ಆಸ್ಕರ್‌ ರೇಸ್‌ನಲ್ಲಿ ʼ12th ಫೇಲ್‌ʼ ಚಿತ್ರ: ಐಪಿಎಸ್‌ ಅಧಿಕಾರಿ ಜೀವನದ ಆಧಾರಿತ ಕಥೆ!

12th Fail: ಬಾಲಿವುಡ್‌ ನಟ ವಿಕ್ರಾಂತ್‌ ಮಾಸಿ ಹಾಗೂ ಮೇಧಾ ಶಂಕರ್‌ ಅಭಿನಯದ 12th ಫೇಲ್‌ ಚಿತ್ರ ಆಸ್ಕರ್‌ 2024ರ ನಾಮಿನೇಷನ್‌ ಪಟ್ಟಿಗೆ ಸೇರ್ಪಡೆಯಾಗಿದೆ.

Written by - Zee Kannada News Desk | Last Updated : Nov 26, 2023, 03:11 PM IST
  • ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ನಿಜ ಜೀವನದ ಕಥೆಯಾದ '12th ಫೇಲ್' ಸಿನಿಮಾ ಆಸ್ಕರ್ 2024 ಕ್ಕೆ ಸ್ವತಂತ್ರವಾಗಿ ನಾಮಿನೇಟ್ ಮಾಡಲಾಗಿದೆ.
  • '12th ಫೇಲ್' ಚಿತ್ರ 2023 ರ ಭಾರತೀಯ ಹಿಂದಿ ಭಾಷೆಯ ಬಯೋಪಿಕ್ ಆಗಿದ್ದು, ವಿಧು ವಿನೋದ್ ಚೋಪ್ರಾ ನಿರ್ಮಿಸಿದ್ದಾರೆ.
  • '12th ಫೇಲ್' ಚಿತ್ರವು ಅಕ್ಟೋಬರ್ 27 ರಂದು ಚಿತ್ರಮಂದಿರಗಳಿಗೆ ಬಿಡುಗಡೆಯಾಗಿ, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಸಿನಿಮಾ ರಿಲೀಸ್‌ ಆಗಿ ವಿಮರ್ಶಾತ್ಮಕ ಮೆಚ್ಚುಗೆ ಪಡೆಯಿತು.
ಆಸ್ಕರ್‌ ರೇಸ್‌ನಲ್ಲಿ ʼ12th ಫೇಲ್‌ʼ ಚಿತ್ರ: ಐಪಿಎಸ್‌ ಅಧಿಕಾರಿ ಜೀವನದ ಆಧಾರಿತ ಕಥೆ! title=

12th Fail Nominated For Oscars 2024: ನಿರ್ದೇಶನ ವಿಧು ವಿನೋದ್ ಚೋಪ್ರಾ ಡೈರೆಕ್ಷನ್‌ನ, ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ನಿಜ ಜೀವನದ ಕಥೆಯಾದ '12th ಫೇಲ್' ಸಿನಿಮಾ ಆಸ್ಕರ್ 2024 ಕ್ಕೆ ಸ್ವತಂತ್ರವಾಗಿ ನಾಮಿನೇಟ್ ಮಾಡಲಾಗಿದೆ ಎಂದು ನಟ ವಿಕ್ರಾಂತ್ ಮಾಸ್ಸಿ ಬಹಿರಂಗಪಡಿಸಿದ್ದಾರೆ. ನಟ ಆಜ್‌ತಕ್ 2023 ರ ಈವೆಂಟ್‌ನಲ್ಲಿ ಮಾತನಾಡುತ್ತಿದ್ದರು. 

'12th ಫೇಲ್' ಚಿತ್ರ 2023 ರ ಭಾರತೀಯ ಹಿಂದಿ ಭಾಷೆಯ ಬಯೋಪಿಕ್ ಆಗಿದ್ದು, ವಿಧು ವಿನೋದ್ ಚೋಪ್ರಾ ನಿರ್ಮಿಸಿ, ಬರೆದು ನಿರ್ದೇಶಿಸಿರಿವ ಈ ಸಿನಿಮಾ, ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಾಗಳು ತೀವ್ರ ಬಡತನವನ್ನು ಎದುರಿಸಿ ತಮ್ಮ ಕನಸನ್ನು ನನಸಾಗಿಸಿದ ಮನೋಜ್ ಕುಮಾರ್ ಶರ್ಮಾ ಅವರ ನಿಜ ಜೀವನ ಕಥೆಯನ್ನು ಆಧರಿಸಿದೆ. ಈ ಕಥೆ ಅನುರಾಗ್ ಪಾಠಕ್ ಅವರ 2019 ರ ಪುಸ್ತಕವನ್ನು ಆಧರಿಸಿದೆ.  

ಇದನ್ನೂ ಓದಿ: ಪತ್ರಕರ್ತರ 'ದಿ ಡಾರ್ಕ್ ವೆಬ್'ಗೆ ವಸಿಷ್ಠ ಸಿಂಹ ಸಾಥ್‌..! ಚಿತ್ರದ ಫಸ್ಟ್‌ ಲುಕ್‌ ಔಟ್‌

'12th ಫೇಲ್' ಚಿತ್ರವು ಅಕ್ಟೋಬರ್ 27 ರಂದು ಚಿತ್ರಮಂದಿರಗಳಿಗೆ ಬಿಡುಗಡೆಯಾಗಿ, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಸಿನಿಮಾ ರಿಲೀಸ್‌ ಆಗಿ ವಿಮರ್ಶಾತ್ಮಕ ಮೆಚ್ಚುಗೆ ಪಡೆಯಿತು. ಚಿತ್ರದಲ್ಲಿ ಮನೋಜ್ ಕುಮಾರ್ ಶರ್ಮಾ ಪಾತ್ರದಲ್ಲಿ ವಿಕ್ರಾಂತ್ ಮಾಸ್ಸಿ ನಟಿಸಿ, ಮೇಧಾ ಶಂಕರ್ ನಾಯಕಿಯಾಗಿ ನಟಿಸಿದ್ದಾರೆ. 20 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರವು 55 ಕೋಟಿ  ರೂಪಾಯಿ ಗಳಿಸಿತು.

ಆಸ್ಕರ್ 2024 ಎಮ್ಮಿ ಪ್ರಶಸ್ತಿ ವಿಜೇತ ಜಿಮ್ಮಿ ಕಿಮ್ಮೆಲ್ ಮುಂಬರುವ 2024 ರ ಆಸ್ಕರ್ ಸಮಾರಂಭದ ನಿರೂಪಕರಾಗಿದ್ದಾರೆ. ಮಾರ್ಚ್ 10, 2024 ರಂದು ಭಾನುವಾರ ಡಾಲ್ಬಿ ಥಿಯೇಟರ್‌ನಲ್ಲಿ 96 ನೇ ಆಸ್ಕರ್‌ಗಳು ನಡೆಯಲಿದ್ದು, ಈಗಾಗಲೇ ಭಾರತದಿಂದ ಮಲಯಾಳಂ ಸಿನಿಮಾ '2018' ಈಗಾಗಲೇ ಆಸ್ಕರ್‌ಗೆ ನಾಮನಿರ್ದೇಶನವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News