Hansika Motwani : ಹನ್ಸಿಕಾ ಮೋಟ್ವಾನಿ ಅವರ ಭಾವಿ ಪತಿ.. ಆಪ್ತ ಸ್ನೇಹಿತೆಯ ಮಾಜಿ ಪತಿಯೇ?

Hansika Motwani : ನಟಿ ಹನ್ಸಿಕಾ ಮೋಟ್ವಾನಿ ಇತ್ತೀಚೆಗೆ ಕೆಲವು ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ  ಹಂಚಿಕೊಳ್ಳುವ ಮೂಲಕ ಉದ್ಯಮಿ ಸೊಹೇಲ್ ಖತುರಿಯಾ ಅವರೊಂದಿಗಿನ ಸಂಬಂಧವನ್ನು ಘೋಷಿಸಿದರು. ಆದರೆ, ಅಂತರ್ಜಾಲದಲ್ಲಿ ಹೊಸ ವಿಡಿಯೋವೊಂದು ಕಾಣಿಸಿಕೊಂಡಿದ್ದು, ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.

Written by - Chetana Devarmani | Last Updated : Nov 7, 2022, 04:41 PM IST
  • ಹನ್ಸಿಕಾ ಅವರ ಭಾವಿ ಪತಿ ಸೊಹೇಲ್
  • ಆಪ್ತ ಸ್ನೇಹಿತೆ ರಿಂಕಿಯ ಮಾಜಿ ಪತಿಯೇ?
  • ಸೋಹೇಲ್ - ರಿಂಕಿ ಮದುವೆಯಲ್ಲಿ ಹನ್ಸಿಕಾ ಭಾಗಿ!?
Hansika Motwani : ಹನ್ಸಿಕಾ ಮೋಟ್ವಾನಿ ಅವರ ಭಾವಿ ಪತಿ.. ಆಪ್ತ ಸ್ನೇಹಿತೆಯ ಮಾಜಿ ಪತಿಯೇ?  title=
ಹನ್ಸಿಕಾ

Hansika Motwani : ನಟಿ ಹನ್ಸಿಕಾ ಮೋಟ್ವಾನಿ ಇತ್ತೀಚೆಗೆ ಕೆಲವು ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ  ಹಂಚಿಕೊಳ್ಳುವ ಮೂಲಕ ಉದ್ಯಮಿ ಸೊಹೇಲ್ ಖತುರಿಯಾ ಅವರೊಂದಿಗಿನ ಸಂಬಂಧವನ್ನು ಘೋಷಿಸಿದರು. ಪ್ಯಾರಿಸ್‌ನ ಐಫೆಲ್ ಟವರ್‌ನ ಮುಂದೆ ಪ್ರಪೋಸ್ ಮಾಡಲು ಮೊಣಕಾಲುಗಳ ಮೇಲೆ ಕುಳಿತ ತನ್ನ ಭಾವಿ ಪತಿಯೊಂದಿಗೆ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಆದರೆ, ಅಂತರ್ಜಾಲದಲ್ಲಿ ಹೊಸ ವಿಡಿಯೋವೊಂದು ಕಾಣಿಸಿಕೊಂಡಿದ್ದು, ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ : ಆಲಿಯಾ - ರಣಬೀರ್‌ಗೆ ತುಂಬಾ Lucky ಅಂತೆ ಮಗಳು! ಮುಂದೇನಾಗ್ತಾಳೆ? ಜ್ಯೋತಿಷಿಗಳು ಹೇಳಿದ್ದು ಹೀಗೆ

ಹನ್ಸಿಕಾ ಅವರ ಭಾವಿ ಪತಿ ಸೊಹೇಲ್ ಅವರ ಆಪ್ತ ಸ್ನೇಹಿತೆ ರಿಂಕಿಯ ಮಾಜಿ ಪತಿಯಂತೆ ತೋರುತ್ತದೆ. ಸೋಹೇಲ್ ಮತ್ತು ರಿಂಕಿಯ ಸಂಗೀತ ಸಮಾರಂಭದಲ್ಲಿ ಹನ್ಸಿಕಾ ಇರುವುದನ್ನು ಈ ವೈರಲ್‌ ವಿಡಿಯೋದಲ್ಲಿ ಕಾಣಬಹುದು. ವರದಿಗಳ ಪ್ರಕಾರ, ಸೋಹೇಲ್ ಮತ್ತು ರಿಂಕಿ 2016 ರಲ್ಲಿ ವಿವಾಹವಾದರು, ಆದರೆ ನಂತರ ಅವರು ಬೇರ್ಪಟ್ಟರು.

ಹನ್ಸಿಕಾ ಈ ವರ್ಷದ ಡಿಸೆಂಬರ್‌ನಲ್ಲಿ ಸೋಹೇಲ್ ಅವರನ್ನು ಮದುವೆಯಾಗಲಿದ್ದಾರೆ. ದಂಪತಿಗಳು ಸ್ಥಳವನ್ನು ಶಾರ್ಟ್‌ಲಿಸ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ ಮತ್ತು ಅವರು ಜೈಪುರದ ಮುಂಡೋಟಾ ಕೋಟೆ ಮತ್ತು ಅರಮನೆಯಲ್ಲಿ ವಿವಾಹ ಸಮಾರಂಭ ಇಟ್ಟುಕೊಳ್ಳುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, ಹನ್ಸಿಕಾ ಮತ್ತು ಸೊಹೇಲ್ ಅವರ ವಿವಾಹ ಸಮಾರಂಭ ಅದ್ದೂರಿಯಾಗಿ ಜರುಗಲಿದೆ. ಇಕ್ಕಾಗಿ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ.

ಇದನ್ನೂ ಓದಿ : Ashika Ranganath: ಕಪ್ಪು ಸೀರೆಯಲ್ಲಿ ಚುಟು ಚುಟು ಚೆಲುವೆ! ಜಾರಿ ಬಿತ್ತು ಗಂಡ ಹೈಕ್ಳ ಹೃದಯ

ಡಿಸೆಂಬರ್ 3 ರಂದು ಹನ್ಸಿಕಾ ಮತ್ತು ಸೊಹೇಲ್ ಅವರ ಅರಿಶಿಣ ಶಾಸ್ತ್ರ ನಡೆಯಲಿದ್ದು, ಅದೇ ದಿನ ಮೆಹೆಂದಿ ಮತ್ತು ಸಂಗೀತ ಸಮಾರಂಭ ನಡೆಯಲಿದೆ ಎಂದು ವರದಿಗಳು ಹೇಳುತ್ತವೆ. ಡಿಸೆಂಬರ್ 4 ರಂದು ದಾಂಪತ್‌ಯ ಜೀವನಕ್ಕೆ ಕಾಲಿಡಲಿದ್ದಾರೆ. ಅತಿಥಿಗಳಿಗಾಗಿ ಕೊಠಡಿಗಳು ಸಿದ್ಧವಾಗುತ್ತಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News