ಅಬ್ಬಬ್ಬಾ...! ಕೇವಲ 8 ನಿಮಿಷದ ದೃಶ್ಯಕ್ಕೆ 35 ಕೋಟಿ ಸಂಭಾವನೆ ತೆಗೆದುಕೊಂಡ ಸ್ಟಾರ್‌ ಹೀರೋ.. ಯಾರು ಗೊತ್ತಾ ಈ ʼಮನ್ಮಥʼ?

Highest Paid Actor: ಸಿನಿಮಾವೊಂದರಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಹೀರೋ ಒಬ್ಬ ಸುಮಾರು 35 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದನೆಂದರೆ ನಿಮಗೆ ನಂಬಲು ಸಾಧ್ಯವೇ!! ಹೌದು.. ಸಿನಿಮಾವೊಂದರಲ್ಲಿ ಕೇವಲ 8 ನಿಮಿಷಗಳ ಕಾಲ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಭಾರಿ ಮೊತ್ತದ ಸಂಭಾವನೆ ತೆಗೆದುಕೊಂಡಿದ್ದಾರೆ.

Written by - Bhavishya Shetty | Last Updated : Sep 20, 2024, 05:35 PM IST
    • ಸ್ಟಾರ್ ಹೀರೋಗಳು ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವುದು ಗೊತ್ತೇ ಇದೆ
    • ಅತಿಥಿ ಪಾತ್ರದಲ್ಲಿ ನಟಿಸಲು ಹೀರೋ ಒಬ್ಬ 35 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದ!
    • 2022 ರಲ್ಲಿ ಬಿಡುಗಡೆಯಾದ ಹಿಟ್ ಚಲನಚಿತ್ರ "RRR"
ಅಬ್ಬಬ್ಬಾ...! ಕೇವಲ 8 ನಿಮಿಷದ ದೃಶ್ಯಕ್ಕೆ 35 ಕೋಟಿ ಸಂಭಾವನೆ ತೆಗೆದುಕೊಂಡ ಸ್ಟಾರ್‌ ಹೀರೋ.. ಯಾರು ಗೊತ್ತಾ ಈ ʼಮನ್ಮಥʼ? title=
Ajay Devgn

Ajay Devgn: ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಟರ ಸಂಭಾವನೆ ಬಗ್ಗೆ ಅಭಿಮಾನಿಗಳಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಗಳು ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವುದು ಗೊತ್ತೇ ಇದೆ. ಪ್ರತಿ ಸ್ಟಾರ್ ಹೀರೋ ನೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುತ್ತಾರೆ.

ಇದನ್ನೂ ಓದಿ: ರಾತ್ರಿ ಮಲಗುವಾಗ ಈ ಒಣಹಣ್ಣಿನ ಎಣ್ಣೆ ಹಚ್ಚಿ ಮಲಗಿದರೆ ಬೆಳಗಾಗುವಷ್ಟರಲ್ಲಿ ಕಡುಕಪ್ಪು ಬಣ್ಣಕ್ಕೆ ತಿರುಗುತ್ತೆ ಬೆಳ್ಳಗಾದ ಕೂದಲು! ಒಮ್ಮೆ ಟ್ರೈ ಮಾಡಿ ನೋಡಿ

ಆದರೆ ಸಿನಿಮಾವೊಂದರಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಹೀರೋ ಒಬ್ಬ ಸುಮಾರು 35 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದನೆಂದರೆ ನಿಮಗೆ ನಂಬಲು ಸಾಧ್ಯವೇ!! ಹೌದು.. ಸಿನಿಮಾವೊಂದರಲ್ಲಿ ಕೇವಲ 8 ನಿಮಿಷಗಳ ಕಾಲ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಭಾರಿ ಮೊತ್ತದ ಸಂಭಾವನೆ ತೆಗೆದುಕೊಂಡಿದ್ದಾರೆ. ಆ ನಟ ಬೇರೆ ಯಾರೂ ಅಲ್ಲ ಬಾಲಿವುಡ್ ಹೀರೋ ಅಜಯ್ ದೇವಗನ್.

ಅಜಯ್ ದೇವಗನ್ ಅವರ ನಿಜವಾದ ಹೆಸರು ವಿಶಾಲ್. ಅವರು 1991 ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದಾಗ, ಅವರು ತಮ್ಮ ಹೆಸರನ್ನು ವಿಶಾಲ್‌ನಿಂದ "ಅಜಯ್" ಎಂದು ಬದಲಾಯಿಸಿಕೊಂಡರು. ಏಕೆಂದರೆ 1991 ರಲ್ಲಿ ಅಜಯ್ ದೇವಗನ್ 'Phool Aur Kaante' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ತಮ್ಮ ಮೊದಲ ಚಿತ್ರದಲ್ಲೇ ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದರು. 1992 ರಲ್ಲಿ ಅವರ ಎರಡನೇ ಚಿತ್ರ ಜಿಗರ್. ನಾಯಕಿ ಕರಿಷ್ಮಾ ಕಪೂರ್ ಅಭಿನಯದ ಈ ಬಾಲಿವುಡ್ ಮಾರ್ಷಲ್ ಆರ್ಟ್ಸ್ ಚಿತ್ರ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಯಿತು ಅಷ್ಟೇ ಅಲ್ಲದೆ, ಗಲ್ಲಾಪೆಟ್ಟಿಗೆಯಲ್ಲಿ ₹ 7 ಕೋಟಿ ಸಂಗ್ರಹಿಸಿತು.

ಇದನ್ನೂ ಓದಿ: ಡೇಂಜರ್‌ ಝೋನ್‌ನಲ್ಲಿರುವ ಕೆಎಲ್‌ ರಾಹುಲ್‌ ಕೆರಿಯರ್‌ ಬಗ್ಗೆ ರೋಹಿತ್‌ ಶರ್ಮಾ ಶಾಕಿಂಗ್‌ ಹೇಳಿಕೆ

ಇನ್ನು 2022 ರಲ್ಲಿ ಬಿಡುಗಡೆಯಾದ ಹಿಟ್ ಚಲನಚಿತ್ರ "RRR" ನಲ್ಲಿ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ರಾಮ್ ಚರಣ್ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಇದರಲ್ಲಿ ಕೇವಲ 8 ನಿಮಿಷದ ದೃಶ್ಯ ಶೂಟಿಂಗ್‌ʼಗೆ ಬರೋಬ್ಬರಿ 35 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ. ಅಂದರೆ ನಿಮಿಷಕ್ಕೆ 4.5 ಕೋಟಿ ಎಂದಾಯಿತು. ಈ ಚಿತ್ರಕ್ಕೆ ಮಾತ್ರವಲ್ಲದೆ 2022 ರಲ್ಲಿ ಬಿಡುಗಡೆಯಾದ 'ರುದ್ರ' ವೆಬ್ ಸರಣಿಯಲ್ಲಿ ನಟಿಸಲು ಸುಮಾರು 125 ಕೋಟಿ ತೆಗೆದುಕೊಂಡು ಬಾಲಿವುಡ್ ಚಿತ್ರರಂಗವನ್ನು ಅಚ್ಚರಿಗೊಳಿಸಿದ್ದರು.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News