close

News WrapGet Handpicked Stories from our editors directly to your mailbox

ಇಂದಿನಿಂದ ರಜಿನಿ ಹವಾ; ವಿಶ್ವದಾದ್ಯಂತ ಬಿಡುಗಡೆಯಾಯ್ತು '2.0'

ಸುಮಾರು  543 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರೋ 2.0 ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನವನ್ನು ಎಸ್. ಶಂಕರ್ ನಿರ್ವಹಿಸಿದ್ದಾರೆ. ಇಡೀ ದೇಶದಲ್ಲಿಯೇ ಅತ್ಯಂತ ಅಧಿಕ ವೆಚ್ಚದ ಚಿತ್ರ ಹಾಗೂ ಏಷ್ಯಾದಲ್ಲಿಯೇ ಎರಡನೇ ಹೆಚ್ಚು ಕಾಸ್ಟ್ಲಿ ಚಿತ್ರವೆಂಬ ಕೀರ್ತಿಗೆ ಪಾತ್ರವಾಗಿದೆ.   

Yashaswini V Yashaswini V | Updated: Nov 29, 2018 , 08:02 AM IST
ಇಂದಿನಿಂದ ರಜಿನಿ ಹವಾ; ವಿಶ್ವದಾದ್ಯಂತ ಬಿಡುಗಡೆಯಾಯ್ತು '2.0'

ಬೆಂಗಳೂರು: ಇಡೀ ಭಾರತೀಯ ಚಿತ್ರರಂಗ ಕುತೂಹಲದಿಂದ ಕಾಯುತ್ತಿರುವ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್​ನ ಅಕ್ಷಯ್ ಕುಮಾರ್ ಅಭಿನಯದ 2.0 ಚಿತ್ರ ಇಂದು ವಿಶ್ವಾದ್ಯಂತ ತೆರೆ ಕಾಣುತ್ತಿದೆ. 

ರಜಿನಿಕಾಂತ್​, ಅಕ್ಷಯ್​ ಕುಮಾರ್​, ಆ್ಯಮಿ ಜಾಕ್ಸನ್​ ಸೇರಿದಂತೆ ಅನೇಕರು ಮುಖ್ಯಭೂಮಿಕೆಯಲ್ಲಿರುವ `2.0' ಚಿತ್ರ ಜಗತ್ತಿನಾದ್ಯಂತ ದಾಖಲೆಯ 6,800 ಸ್ಕ್ರೀನ್ ಗಳಲ್ಲಿ ತೆರೆಕಾಣಲಿದೆ.

ಸುಮಾರು  543 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರೋ 2.0 ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನವನ್ನು ಎಸ್. ಶಂಕರ್ ನಿರ್ವಹಿಸಿದ್ದಾರೆ. ಇಡೀ ದೇಶದಲ್ಲಿಯೇ ಅತ್ಯಂತ ಅಧಿಕ ವೆಚ್ಚದ ಚಿತ್ರ ಹಾಗೂ ಏಷ್ಯಾದಲ್ಲಿಯೇ ಎರಡನೇ ಹೆಚ್ಚು ಕಾಸ್ಟ್ಲಿ ಚಿತ್ರವೆಂಬ ಕೀರ್ತಿಗೆ ಪಾತ್ರವಾಗಿದೆ. 

'ಸೂಪರ್ ಸ್ಟಾರ್' ರಜಿನಿಕಾಂತ್ ನಟನೆಯ ಚಿತ್ರಗಳು ಕರ್ನಾಟಕದಲ್ಲಿ ಭಾರಿ ಅಬ್ಬರದಿಂದಲೇ ತೆರೆಕಾಣುತ್ತವೆ. ರಜಿನಿ ಸಿನಿಮಾವೆಂದರೆ ಸೆಲೆಬ್ರೇಷನ್ ಜೋರಿರುತ್ತೆ. ಆದ್ರೆ ಈ ಬಾರಿ ಅಂಬಿಗಾಗಿ ಯಾವುದೇ ಸೆಲೆಬ್ರೇಷನ್ ಮಾಡೋದು ಬೇಡ ಅಂತಾ ರಜಿನಿ ಅಭಿಮಾನಿಗಳು ನಿರ್ಧರಿಸಿದ್ದಾರೆ. ಅಂಬಿ ರಜಿನಿಯ ಆಪ್ತ ಮಿತ್ರರು. ಅಂಬಿ ಸಾವಿನ ಸಂದರ್ಭದಲ್ಲಿ ಆಚರಣೆ ಮಾಡೋದು ಸರಿಯಲ್ಲ. ಹೀಗಾಗಿ ಕರ್ನಾಟಕದ ರಜಿನಿ ಅಭಿಮಾನಿಗಳು ಯಾವುದೇ ಆಚರಣೆ ಮಾಡದಂತೆ ನಿರ್ಧರಿಸಿದ್ದಾರೆ‌.

ಹಲವೆಡೆ ಮುಂಜಾನೆ 4 ರಿಂದಲೇ 2.0 ಚಿತ್ರದ ಪ್ರದರ್ಶನ ಪ್ರಾರಂಭವಾಗಿದೆ. ಊರ್ವಶಿ, ಬಾಲಾಜಿ, ಈಶ್ವರಿ, ಮಾನಸ, ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮುಂಜಾನೆ 4 ಕ್ಕೆ ಚಿತ್ರಪ್ರದರ್ಶನ ಶುರುವಾಗಿದೆ.