ಜಾರ್ಖಂಡ್ ದಲ್ಲಿ ತಲೆ ಎತ್ತಲಿದೆ ಜಗತ್ತಿನ ಅತಿ ಎತ್ತರದ ಬುದ್ದ ಸ್ತೂಪ!

    

Last Updated : Feb 20, 2018, 07:27 PM IST
ಜಾರ್ಖಂಡ್ ದಲ್ಲಿ ತಲೆ ಎತ್ತಲಿದೆ ಜಗತ್ತಿನ ಅತಿ ಎತ್ತರದ ಬುದ್ದ ಸ್ತೂಪ! title=
ಸಾಂದರ್ಭಿಕ ಚಿತ್ರ

ರಾಂಚಿ: ಜಗತ್ತಿನ ಅತಿ ಎತ್ತರದ ಸ್ತೂಪ ನಿರ್ಮಾಣಕ್ಕೆ ಜಾರ್ಖಂಡ ಸರ್ಕಾರ ಮುಂದಾಗಿದೆ.

ಈ ಕುರಿತಾಗಿ ಸೋಮವಾರದಂದು ಇತ್ಕೋರಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿರುವ ಜಾರ್ಖಂಡ ಮುಖ್ಯಮಂತ್ರಿ ರಘುಬರ್ ದಾಸ್, ಚಾತ್ರ ಜಿಲ್ಲೆಯು ಹಿಂದೂ, ಮುಸ್ಲಿಂ, ಜೈನರ ಸಂಗಮವಾಗಿದ್ದು, ಬರುವ ಮಾರ್ಚ್ ವೇಳೆಗೆ ಇಲ್ಲಿ ಜಗತ್ತಿನ ಅತಿ ಎತ್ತರದ ಸ್ತೂಪವನ್ನು ನಿರ್ಮಾಣ ಮಾಡುವ ವಿಚಾರವಾಗಿ ಮಾಸ್ಟರ್ ಯೋಜನೆಯೊಂದನ್ನು ರೂಪಿಸಲಾಗುವುದು. ಜುಲೈ ವೇಳೆಗೆ ಅದರ ಸಂಪೂರ್ಣ ವರದಿ ಸಿದ್ದವಾಗಲಿದೆ ಎಂದು ಅವರು ಹೇಳಿದರು. ಇದಕ್ಕಾಗಿ ಜಾರ್ಖಂಡ್ಸರ್ಕಾರ 600 ಕೋಟಿ ರೂಪಾಯಿಗಳನ್ನು ವ್ಯಯ ಮಾಡಲಿದೆ ಎಂದು ತಿಳಿದುಬಂದಿದೆ 

ಬಿಹಾರದ ಪೂರ್ವ ಚಂಪಾರಣ ಜಿಲ್ಲೆಯ ಕೇಸರಿಯಾದಲ್ಲಿ ಸಾಮ್ರಾಟ್ ಅಶೋಕ್ ಕಟ್ಟಿಸಿರುವ 104 ಅಡಿ ಎತ್ತರದ ಸ್ತೂಪವನ್ನು ಪ್ರಸ್ತುತ ಅತಿ ಎತ್ತರದ ಸ್ತೂಪ ಎಂದು ಹೇಳಲಾಗಿದೆ.

Trending News