Bangalore Crime : ದುಡಿದ ಸಂಬಳ ಕೇಳಿದ್ದಕ್ಕೆ ತಾಯಿ ಸಮಾನಳಾದ ವೃದ್ಧೆಗೆ ಒದ್ದ ಪಾಪಿ!

ತಾಯಿಯ ಸಮಾನವಾದ ವೃದ್ಧೆಗೆ ಸಂಬಳ ಕೇಳಿದಳು ಎಂಬ ಕಾರಣಕ್ಕೆ ಸ್ಪಾ ಮಾಲೀಕನೊಬ್ಬ ಕಾಲಿನಿಂದ ಜಾಡಿಸಿ ಒದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಕ್ಕೆ ಬಾರಿಸಿರುವ ಘಟನೆ ಬೆಳಕಿಗೆ ಬಂದಿದೆ. 

Written by - VISHWANATH HARIHARA | Last Updated : Jul 24, 2022, 03:05 PM IST
  • ತಾಯಿಯ ಸಮಾನವಾದ ವೃದ್ಧೆ
  • ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಕ್ಕೆ ಬಾರಿಸಿರುವ ಘಟನೆ
  • ಮನೋಜ್ ಅವಾಚ್ಯ ಶಬ್ದಗಳಿಂದ ಬೈದು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ.
Bangalore Crime : ದುಡಿದ ಸಂಬಳ ಕೇಳಿದ್ದಕ್ಕೆ ತಾಯಿ ಸಮಾನಳಾದ ವೃದ್ಧೆಗೆ ಒದ್ದ ಪಾಪಿ! title=

ಬೆಂಗಳೂರು : ತಾಯಿಯ ಸಮಾನವಾದ ವೃದ್ಧೆಗೆ ಸಂಬಳ ಕೇಳಿದಳು ಎಂಬ ಕಾರಣಕ್ಕೆ ಸ್ಪಾ ಮಾಲೀಕನೊಬ್ಬ ಕಾಲಿನಿಂದ ಜಾಡಿಸಿ ಒದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಕ್ಕೆ ಬಾರಿಸಿರುವ ಘಟನೆ ಬೆಳಕಿಗೆ ಬಂದಿದೆ. 

ಮನೋಜ್ ಎಂಬಾತ ನಡೆಸುತ್ತಿದ್ದ ಸ್ಪಾನಲ್ಲಿ ಲಕ್ಷ್ಮಮ್ಮ ಎನ್ನುವವರು ಕೆಲಸ ಮಾಡುತ್ತಿದ್ದರು. ಹಣಕಾಸಿನ ಸಮಸ್ಯೆಯಿಂದ ಕುಮಾರಸ್ವಾಮಿ ಲೇಔಟ್ ಬಳಿಯಿರುವ ಮನೋಜ್ ಮನೆ ಬಳಿ ತೆರಳಿ ಸಾರ್ ನನಗೆ ಸ್ವಲ್ಪ ದುಡ್ಡು ಬೇಕು, ದಯವಿಟ್ಟು ಕೊಡಿ ಸಾರ್ ಎಂದು ಕೇಳಿದ್ದಾರೆ. ಆಗ ಮನೋಜ್ ಅವಾಚ್ಯ ಶಬ್ದಗಳಿಂದ ಬೈದು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ.

ಇದನ್ನೂ ಓದಿ : Diesel Tanker-Bike Accident : ಬೈಕ್ ಡಿಕ್ಕಿಗೆ ಹೊತ್ತಿ ಉರಿದ ಡಿಸೇಲ್ ಟ್ಯಾಂಕರ್ : ಸುಟ್ಟು ಕರಕಲಾದ ಬೈಕ್ ಸವಾರ

ಲಕ್ಷ್ಮಮ್ಮ ಮನೋಜ್ ಬಳಿ ಹಣ ಕೇಳಿದಾಗ ಮನೋಜ್ ಏಕಾಏಕಿ ಲಕ್ಷ್ಮಮ್ಮನವರಿಗೆ ಕಾಲಿನಿಂದ ಒದ್ದು ಕಪಾಳಕ್ಕೆ ಹೊಡೆದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಘಟನೆ ಸಂಬಂಧ ವೃದ್ಧೆ ಲಕ್ಷ್ಮಮ್ಮ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಲಿಸರು ಆರೋಪಿ ಮನೋಜನನ್ನ ಬಂಧಿಸಲು ಮುಂದಾಗಿದ್ದಾರೆ‌.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News