PSI recruitment scam: ಅಮೃತ್ ಪೌಲ್ ಆಸ್ತಿ ಎಷ್ಟಿದೆ? ಇಲ್ಲಿದೆ ನೋಡಿ ಡಿಟೇಲ್ಸ್

ಚಿಕ್ಕಬಳ್ಳಾಪುರದ ನಂದಿ ಹೋಬಳಿಯ ಹೊಸಹುಡ್ಯದಲ್ಲಿ ಫಾರ್ಮ್​​​ಹೌಸ್, ಸರ್ವೇ ನಂಬರ್ 247ರಲ್ಲಿ ಫಾರ್ಮ್​​​ಹೌಸ್, 4 ಎಕರೆ ಭೂಮಿಯು ಪೌಲ್ ತಂದೆ ನೇತಾರಾಮ್ ಹೆಸರಲ್ಲಿ ನೋಂದಣಿಯಾಗಿದೆ.

Written by - VISHWANATH HARIHARA | Edited by - Puttaraj K Alur | Last Updated : Jul 16, 2022, 12:50 PM IST
  • ಐಪಿಎಸ್ ಅಧಿಕಾರಿ ಅಮೃತ್ ಪೌಲ್​ ಆಸ್ತಿ ವಿವರ ಕೆದಕಿದ ಸಿಐಡಿ ಅಧಿಕಾರಿಗಳಿಗೆ ಶಾಕ್
  • ಅಮೃತ್ ಪೌಲ್ ತಂದೆ ನೇತಾರಾಮ್ ಬನ್ಸಾಲ್ ಹೆಸರಿನಲ್ಲಿ ಭಾರೀ ಪ್ರಮಾಣದ ಆಸ್ತಿ ಪತ್ತೆ
  • ಕೇಂದ್ರ ವಿಭಾಗದ ಐಜಿಪಿ ಆಗಿದ್ದಾಗ ಕೋಟಿ ಕೋಟಿ ಆಸ್ತಿ ಗಳಿಸಿರುವ ಅಮೃತ್ ಪೌಲ್
PSI recruitment scam: ಅಮೃತ್ ಪೌಲ್ ಆಸ್ತಿ ಎಷ್ಟಿದೆ? ಇಲ್ಲಿದೆ ನೋಡಿ ಡಿಟೇಲ್ಸ್ title=
ಅಮೃತ್ ಪೌಲ್ ಆಸ್ತಿ ಎಷ್ಟಿದೆ?

ಬೆಂಗಳೂರು: 545 ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನವಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್​ ಆಸ್ತಿ ವಿವರ ಕೆದಕಿದ ಸಿಐಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.‌ ಅಕ್ರಮ ಹಣದಲ್ಲಿಯೇ ಅಮೃತ್ ಪೌಲ್ ಜಮೀನು ಖರೀದಿಯಲ್ಲಿ ಬ್ಯುಸಿಯಾಗಿದ್ದರು ಹಾಗೂ ತಂದೆ ಹೆಸರಲ್ಲಿ ಸಾಕಷ್ಟು ಜಮೀನು ಖರೀದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಅಮೃತ್ ಪೌಲ್ ತಂದೆ ನೇತಾರಾಮ್ ಬನ್ಸಾಲ್ ಹೆಸರಿನಲ್ಲಿ ಭಾರೀ ಪ್ರಮಾಣದ ಆಸ್ತಿ ಇರುವುದು ಪತ್ತೆಯಾಗಿದೆ. ಕೇಂದ್ರ ವಿಭಾಗದ ಐಜಿಪಿ ಆಗಿದ್ದಾಗ ಕೋಟಿ ಕೋಟಿ ಆಸ್ತಿಯನ್ನು ಪೌಲ್ ಗಳಿಸಿದ್ದಾರೆ ಎನ್ನಲಾಗಿದೆ. ಚಿಕ್ಕಬಳ್ಳಾಪುರದ ನಂದಿ ಹೋಬಳಿಯ ಹೊಸಹುಡ್ಯದಲ್ಲಿ ಫಾರ್ಮ್​​​ಹೌಸ್, ಸರ್ವೇ ನಂಬರ್ 247ರಲ್ಲಿ ಫಾರ್ಮ್​​​ಹೌಸ್, 4 ಎಕರೆ ಭೂಮಿಯು ಪೌಲ್ ತಂದೆ ನೇತಾರಾಮ್ ಹೆಸರಲ್ಲಿ ನೋಂದಣಿಯಾಗಿದೆ. ಫಾರ್ಮ್​​​ ಹೌಸ್​ ಸುತ್ತಮುತ್ತಲ 8 ಎಕರೆ ಭೂಮಿಯನ್ನು ಇತ್ತೀಚೆಗೆ ಪೌಲ್ ಖರೀದಿಸಿದ್ದಾರೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ಅಪಘಾತದಲ್ಲಿ ತಂದೆ-ತಾಯಿ ಕಳೆದುಕೊಂಡು ಮಕ್ಕಳು ಅನಾಥ:ಮಿಡಿಯಿತು ಪೊಲೀಸರ ಮನ..!

ಶಿಡ್ಲಘಟ್ಟ‌ ಬಳಿಯ ನೆಲಪ್ಪನಹಳ್ಳಿ ಬಳಿ 8 ಎಕರೆ 29 ಗುಂಟೆ, ನೆಲಪ್ಪನಹಳ್ಳಿ ಸರ್ವೇ ನಂಬರ್ 49ರಲ್ಲಿ 4 ಎಕರೆ 39 ಗುಂಟೆ ಜಾಗವನ್ನು ಪೌಲ್ ತಂದೆ ಕೊಂಡುಕೊಂಡಿದ್ದಾರೆ ಎನ್ನಲಾಗಿದೆ. ಸರ್ವೇ ನಂಬರ್ 50ರಲ್ಲಿ 3 ಎಕರೆ 30 ಗುಂಟೆ ಜಾಗ ಪೌಲ್ ತಂದೆ ಹೆಸರಲ್ಲಿದೆ. ಈ ಎಲ್ಲಾ ಆಸ್ತಿ ವಿವರವನ್ನು ನೋಡಿ ಸಿಐಡಿ ತನಿಖಾ ತಂಡ ದಂಗಾಗಿದೆ. ಸದ್ಯ ಸಿಐಡಿ ಚಾರ್ಜ್​​ ಶೀಟ್​ನಲ್ಲೂ ಅಕ್ರಮ ಆಸ್ತಿ ವಿವರ ಉಲ್ಲೇಖಿಸಲು ಸಜ್ಜಾಗಿದೆ.

ಈ ಮಧ್ಯೆ ಸಿಐಡಿ ವಿಚಾರಣೆ ವೇಳೆ ಅಮೃತ್​ ಪೌಲ್​ ಹೆಂಡತಿ, ಮಕ್ಕಳನ್ನು ನೋಡಬೇಕು. ಮನೆ ಊಟ ಕೊಡಿ ಎಂದು ಸಿಐಡಿಗೆ ಮನವಿ ಮಾಡಿದ್ದಾರಂತೆ‌. ಇನ್ನೂ ಪೌಲ್ ಆಸ್ತಿ ವಿವರ ಸದ್ಯದ ಮಟ್ಟಿಗೆ ಇಷ್ಟಿದೆ. ಇನ್ನೂ ಸಿಐಡಿ ಅಧಿಕಾರಿಗಳು ಇನ್ನೇಷ್ಟೂ ಆಸ್ತಿ ಪತ್ತೆಹಚ್ಚುತ್ತಾರೋ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ: ವೀಕ್ಎಂಡ್ ಕಿಕ್ ಏರಿಸಬೇಕಿದ್ದ ಗಾಂಜಾ ಸೀಜ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News