ಬೆಂಗಳೂರು: ಡಾರ್ಕ್ ನೆಟ್ ವೆಬ್ ಸೈಟ್ ನಲ್ಲಿ ಮಾದಕ ವಸ್ತು ಖರೀದಿಸಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗನ್ನು ಸಿಸಿಬಿಯ ಮಾದಕ ದ್ಯವ್ಯ ನಿಗ್ರಹ ದಳ ಬಂಧಿಸಿದೆ.
ನಿರುದ್ಯೋಗಿಗಳಿಂದ ಪ್ಯಾಕ್ ಮಾಡಿಸಿ ಡೊಂಜೊ ಹಾಗೂ ಪೋರ್ಟರ್ ಸರ್ವಿಸ್ ಅಪ್ಲಿಕೇಷನ್ ಗಳ ಬಳಸಿಕೊಂಡು ಕೊರಿಯರ್ ಮೂಲಕ ಗ್ರಾಹಕರಿಗೆ ಡ್ರಗ್ಸ್ ಸರಬರಾಜು ಮಾಡಲಾಗುತ್ತಿತ್ತು.ಈ ಹಿನ್ನೆಲೆ ಕಾರ್ಯಾಚರಣೆ ನಡೆಸಿದ ಸಿಸಿಬಿ ವೈಟ್ ಫೀಲ್ಡ್ ಪಿಜಿಯಲ್ಲಿ ವಾಸವಾಗಿದ್ದ ದೆಹಲಿ ಮೂಲದ ವಿಶಾಲ್ ಕುಮಾರ್, ಭೀಮಾಂಶು ಠಾಕೂರ್, ಸಾಗರ್, ಮಹಾಬಲಿಸಿಂಗ್ ಹಾಗೂ ಸುಬರ್ಜಿತ್ ಸಿಂಗ್ ಬಂಧಿಸಿದ್ದಾರೆ.
ಇದನ್ನೂ ಓದಿ: Monkeypox: ಕರ್ನಾಟಕದ ಗಡಿ ರಾಜ್ಯದಲ್ಲಿ ಮಂಕಿಪಾಕ್ಸ್‌ಗೆ ಓರ್ವ ಬಲಿ?
ಆರೋಪಿಗಳಿಂದ 2 ಕೋಟಿ ಮೌಲ್ಯದ ನಿಷೇಧಿತ ಎಂಡಿಎಂಎ ಕ್ರಿಸ್ಟಲ್, ಎಲ್ಎಸ್ ಡಿ ಸ್ಟ್ರಿಪ್ಸ್, ಕೊಕೇನ್, ಹ್ಯಾಶಿಶ್ ಆಯಿಲ್, ಚರಸ್ ಹಾಗೂ ಗಾಂಜಾ ಜಪ್ತಿ ಮಾಡಲಾಗಿದೆ. ಹಲವು ವರ್ಷಗಳಿಂದ ನಗರದಲ್ಲಿ ವಾಸ್ತವ್ಯ ಹೂಡಿದ್ದ ಆರೋಪಿಗಳು, ತಂತ್ರಜ್ಞಾನ ಹಾಗೂ ಸಾಫ್ಟ್ ವೇರ್ ಅಪ್ಲಿಕೇಷನ್ ಗಳನ್ನ ದುರ್ಬಳಕೆ ಮಾಡಿಕೊಂಡು ದಂಧೆ ನಡೆಸುತ್ತಿದ್ದರು.
ಇದನ್ನೂ ಓದಿ: ಧಾರಾವಾಹಿ ಶೂಟಿಂಗ್ ಸೆಟ್‌ನಲ್ಲಿ ನಟ ಚಂದನ್‌ಗೆ ಕಪಾಳ ಮೋಕ್ಷ..!
ಡಾರ್ಕ್ ನೆಟ್ ವೆಬ್ ಮೂಲಕ ಮಾದಕ ವಸ್ತುಗಳನ್ನು ಕ್ರಿಪ್ಟೊ ಕರೆನ್ಸಿ ಮೂಲಕ ಖರೀದಿಸಿ ಶೇಖರಿಸುತ್ತಿದ್ದರು. ಬೆಂಗಳೂರು, ಚೆನ್ನೈ, ಮುಂಬೈ ಹಾಗೂ ಚೆನ್ನೈ ಸೇರಿದಂತೆ ವಿವಿಧ ಕಡೆಗಳಲ್ಲಿ ಕೊಠಡಿಗಳನ್ನ ಬಾಡಿಗೆ ಪಡೆದು ಡ್ರಗ್ಸ್ ಶೇಖರಿಸಿಡುತ್ತಿದ್ದರು.ನಿರುದ್ಯೋಗಿ ಯುವಕರನ್ನು ಹಣದ ಆಮಿಷವೊಡ್ಡಿ ತಮ್ಮತ್ತ ಸೆಳೆದುಕೊಂಡು ಕೊರಿಯರ್ ಮೂಲಕ ಏಜೆಂಟ್ ಗಳು ವಾಸವಿದ್ದ ಪಿಜಿಗಳಿಗೆ ಡ್ರಗ್ಸ್ ತಲುಪಿಸುತ್ತಿದ್ದರು.
ಟೆಲಿಗ್ರಾಂ ಆ್ಯಪ್ ನಲ್ಲಿ ಆರ್ಡರ್ ಪಡೆದು ವ್ಯವಸ್ಥಿತವಾಗಿ ಪ್ಯಾಕ್ ಮಾಡಿ ಡೊಂಜೊ ಹಾಗೂ ಪೋರ್ಟರ್ ಅಪ್ಲಿಕೇಷನ್ ಮೂಲಕ ಗ್ರಾಹಕರ ವಿಳಾಸಗಳಿಗೆ ಕೊರಿಯರ್ ಮಾಡುತ್ತಿದ್ದರು. ಆನ್ ಲೈನ್ ಮುಖಾಂತರ ಹಣದ ವ್ಯವಹಾರ ನಡೆಸುತ್ತಿದ್ದರು. ಯಾರಿಗೂ ಅನುಮಾನ ಬರದಂತೆ ಕೊರಿಯರ್ ಕವರ್ ಮೇಲೆ ಬರ್ತ್ ಡೇ ಗಿಫ್ಟ್, ಆಯುರ್ವೇದ ಔಷಧಿ, ಎಮರ್ಜಿನ್ಸಿ ಕಿಟ್ ಎಂದು ಹೆಸರು ನಮೂದಿಸುತ್ತಿದ್ದರು. ಸದ್ಯ ಐವರು ಆರೋಪಿಗಳ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.