close

News WrapGet Handpicked Stories from our editors directly to your mailbox

ಇಂದು ಛತ್ರಪತಿ ಶಿವಾಜಿ ಪುಣ್ಯಸ್ಮರಣೆ; ನೀವು ತಿಳಿಯಲೇಬೇಕಾದ 6 ಕುತೂಹಲಕಾರಿ ಸಂಗತಿಗಳು

ಸುಮಾರು 338 ವರ್ಷಗಳ ಹಿಂದೆ, ಈ ದಿನ, ಅಂದರೆ ಏಪ್ರಿಲ್ 3, 1680ರಲ್ಲಿ ಮರಾಠ ದೊರೆ  ಛತ್ರಪತಿ ಶಿವಾಜಿ ಎಂದೇ ಹೆಸರಾದ ಶಿವಾಜಿ ಭೋಂಸ್ಲೆ ಮರಣಹೊಂದಿದ ದಿನ. ಇಂದು ದೇಶದೆಲ್ಲೆಡೆ ಶಿವಾಜಿಯ ಪುಣ್ಯ ಸ್ಮರಣೆ ಮಾಡಲಾಗುತ್ತಿದೆ. 

Updated: Apr 3, 2018 , 01:39 PM IST
ಇಂದು ಛತ್ರಪತಿ ಶಿವಾಜಿ ಪುಣ್ಯಸ್ಮರಣೆ; ನೀವು ತಿಳಿಯಲೇಬೇಕಾದ 6 ಕುತೂಹಲಕಾರಿ ಸಂಗತಿಗಳು

ನವದೆಹಲಿ : ಸುಮಾರು 338 ವರ್ಷಗಳ ಹಿಂದೆ, ಈ ದಿನ, ಅಂದರೆ ಏಪ್ರಿಲ್ 3, 1680ರಲ್ಲಿ ಮರಾಠ ದೊರೆ  ಛತ್ರಪತಿ ಶಿವಾಜಿ ಎಂದೇ ಹೆಸರಾದ ಶಿವಾಜಿ ಭೋಂಸ್ಲೆ ಮರಣಹೊಂದಿದ ದಿನ. ಇಂದು ದೇಶದೆಲ್ಲೆಡೆ ಶಿವಾಜಿಯ ಪುಣ್ಯ ಸ್ಮರಣೆ ಮಾಡಲಾಗುತ್ತಿದೆ. ಮರಾಠ ದೊರೆಯಾದ ಛತ್ರಪತಿ ಶಿವಾಜಿಯ ತನ್ನ ಆಡಳಿತಾವಧಿಯಲ್ಲಿ ಮೊಘಲರನ್ನೂ ಒಳಗೊಂಡಂತೆ ಅನೇಕ ವಿದೇಶಿ ಆಕ್ರಮಣಕಾರರ ವಿರುದ್ಧ ಹೋರಾಡಿ ಉತ್ತಮವಾಗಿ ರಾಜ್ಯ ಆಳಿದ್ದರು. ಅಂತಹ ಮಹಾನ್ ನಾಯಕನ ಪುಣ್ಯಸ್ಮರಣೆ ಸಂದರ್ಭದಲ್ಲಿ ಈ ರಾಜನ ಕುರಿತು ತಿಳಿಯಲೇಬೇಕಾದ 6 ಕುತೂಹಲಕಾರಿ ಸಂಗತಿಗಳು ಇಲ್ಲಿವೆ:

1. ಛತ್ರಪತಿ ಶಿವಾಜಿ ಹುಟ್ಟಿದ್ದು ಫೆಬ್ರವರಿ 19, 1630ರಲ್ಲಿ. 13 ವರ್ಷದವರಿದ್ದಾಗಲೇ ಖಡ್ಗ ಹಿಡಿದು ಹೊರಟಂತಹ ಮ‌ಹಾನ್ ದೇಶಭಕ್ತ ಶಿವಾಜಿ. ಇಂದು ದಕ್ಷಿಣ ಭಾರತದಲ್ಲಿ ದೇವಾಯಗಳು ಇನ್ನೂ ಉಳಿದಿವೆ ಎಂದರೆ ಅದಕ್ಕೆ ಮುಖ್ಯ ಕಾರಣ ಶಿವಾಜಿ. 

2. ಛತ್ರಪತಿ ಶಿವಾಜಿ ಹನುಮಾನ್ ಜಯಂತಿಯ ಮುನ್ನಾ ದಿನ ಸಾವನ್ನಪ್ಪಿದರು ಎಂದು ಇತಿಹಾಸ ಹೇಳುತ್ತದೆ. ಆದರೆ ಸಂಶೋಧನಾಕಾರರ ಪ್ರಕಾರ, ಮುಸ್ಲಿಂ ಮುಖಂಡರನ್ನು ವಿರೋಧಿಸಿ ಶಾಪಗ್ರಸ್ಥಕ್ಕೆ ಒಳಗಾಗಿದ್ದ ಶಿವಾಜಿ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದರು ಎನ್ನಲಾಗಿದೆ. ಮತ್ತೊಂದು ವದಂತಿಯು, ಶಿವಾಜಿಯ ಎರಡನೇ ಪತ್ನಿ ಸೋಯಾರಾಬಾಯ್ ತನ್ನ 10 ವರ್ಷ ವಯಸ್ಸಿನ ಮಗನಾದ ರಾಜರಾಮನನ್ನು ಉತ್ತರಾಧಿಕಾರಿಯಾಗಿ ಮಾಡಲು ಶಿವಾಜಿಗೆ ವಿಷ ಹಾಕಿ ಕೊಂದಳು ಎಂದು ಹೇಳುತ್ತದೆ.

3. ಹಲವು ನಂಬಿಕೆಗಳು ಮತ್ತು ಇತಿಹಾಸದ ಪ್ರಕಾರ ಶಿವನ ಹೆಸರಿನಿದ ಇವರಿಗೆ ಶಿವಾಜಿ ಎಂಬ ಹೆಸರಿಡಲಾಗಿದೆ ಎನ್ನಲಾಗಿದೆ. ಆದರೆ ತಜ್ಞರ ಪ್ರಕಾರ, ಸ್ಥಳೀಯ ದೇವತೆಯಾದ ಶಿವೈ ಎಂಬ ಹೆಸರಿನಿಂದ ಶಿವಾಜಿ ಎಂಬ ಹೆಸರು ಇಡಲಾಗಿದೆ ಎಂದಿದ್ದಾರೆ. 

4. ಅತೀ ಬುದ್ಧಿವಂತ ಹಾಗೂ ಆಕ್ರಮಣಕಾರಿ ಯೋಧನಾಗಿ, ನಂತರ ರಾಜನಾದ ಶಿವಾಜಿಗೆ ಓದು, ಬರಹ ತಿಳಿದಿರಲಿಲ್ಲ. ಆದಾಗ್ಯೂ, ಅವರು ರಾಮಾಯಣ ಮತ್ತು ಮಹಾಭಾರತ ಸೇರಿದಂತೆ ಅನೇಕ ಧಾರ್ಮಿಕ ಗ್ರಂಥಗಳ ಆಳವಾದ ಜ್ಞಾನವನ್ನು ಹೊಂದಿದ್ದರು.

5. ಶಿವಾಜಿ ಬಹುಮುಖ್ಯವಾಗಿ ತಪ್ಪಿಸಿಕೊಳ್ಳುವಲ್ಲಿ ಬಹಳ ನಿಪುಣರಾಗಿದ್ದರು. ಒಮ್ಮೆ ವಿರೋಧಿಗಳು ಆಕ್ರಮಣ ನಡೆಸಿದಾಗ ಸಿಹಿತಿಂಡಿಗಳು ಮತ್ತು ಹಣ್ಣುಗಳ ಪೆಟ್ಟಿಗೆಗಳಲ್ಲಿ ಅಡಗಿಕೊಂಡು ಮಗನೊಂದಿಗೆ ತಪ್ಪಿಸಿಕೊಂಡಿದ್ದರು. ಮತ್ತೊಂದು ಬಾರಿ ಸಾಧುಗಳಾಗಿ ವೇಷ ಧರಿಸಿದರು. ಸಿದ್ಧಿ ಜೌಹಾರ್ನ ಸೈನ್ಯದಿಂದ ಪನ್ಹಾಲಾ ಕೋಟೆಯಲ್ಲಿ ಸಿಕ್ಕಿಹಾಕಿಕೊಂಡಾಗ, ಅವರು ಪಾಲ್ಖಿಗಳಲ್ಲಿ ತಪ್ಪಿಸಿಕೊಳ್ಳುವ ಉಪಾಯ ಮಾಡಿದ್ದರು.

6. ಓರ್ವ ಜಾತ್ಯತೀತ ದೊರೆಯಾಗಿದ್ದ ಶಿವಾಜಿ ಸೈನ್ಯದಲ್ಲಿ ಮತ್ತು ಕಚೇರಿಗಳಲ್ಲಿ ಅನೇಕ ಮುಸ್ಲಿಮರೂ  ಇದ್ದರು. ಮಹಿಳಾ ಹಕ್ಕುಗಳನ್ನು ಎತ್ತಿಹಿಡಿಯುವಲ್ಲಿ ಶಿವಾಜಿ ಪ್ರಮುಖರಾಗಿದ್ದರು. ಮಹಿಳೆಯರಿಗೆ ಗೌರವ ದೊರಕಿಸಿಕೊಡಲು, ಹಲವು ನಿಯಮಗಳನ್ನು ಜಾರಿಗೊಳಿಸಿದರು. ಮಹಿಳೆಯರನ್ನು ಅವಮಾನಿಸುವಂತಹ ಅಪರಾಧವನ್ನು ಯಾರೇ ಎಸಗಿದರೂ ಅವರನ್ನು ತೀವ್ರ ಶಿಕ್ಷೆಗೆ ಗುರಿಪಡಿಸಲಾಗುತ್ತಿತ್ತು.