ನವದೆಹಲಿ: ಜ್ಯೋತಿಷ್ಯದ ಪ್ರಕಾರ, ಗ್ರಹಗಳು ನಮ್ಮ ಜೀವನದ ಮೇಲೆ ಗಾಢ ಪ್ರಭಾವ ಬೀರುತ್ತವೆ. ಗ್ರಹಗಳ ಬದಲಾಗುತ್ತಿರುವ ಚಲನೆಯೊಂದಿಗೆ ನಮ್ಮ ಜೀವನವು ಬದಲಾಗುತ್ತದೆ. ಸೆಪ್ಟೆಂಬರ್ನಲ್ಲಿ, ಏಳು ಗ್ರಹಗಳ ಚಲನೆ ಬದಲಾಗಲಿದೆ. ಗುರು, ಸೂರ್ಯ, ರಾಹು-ಕೇತು, ಶುಕ್ರ, ಬುಧ ಮತ್ತು ಮಂಗಳ ತಮ್ಮತಮ್ಮ ರಾಶಿಗಳನ್ನು ಬದಲಾಯಿಸುತ್ತಿವೆ.
ಗ್ರಹಗಳ ಈ ಬದಲಾಗುತ್ತಿರುವ ಚಲನೆಯು ವಿವಿಧ ರಾಶಿಗಳ ಜನರ ಮೇಲೂ ಪರಿಣಾಮ ಬೀರಲಿದೆ. ಯಾವ ಗ್ರಹವು ಯಾವ ರಾಶಿಯನ್ನು ಬದಲಾಯಿಸಲಿದೆ ಹಾಗೂ ಆ ಗ್ರಹದ ಪ್ರಭಾವ ರಾಶಿಯ ಮೇಲೆ ಹೇಗೆ ಇರಲಿದೆ ಎಂಬುದನ್ನೊಮ್ಮೆ ತಿಳಿಯೋಣ.
ಸೆಪ್ಟೆಂಬರ್ 1 ರಂದು ಶುಕ್ರ ಕರ್ಕ ರಾಶಿಯಲ್ಲಿ ಗೋಚರಿಸಲಿದ್ದಾನೆ. ಸೆಪ್ಟೆಂಬರ್ 28 ರವರೆಗೆ ಶುಕ್ರ ಕರ್ಕರಾಶಿಯಲ್ಲಿಯೇ ವಿರಾಜಮಾನನಾಗಿರಲಿದ್ದಾನೆ. ಆದರೆ ಕರ್ಕರಾಶಿಗೆ ಶುಕ್ರ ಅಷ್ಟೊಂದು ಶುಭವಲ್ಲ ಎನ್ನಲಾಗುತ್ತದೆ. ಇದಕ್ಕೆ ವಿರುದ್ಧವಾದ ಪರಿಣಾಮವನ್ನು ಇತರ ರಾಶಿಗಳ ಮೇಲೂ ಕೂಡ ನೀವು ಗಮನಿಸಬಹುದು.
ಸೆಪ್ಟೆಂಬರ್ 2 ರಂದು ಕನ್ಯಾ ರಾಶಿಯಲ್ಲಿ ಬುಧ ಗ್ರಹ ಸಾಗಲಿದೆ. ಕನ್ಯಾ ರಾಶಿಯಲ್ಲಿ ಬುಧ ಚಲನೆ ಕೆಲ ರಾಶಿಗಳಿಗೆ ಶುಭ ಸಂಕೇತವಾಗಿದೆ ಎಂದು ನಂಬಲಾಗಿದೆ. ಇನ್ನೊಂದೆಡೆ ಬುಧ ಸೆಪ್ಟೆಂಬರ್ 22 ರಂದು ತುಲಾ ರಾಶಿಗೆ ಪ್ರವೇಶ ನೀಡಲಿದ್ದಾನೆ. ತುಲಾ ರಾಶಿಯ ಬುಧದ ಪ್ರವೇಶವು ಎಲ್ಲಾ ರಾಶಿಗಳ ಮೇಲೆ ಮಿಶ್ರ ಪರಿಣಾಮವನ್ನು ಬೀರಲಿದ್ದಾನೆ.
ಸೆಪ್ಟೆಂಬರ್ 10 ರಿಂದ ಮಂಗಳ ಗ್ರಹವು ಮೇಷ ರಾಶಿಯಲ್ಲಿ ವಕ್ರ ನಡೆಯಲ್ಲಿ ಸಾಗಲಿದೆ. ನವೆಂಬರ್ 14 ರ ಬಳಿಕ ಮಂಗಳ ಗ್ರಹ ಪುನಃ ಸರಿಯಾದ ದಿಕ್ಕಿನಲ್ಲಿ ಚಲಿಸಲಿದೆ. ಈ 66 ದಿನಗಳ ಮಂಗಳನ ಅಂಕುಡೊಂಕಾದ ಚಲನೆಯ ಪರಿಣಾಮವು ಕೆಲವು ರಾಶಿಗಳಿಗೆ ಉತ್ತಮವಾಗುವುದಿಲ್ಲ. ಕೆಲವು ರಾಶಿಗಳು ಇದರಿಂದ ಸಹ ಪ್ರಯೋಜನ ಕೂಡ ಪಡೆಯಲಿವೆ.
ಸೆಪ್ಟೆಂಬರ್ 13 ರಂದು, ಗುರು ತನ್ನ ರಾಶಿ ಧನು ರಾಶಿಯಲ್ಲಿ ನೇರ ಚಲನೆಯಲ್ಲಿ ಬರಲಿದ್ದಾನೆ. ಪರಿಣಾಮ ಅನೇಕ ರಾಶಿಗಳಿಗೆ ಶುಭವಾಗಲಿದೆ ಎಂದು ನಂಬಲಾಗಿದೆ.
ಸೆಪ್ಟೆಂಬರ್ 16 ರಂದು ಸೂರ್ಯ ಗ್ರಹವು ಸ್ವರಾಶಿಯಾದ ಸಿಂಹ ರಾಶಿಯನ್ನು ಬಿಟ್ಟು ಕನ್ಯಾರಾಶಿಗೆ ಪ್ರವೆಶಿಸಲಿದ್ದಾನೆ. ಅಕ್ಟೋಬರ್ 17 ರಂದು, ಸೂರ್ಯ ತನ್ನ ನೀಚ ರಾಶಿಯಾದ ತುಲಾ ರಾಶಿಗೆ ಪ್ರವೆಶಿಸಲಿದ್ದಾನೆ. ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಸೂರ್ಯನ ಚಲನೆಯ ಪರಿಣಾಮವು ಅಶುಭಕರ ಎನ್ನಲಾಗಿದೆ. ಆದರೂ, ಸೂರ್ಯನ ಶುಭ ಸ್ಥಿತಿಯನ್ನು ಅನುಭವಿಸುತ್ತಿರುವ ಜಾತಕದವರಿಗೆ ಇದು ಶುಭ ಸಂಕೇತ ಎಂದೂ ಕೂಡ ಹೇಳಲಾಗಿದೆ.
ಸೆಪ್ಟೆಂಬರ್ 23 ರಂದು ರಾಹು ಮಿಥುನ ರಾಶಿಯಿಂದ ವೃಷಭ ರಾಶಿಗೆ ಸಾಗಲಿದ್ದಾನೆ. ರಾಹು ಈ ರಾಶಿಚಕ್ರದಲ್ಲಿ 12 ಏಪ್ರಿಲ್ 2022 ರವರೆಗೆ ಉಳಿಯಲಿದ್ದಾನೆ. ರಾಹುವಿನ ಈ ರಾಶಿ ಪರಿವರ್ತನೆ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಗಾಢ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
ಸೆಪ್ಟೆಂಬರ್ 23 ರಂದು ಕೇತು ಧನು ರಾಶಿಯಿಂದ ವೃಶ್ಚಿಕ ರಾಶಿಗೆ ಚಲಿಸಲಿದ್ದಾನೆ. ಕೇತು ಈ ಚಲನೆ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರಲಿದೆ. ಈ ಪರಿಣಾಮವು ಶುಭ ಹಾಗೂ ಅಶುಭ ಎರಡೂ ರೀತಿಯದ್ದಾಗಿದೆ.