Banaras: ‘ಬನಾರಸ್’ ಸಿನಿಮಾ ವೀಕ್ಷಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ

ಮೊದಲ ಸಿನಿಮಾದಲ್ಲಿಯೇ ಝೈದ್​ ಖಾನ್ ಅನುಭವಿ ಹೀರೋ ರೀತಿ ​​ ನಟಿಸಿದ್ದಾರೆ. ಅವರ ಮತ್ತು ಸೋನಲ್‌ ಮಂಥೆರೋ ಜೋಡಿ ಚೆನ್ನಾಗಿದೆ. ಸಿನಿಮಾ ಎಲ್ಲಿಯೂ ಬೋರ್​ ಆಗಲ್ಲವೆಂದು ಸಿದ್ದರಾಮಯ್ಯ ಹೇಳಿದ್ದಾರೆ.

Written by - YASHODHA POOJARI | Edited by - Puttaraj K Alur | Last Updated : Nov 7, 2022, 09:16 PM IST
  • ಜಮೀರ್​ ಅಹ್ಮದ್​ ಪುತ್ರ ಝೈದ್​ ಖಾನ್​ ನಟನೆಯ ‘ಬನಾರಸ್’ ಸಿನಿಮಾ ವೀಕ್ಷಿಸಿದ ಸಿದ್ದರಾಮಯ್ಯ
  • ‘ಬನಾರಸ್’ನೈಜತೆಯಿಂದ ಕೂಡಿದ ಪಾತ್ರಗಳು, ಸ್ವಾರಸ್ಯಕರ ಕತೆ ಹೊಂದಿರುವ ಸದಭಿರುಚಿಯ ಚಿತ್ರ
  • ಇಂತಹ ಚಿತ್ರಗಳ ಸಂಖ್ಯೆ ನೂರಾಗಲಿ, ಚಿತ್ರರಂಗ ಬೆಳೆಯಲಿ, ಚಿತ್ರತಂಡ ಬೆಳೆಯಲಿ ಎಂದು ಶುಭಹಾರೈಕೆ
Banaras: ‘ಬನಾರಸ್’ ಸಿನಿಮಾ ವೀಕ್ಷಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ title=
‘ಬನಾರಸ್’ ಸಿನಿಮಾ ವೀಕ್ಷಿಸಿದ ಸಿದ್ದರಾಮಯ್ಯ

ಬೆಂಗಳೂರು: ಎಲ್ಲೆಲ್ಲೂ ‘ಬನಾರಸ್’ ಸಿನಿಮಾದ​​​ ಕ್ರೇಜ್ ​ಸಿಕ್ಕಾಪಟ್ಟೆ ಜೋರಾಗಿದೆ. ದೇಶದಾದ್ಯಂತ ಸುಂದರವಾದ ದೃಶ್ಯಕಾವ್ಯ ಕಟ್ಟಿಕೊಟ್ಟಿರೋ ‘ಬನಾರಸ್’ಗೆ ಪ್ರೇಕ್ಷಕಪ್ರಭು ಸಲಾಂ ಎಂದಿದ್ದಾನೆ.​​​ ಮಾಜಿ ಸಿಎಂ ಸಿದ್ದರಾಮಯ್ಯನವರು ನಟ ಝೈದ್​ ಖಾನ್ ಜೊತೆ ಈ ಸಿನಿಮಾವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾನುವಾರ ರಾತ್ರಿ ತಮ್ಮ ಕೆಲವು ಸಹೋದ್ಯೋಗಿಗಳ ಜೊತೆಗೆ ಮಲ್ಟಿಪ್ಲೆಕ್ಸ್‌ನಲ್ಲಿ ‘ಬನಾರಸ್’ ಸಿನಿಮಾವನ್ನು ಸಿದ್ದರಾಮಯ್ಯ ವೀಕ್ಷಿಸಿದ್ದಾರೆ. ಈ ಸಮಯದಲ್ಲಿ ಸಿದ್ದರಾಮಯ್ಯ ಜೊತೆಗೆ ನಟ ಝೈದ್ ಖಾನ್ ಹಾಗೂ ಚಿತ್ರತಂಡದ ಇತರ ಸದಸ್ಯರು ಸಹ ಇದ್ದರು.

ಇದನ್ನೂ ಓದಿ: Hansika Motwani : ಹನ್ಸಿಕಾ ಮೋಟ್ವಾನಿ ಅವರ ಭಾವಿ ಪತಿ.. ಆಪ್ತ ಸ್ನೇಹಿತೆಯ ಮಾಜಿ ಪತಿಯೇ?

ಈ ಸಿನಿಮಾದಲ್ಲಿ ಜಮೀರ್​ ಅಹ್ಮದ್​ ಅವರ ಪುತ್ರ ಝೈದ್​ ಖಾನ್​ ಹೀರೋ ಆಗಿ ನಟಿಸಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ. ‘ಮೊದಲ ಸಿನಿಮಾದಲ್ಲಿಯೇ ಅನುಭವಿ ಹೀರೋ ರೀತಿ ಝೈದ್​ ಖಾನ್​​ ನಟಿಸಿದ್ದಾರೆ. ಅವರ ಮತ್ತು ಸೋನಲ್‌ ಮಂಥೆರೋ ಜೋಡಿ ಚೆನ್ನಾಗಿದೆ. ನಿರ್ದೇಶಕ ಜಯತೀರ್ಥ ಬರೆದ ಕಥೆ ಕುತೂಹಲಕಾರಿ ಆಗಿದೆ. ಎಲ್ಲಿಯೂ ಬೋರ್​ ಆಗಲ್ಲ’ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಸಿನಿಮಾದಲ್ಲಿನ ಸಸ್ಪೆನ್ಸ್​ ಅಂಶವನ್ನು ಅವರು ಹೆಚ್ಚು ಇಷ್ಟಪಟ್ಟಿದ್ದಾರೆ.

ಸಿದ್ದರಾಮಯ್ಯನವರು ಟ್ವೀಟ್ ಮಾಡುವ ಮೂಲಕ ಸಿನಿಮಾ ವೀಕ್ಷಿಸಿದ ಖುಷಿಯನ್ನು ಹಂಚಿಕೊಂಡಿದ್ದಾರೆ. ‘ಝೈದ್ ಖಾನ್ ಹಾಗೂ ಸೋನಲ್‌ ಮಂಥೆರೋ ಅಭಿನಯದ ‘ಬನಾರಸ್’ ಚಿತ್ರ ವೀಕ್ಷಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದೆ. ನೈಜತೆಯಿಂದ ಕೂಡಿದ ಪಾತ್ರಗಳು, ಸ್ವಾರಸ್ಯಕರವಾದ ಕತೆಯನ್ನು ಒಳಗೊಂಡಿರುವ ಸದಭಿರುಚಿಯ ಚಲನಚಿತ್ರವಿದು. ಇಂತಹ ಚಿತ್ರಗಳ ಸಂಖ್ಯೆ ನೂರಾಗಲಿ. ಚಿತ್ರರಂಗ ಬೆಳೆಯಲಿ,  ಚಿತ್ರತಂಡ ಬೆಳೆಯಲಿ. ಎಲ್ಲರಿಗೂ ಒಳಿತಾಗಲಿ’ ಎಂದು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ಬಿ ಅಲರ್ಟ್...ಕ್ರೈಂ ಮಾಡಲು ನವೆಂಬರ್ 11ಕ್ಕೆ ಬರ್ತಿದ್ದಾರೆ 'ಯಲ್ಲೋ ಗ್ಯಾಂಗ್"..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News