'ಅಭಿಷೇಕ್ ಬಚ್ಚನ್ ನನ್ನ ಪತಿ, ಐಶ್ವರ್ಯ ರೈ ಬಲವಂತದಿಂದ ಮದುವೆಯಾಗಿದ್ದಾಳೆ.." ಖ್ಯಾತ ನಟಿ ಆರೋಪ!!

Abhishek bachchan: ಅಭಿಷೇಕ್ ಬಚ್ಚನ್‌ ಅವರೊಂದಿಗೆ ಅನೇಕ ನಟಿಯರ ಹೆಸರು ತಳುಕುಹಾಕಿಕೊಂಡಿತ್ತು.. ಆದರೆ ನಟ ಐಶ್ವರ್ಯ ರೈ ಅವರನ್ನು ಮದುವೆಯಾದರು.. ಇದೀಗ ಮಾಜಿ ವಿಶ್ವಸುಂದರಿ ಐಶ್‌ ವಿರುದ್ಧ ಮಾಡೆಲ್‌ ಒಬ್ಬರು ಗಂಭೀರ ಆರೋಪ ಮಾಡಿದ್ದಾರೆ.. 

Written by - Savita M B | Last Updated : Mar 21, 2024, 08:14 AM IST
  • ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ 2007 ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು
  • ಮದುವೆಗೂ ಮುನ್ನ ಐಶ್ವರ್ಯಾ ರೈ ಹೆಸರು ಸಲ್ಮಾನ್ ಖಾನ್ ಮತ್ತು ವಿವೇಕ್ ಒಬೆರಾಯ್ ಜೊತೆ ಸೇರಿಕೊಂಡಿತ್ತು
'ಅಭಿಷೇಕ್ ಬಚ್ಚನ್ ನನ್ನ ಪತಿ, ಐಶ್ವರ್ಯ ರೈ ಬಲವಂತದಿಂದ ಮದುವೆಯಾಗಿದ್ದಾಳೆ.." ಖ್ಯಾತ ನಟಿ ಆರೋಪ!! title=

 Abhishek Bachchan Aishwarya Rai: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ 2007 ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. ಮದುವೆಗೂ ಮುನ್ನ ಐಶ್ವರ್ಯಾ ರೈ ಹೆಸರು ಸಲ್ಮಾನ್ ಖಾನ್ ಮತ್ತು ವಿವೇಕ್ ಒಬೆರಾಯ್ ಜೊತೆ ಸೇರಿಕೊಂಡಿತ್ತು. ಮತ್ತೊಂದೆಡೆ ಅಭಿಷೇಕ್ ಬಚ್ಚನ್ ಮತ್ತು ಕರಿಷ್ಮಾ ಕಪೂರ್ ನಿಶ್ಚಿತಾರ್ಥವೂ ಮುರಿದುಬಿದ್ದಿತ್ತು..  

 ಇನ್ನು ಮದುವೆಯ ದಿನದಂದು ಐಶ್ವರ್ಯಾ ರೈ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿತ್ತು. ನಟಿ ಮತ್ತು ಮಾಡೆಲ್ ಜಾನ್ವಿ ಕಪೂರ್ ಅಭಿಷೇಕ್ ಬಚ್ಚನ್ ತನ್ನ ಪತಿ ಮತ್ತು ಐಶ್ವರ್ಯಾ ರೈ ತನ್ನನ್ನು ಬಲವಂತವಾಗಿ ಮದುವೆಯಾಗುತ್ತಿದ್ದಾರೆ ಎಂದು ಹೇಳಿದ್ದರು. ಆ ಮಾಡೆಲ್ ಐಶ್ವರ್ಯಾ ರೈ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು.

ಇದನ್ನೂ ಓದಿ-ಈ ಸ್ಕೂಲ್‌ ಗ್ರುಪ್‌ ಫೋಟೋದಲ್ಲಿ ಒಬ್ಬ ಸ್ಟಾರ್‌ ಹಿರೋಯಿನ್‌ ಇದ್ದಾಳೆ..! ಯಾರು ಹೇಳಿ ನೋಡೋಣ

 ಜಾನ್ವಿ ಕಪೂರ್ ಅಭಿಷೇಕ್ ಬಚ್ಚನ್ ಜೊತೆ ಕೆಲಸ ಮಾಡಿದ್ದರು. ಮಾಹಿತಿ ಪ್ರಕಾರ ಜಾನ್ವಿ ಕಪೂರ್ ಅಭಿಷೇಕ್ ಬಚ್ಚನ್ ಜೊತೆ ಒಂದು ಚಿತ್ರದಲ್ಲಿ ಕೆಲಸ ಮಾಡಿದ್ದರು. ಆದರೆ, ಆ ಸಮಯದಲ್ಲಿ ಇದು ಪ್ರಚಾರದ ಸ್ಟಂಟ್ ಎಂದು ಹಲವರು ಹೇಳಿಕೊಂಡಿದ್ದರು. ನಟಿಯ ಆರೋಪವನ್ನು ಅಭಿಷೇಕ್ ಬಚ್ಚನ್ ನಿರಾಕರಿಸಿದಾಗ, ಪರಿಸ್ಥಿತಿ ಇನ್ನಷ್ಟು ಗಂಭೀರವಾಯಿತು. ಮಾಡೆಲ್ ಅಭಿಷೇಕ್ ವಿರುದ್ಧ ದೂರು ಸಹ ದಾಖಲಿಸಿದ್ದರು, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಮದುವೆಯ ದಿನದಂದು ಅಮಿತಾಬ್ ಬಚ್ಚನ್ ಅವರ ಮನೆಯ ಹೊರಗೆ ಸಾಕಷ್ಟು ಗಲಾಟೆ ನಡೆದಿತ್ತು..

ಮಾಧ್ಯಮ ವರದಿಗಳ ಪ್ರಕಾರ, ಜಾನ್ವಿ ಕಪೂರ್ ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ಅಭಿಷೇಕ್ ಬಚ್ಚನ್ ವಿರುದ್ಧ ದೂರು ದಾಖಲಿಸಿದ್ದರು, ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣವನ್ನು ದಾಖಲಿಸಲಾಗಿರಲಿಲ್ಲ..   

ಇದನ್ನೂ ಓದಿ-Namratha Gowda : ʼಯುವʼ ಸಿನಿಮಾದ ಕವಿತೆಗೆ ನಮ್ರತಾ-ಕಿಶನ್‌ ಡಾನ್ಸ್‌..! ವಿಡಿಯೋ ವೈರಲ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News