್ನು ವಶಕ್ಕೆ ಪಡೆದಿಲ್ಲ. 

ಕ್ಲಬ್ ಹೌಸ್‌ನಲ್ಲಿ ನಿಕ್ ನೇಮ್ ಬಳಸಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಎಲ್ಲಾ ಮಾಹಿತಿಗಳನ್ನ ಕಲೆ ಹಾಕಲಾಗಿದೆ‌. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸರ್ವಿಸ್  ಪ್ರೊವೈಡರ್ ಗೆ ಮಾಹಿತಿ ಕೇಳಲಾಗಿದೆ. ನಮಗೆ ಕೆಲವು ಹಿಂಟ್ ಸಿಕ್ಕಿದ್ದು ಪರಿಶೀಲನೆ ನಡೆಸಲಾಗುತ್ತಿದೆ.‌ ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಕೃತ್ಯ ಎಸಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News