ಅಡುಗೆ ಮನೆಯಲ್ಲಿ ಜಾರಿಬಿದ್ದು ʼ3 ಈಡಿಯಟ್ಸ್ʼ ನಟ ಸಾವು..!

Akhil mishra death : ಚಿತ್ರರಂಗದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. 3 ಈಡಿಯಟ್ಸ್ ಖ್ಯಾತಿಯ ಬಾಲಿವುಡ್‌ ನಟ ಅಖಿಲ್ ಮಿಶ್ರಾ ನಿಧನರಾಗಿದ್ದಾರೆ. 3 ಈಡಿಯಟ್ಸ್ ಚಿತ್ರದಲ್ಲಿ ಮಿಶ್ರಾ ಲೈಬ್ರೇರಿಯನ್ ದುಬೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

Written by - Krishna N K | Last Updated : Sep 21, 2023, 03:55 PM IST
  • 3 ಈಡಿಯಟ್ಸ್‌ ನಟ ಅಖಿಲ್‌ ಮಿಶ್ರಾ ನಿಧನ.
  • ಅಡುಗೆ ಮನೆಯಲ್ಲಿ ಕಾಲು ಜಾರಿ ಬಿದ್ದು ಸಾವು.
  • ಅಮೀರ್‌ ಖಾನ್‌ ನಟನೆಯ 3 ಈಡಿಯಟ್ಸ್‌ ಚಿತ್ರದ ನಟ ಮಿಶ್ರಾ.
ಅಡುಗೆ ಮನೆಯಲ್ಲಿ ಜಾರಿಬಿದ್ದು ʼ3 ಈಡಿಯಟ್ಸ್ʼ ನಟ ಸಾವು..! title=

3 Idiots actor Akhil mishra : 3 ಈಡಿಯಟ್ಸ್ ನಟ ಅಖಿಲ್ ಮಿಶ್ರಾ ವಿಧಿವಶರಾಗಿದ್ದಾರೆ. ಅಮೀರ್ ಖಾನ್ ಅಭಿನಯದ 3 ಈಡಿಯಟ್ಸ್ ಚಿತ್ರದಲ್ಲಿ ಮಿಶ್ರಾ ಲೈಬ್ರೇರಿಯನ್ ದುಬೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಂದು ಅಡುಗೆ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಮಿಶ್ರಾ ಅವರಿಗೆ ಪ್ರಸ್ತುತ 58 ವರ್ಷ. ಅವರ ಪತ್ನಿ ಸುಝೇನ್ ಬರ್ನೆಟ್ ಅವರು ಹೈದರಾಬಾದ್‌ನಲ್ಲಿ ಚಿತ್ರೀಕರಣದಲ್ಲಿದ್ದದ್ದಾಗಿ ಈ ಘಟನೆ ನಡೆದಿದೆ. ಈ ಸುದ್ದಿ ತಿಳಿದು ಅವರು ಮನೆಗೆ ಧಾವಿಸಿದ್ದಾರೆ. ನಟನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಂಪೂರ್ಣ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ. 

ಇದನ್ನೂ ಓದಿ: ಬಾತ್‌ಟಬ್‌ನಲ್ಲಿ ಕುಳಿತು ಕ್ಯಾಮರಾಗೆ ಹಾಟ್‌ ಪೋಸ್‌ ನೀಡಿದ ಸಂಗೀತಾ..! ಫೋಟೋಸ್‌ ಇಲ್ಲಿವೆ

ಅಖಿಲ್ ಮಿಶ್ರಾ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಡಾನ್, ವೆಲ್ ಡನ್ ಅಬ್ಬಾ, ಗಾಂಧಿ ಮೈ ಫಾದರ್, ಶಿಕಾರ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಅಮೀರ್ ಖಾನ್ ಅವರ 3 ಈಡಿಯಟ್ಸ್‌ನಲ್ಲಿ ಮಿಶ್ರಾ ಅವರ ಲೈಬ್ರೇರಿಯನ್ ದುಬೆಯ ಪಾತ್ರವು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಇದಲ್ಲದೆ, ಮಿಶ್ರಾ ಅನೇಕ ಜನಪ್ರಿಯ ಟಿವಿ ಶೋಗಳಲ್ಲಿಯೂ ಕೆಲಸ ಮಾಡಿದ್ದಾರೆ. ಉತ್ತರಾನ್, ಉಡಾನ್, ಸಿಐಡಿ, ಶ್ರೀಮನ್ ಶ್ರೀಮತಿ, ಹಾತಿಮ್, ಭಾರತ್ ಏಕ್ ಖೋಜ್ ಮುಂತಾದ ಕಾರ್ಯಕ್ರಮಗಳನ್ನು ಕಾಣಿಸಿಕೊಂಡಿದ್ದರು. ಸಧ್ಯ ಮಿಶ್ರಾ ಅವರ ನಿಧನಕ್ಕೆ ಅಭಿಮಾನಿಗಳು ಹಾಗೂ ಗಣ್ಯರು ಕಂಬನಿ ಮಿಡಿದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News