ಚಾಕು ಇರಿದರೂ ಇಬ್ಬರು ಪುಂಡರನ್ನು ಸೆರೆ ಹಿಡಿದ ಪೊಲೀಸ್ ಕಾನ್ಸ್ಟೇಬಲ್..! 

ರೈಲ್ವೇ ಫುಟ್ ಬೋರ್ಡ್ ನಲ್ಲಿ ಈ ಆರು ಜನ ಪುಂಡರು ಸಿಗರೇಟ್ ಸೇದುತ್ತಾ, ಜೋರಾಗಿ ಕೂಗಾಡುತ್ತಾ ಅಸಭ್ಯವಾದ ಶಬ್ಧಗಳಿಂದ ಮಾತನಾಡಿಕೊಳ್ತಿದ್ದರು. ಈ ವೇಳೆ ಬುದ್ದಿವಾದ ಹೇಳಲು ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಬಂದಿದ್ದರು. ಆಗ ಆರು ಜನರಲ್ಲಿ ಒಬ್ಬ ... 

Written by - Krishna N K | Last Updated : Feb 28, 2024, 09:44 PM IST
  • ಪೊಲೀಸ್ ಕಾನ್ಸ್ಟೇಬಲ್ ಮೇಲೆ ಚಾಕುವಿನಿಂದ ಇರಿದು ಗಾಯಗೊಳಿಸಿ ಪರಾರಿ.
  • ರೈಲ್ವೇ ಪೊಲೀಸರು ಕಾರ್ಯಾಚರಣೆ ನಡೆಸಿ 24 ಗಂಟೆಯಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ.
  • ಪೊಲೀಸರ ಮಾತಿಗೆ ಬೆಲೆ ಕೊಡದೆ, ಒಂಟಿ ಪೊಲೀಸನ ಮೇಲೆ ಮುಗಿ ಬಿದ್ದಿದ್ದಾರೆ.
ಚಾಕು ಇರಿದರೂ ಇಬ್ಬರು ಪುಂಡರನ್ನು ಸೆರೆ ಹಿಡಿದ ಪೊಲೀಸ್ ಕಾನ್ಸ್ಟೇಬಲ್..!  title=

ಬೆಂಗಳೂರು : ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗಬೇಕಾದ ಸಂಧರ್ಭದಲ್ಲಿ ಪ್ರಯಾಣಿಕರ ಸುರಕ್ಷತೆ ಬಗ್ಗೆ ಹೆಚ್ಚು‌ಗಮನ ಹರಿಸಬೇಕು. ಅದಕ್ಕೆ ಪೂರ್ಣ ಜವಾಭ್ದಾರಿ ಪೊಲೀಸರದ್ದಾಗಿರುತ್ತೆ. ಆದ್ರೆ ಅದೆ ಪೊಲೀಸರು ತಪ್ಪನ್ನು ಪ್ರಶ್ನಿಸಲು ಹೋದರೆ ಏನಾಗುತ್ತೆ ಗೊತ್ತಾ ಅದರ ಡೀಟೇಲ್ಸ್ ಇಲ್ಲಿದೆ.

ರೈಲ್ವೇ ಪೊಲೀಸರು, ಚಿನ್ನಿ‌, ಇರ್ಫಾನ್, ದರ್ಶನ್, ಇಮ್ರಾನ್,‌ ಮೊಯಿನ್ ಹಾಗು ಫೈಝಲ್ ಎಂಬ ಒಟ್ಟು ಆರು ಜನ ಪುಂಡರನ್ನ ಬಂಧಿಸಿದ್ದರೆ. ಸತೀಶ್ ಎಂಬ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಚಾಕುವಿನಿಂದ ಇರಿದು ಗಾಯಗೊಳಿಸಿ ಪರಾರಿಯಾಗಿದ್ದರು. ರೈಲ್ವೇ ಪೊಲೀಸರು ಕಾರ್ಯಾಚರಣೆ ನಡೆಸಿ 24 ಗಂಟೆಯಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ.

ಇದನ್ನೂ ಓದಿ:ಬಿಎಂಟಿಸಿಯಲ್ಲಿ 2,500 ಕಂಡಕ್ಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ರೈಲ್ವೇಸ್ ಎಂಬುದು ಬಿಗ್ ನೆಟ್ವರ್ಕ್. ಇಲ್ಲಿ ಕ್ರೈಂಗಳೂ ಕೂಡ ಹೆಚ್ಚಾಗಿ ನಡೆಯುತ್ತೆ. ಹಾಗೆ ಕೆಲವೊಂದು ಟ್ರೇಸ್ ಕೂಡ ಆಗುವುದಿಲ್ಲ. ಹೀಗಾಗಿ ನಮ್ಮನ್ನೇನು ಮಾಡ್ತಾರೆ ಎಂದು ಉಡಾಫೆಯಿಂದ ನಡೆದುಕೊಂಡ ಪುಂಡರು ಪೊಲೀಸರ ಮಾತಿಗೆ ಬೆಲೆ ಕೊಡದೆ, ಒಂಟಿ ಪೊಲೀಸನ ಮೇಲೆ ಮುಗಿ ಬಿದ್ದಿದ್ದಾರೆ. ತಾವು ಮಾಡಿದ ಕೃತ್ಯ ಗೊತ್ತಾಗಲ್ಲ ಎಂದು ಅಂದುಕೊಂಡು ತಮ್ಮ ಗೂಡು ಸೇರಿಕೊಂಡವರನ್ನ ಪೊಲೀಸರು ಬಂಧಿಸಿ ಎಳೆ ತಂದಿದ್ದಾರೆ.

ಇನ್ನು ಮೈಸೂರು - ಬೆಂಗಳೂರು ನಡುವೆ ಸಂಚರಿಸುವ ರೈಲುಗಾಡಿಯಲ್ಲಿ ಕಳ್ಳತನ ಪ್ರಕರಣಗಳ ಪತ್ತೆ ಹಾಗು ತಡೆಗಟ್ಟುವ ಹಿನ್ನಲೆ ಪೊಲೀಸ್ ಕಾನ್ಸ್ಟೇಬಲ್ ಸತೀಶ್ ಚಂದ್ರ ಅವರನ್ನ ನೇಮಕ ಮಾಡಲಾಗಿತ್ತು. ಹೀಗಾಗಿ   ಗೋಲ್ ಗುಂಬಜ್ ರೈಲಿನಲ್ಲಿ ಬೀಟ್ ಮಾಡುವ ಸಂದರ್ಭದಲ್ಲಿ ಎಸ್ 5 ಬೋಗಿ ಬಳಿ ಇರುವ ಶೌಚಾಲಯದ ಬಳಿ ಇರುವ ರೈಲ್ವೇ ಫುಟ್ ಬೋರ್ಡ್ ನಲ್ಲಿ ಈ ಆರು ಜನ ಪುಂಡರು ಸಿಗರೇಟ್ ಸೇದುತ್ತಾ, ಜೋರಾಗಿ ಕೂಗಾಡುತ್ತಾ ಅಸಭ್ಯವಾದ ಶಬ್ಧಗಳಿಂದ ಮಾತನಾಡಿಕೊಳ್ತಿದ್ದರು. 

ಇದನ್ನೂ ಓದಿ:ಡ್ರೈವರ್ & ಟೆಕ್ನಿಷಿಯನ್ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ

ಇವರ ಮಾತುಗಳು ಶೌಚಾಲಯಕ್ಕೆ ಹೋಗುವ ಪ್ರಯಾಣಿಕರಿಗೂ ಕೂಡ ಮುಜುಗರ ತರುವಂತಹದ್ದಾಗಿತ್ತು. ಇದನ್ನ ಗಮನಿಸಿದ ಸತೀಶ್ ಚಂದ್ರ ತಾನು ಪೊಲೀಸ್ ಎಂದು ಪರಿಚಯಿಸಿಕೊಂಡು ಬುದ್ದಿವಾದ ಹೇಳಲು ಹೋಗಿದ್ದರು. ಆದರೆ ಪೊಲೀಸ್ ಎಂದು ರೆಸ್ಪೆಕ್ಟ್ ಕೂಡ ಕೊಡದೆ ಏಕವಚನದಲ್ಲಿ ಬೈಯಲು ಶುರುಮಾಡಿದ್ದರು.  

ಹೀಗಾಗಿ ಮದ್ದೂರು ರೈಲ್ವೇ ನಿಲ್ದಾಣದ ಬಳಿ ಇವರನ್ನ ವಶಕ್ಕೆ ಪಡೆಯಲು ಮುಂದಾದಾಗ ಆರು ಜನರಲ್ಲಿ ಒಬ್ಬ ಚಾಕುವಿನಿಂದ ಸತೀಶ್ ಚಂದ್ರ ಬೆನ್ನಿಗೆ ಇರಿದಿದ್ದ. ಆದರೂ ಸತೀಶ್ ಇಬ್ಬರನ್ನ ಹಿಡಿದು ವಶಕ್ಕೆ ಪಡೆದಿದ್ದರು. ನಂತರ ಮಂಡ್ಯ ಸ್ಟೇಷನ್ ಮಾಸ್ಟರ್ ಗೆ ವಿಚಾರ ತಿಳಿಸಿ ಮಂಡ್ಯ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದರು. ತಕ್ಷಣ ಅಲರ್ಟ್ ಆದ ಪೊಲೀಸರು ಎಸ್ಕೇಪ್ ಆಗಿದ್ದ ನಾಲ್ವರನ್ನ 24 ಗಂಟೆಯಲ್ಲಿ ಬಂಧಿಸಿ ಎಳೆತಂದಿದ್ದಾರೆ. ಬಂಧಿತರು ಸ್ಲಂ ನಿವಾಸಿಗಳಾಗಿದ್ದು, ಹೂ ಮಾರುವ ಹಾಗು ಗ್ಲಾಸ್ ಅನ್ಲೋಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಸಂಬಂಧ ರೈಲ್ಚೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News