ಶಾಲಾ ಮಕ್ಕಳಿಗೆ ಭರ್ಜರಿ ದಸರಾ ರಜೆ..! ಎಲ್ಲಿಂದ ಎಲ್ಲಿಯವರೆ.. ಒಟ್ಟು ಎಷ್ಟು ದಿನ ರಜೆ ಗೊತ್ತೆ..? ಮಾಹಿತಿ ಇಲ್ಲಿದೆ

Dasara holidays 2024 : ರಾಜ್ಯದಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ದಸರಾ ರಜೆ ಬರುತ್ತಿದೆ. ಈಗಾಗಲೇ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳು ತಮ್ಮ ಊರಿಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದಸರಾ ಸಂದರ್ಭದಲ್ಲಿ ರೈಲ್ವೆ ಇಲಾಖೆಯು ಪ್ರಮುಖ ನಗರಗಳಿಗೆ ಹೋಗಲು ವಿಶೇಷ ರೈಲುಗಳನ್ನು ಸಹ ಆಯೋಜಿಸಿದೆ. ಪ್ರತಿ ಬಾರಿ ದಸರಾ ಬಂತೆಂದರೆ ಶಾಲಾ-ಕಾಲೇಜುಗಳಿಗೆ ಸರ್ಕಾರಿ ರಜೆ ಘೋಷಿಸಲಾಗುತ್ತದೆ..

Written by - Krishna N K | Last Updated : Sep 20, 2024, 01:36 PM IST
    • ರಾಜ್ಯದಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ದಸರಾ ರಜೆ
    • ಪ್ರತಿ ಬಾರಿ ದಸರಾ ಬಂತೆಂದರೆ ಶಾಲಾ-ಕಾಲೇಜುಗಳಿಗೆ ಸರ್ಕಾರಿ ರಜೆ ಘೋಷಿಸಲಾಗುತ್ತದೆ..
    • ಶಾಲೆಗಳಿಗೆ ದಸರಾ ರಜೆ ಘೋಷಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.
ಶಾಲಾ ಮಕ್ಕಳಿಗೆ ಭರ್ಜರಿ ದಸರಾ ರಜೆ..! ಎಲ್ಲಿಂದ ಎಲ್ಲಿಯವರೆ.. ಒಟ್ಟು ಎಷ್ಟು ದಿನ ರಜೆ ಗೊತ್ತೆ..? ಮಾಹಿತಿ ಇಲ್ಲಿದೆ title=

Dasara 2024 Holidays : ರಾಜ್ಯದಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ದಸರಾ ರಜೆ ಘೋಷಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. ಈಗಾಗಲೇ ನಗರದಲ್ಲಿರುವ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಹಳ್ಳಿಗಳಿಗೆ ಹೋಗಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.. ಪ್ರತಿ ಬಾರಿ ದಸರಾ ಬಂತೆಂದರೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ.. ಈ ವರ್ಷ ರಾಜ್ಯದ ಶಾಲೆಗಳಿಗೆ 10 ದಿನ ರಜೆ ನೀಡುವ ಸಾಧ್ಯತೆ ಇದೆ..

ಅಕ್ಟೋಬರ್ 4ರಿಂದ ದಸರಾ ರಜೆ ಆರಂಭವಾಗಲಿದೆ. ಅಕ್ಟೋಬರ್ 13ಕ್ಕೆ ರಜಾದಿನಗಳು ಕೊನೆಗೊಳ್ಳುವ ಸಾಧ್ಯತೆ ಇದೆ. ಅಕ್ಟೋಬರ್ 14ರಿಂದ ಮತ್ತೆ ಶಾಲಾ-ಕಾಲೇಜುಗಳು ಆರಂಭವಾಗಲಿವೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ರಜೆ ಬರುತ್ತದೆ. ಅಕ್ಟೋಬರ್ 3ರಂದು ಕೂಡ ಸರ್ಕಾರ ರಜೆ ನೀಡಿದರೆ.. ಒಟ್ಟು 12 ದಿನ ರಜೆ ಇರಲಿದೆ. 

ಇದನ್ನೂ ಓದಿ:ಚಿರತೆ ಸೆರೆ ಕಾರ್ಯಾಚರಣೆ: ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡಿಗೆ ನಾಲ್ವರಿಗೆ ಗಾಯ

ಅಕ್ಟೋಬರ್ ತಿಂಗಳ ರಜೆಯ ಕಾರಣ 17 ದಿನ ಮಾತ್ರ ತರಗತಿಗಳು ನಡೆಯಲಿವೆ. ಆದರೆ, ದಸರಾ ರಜೆಗಳ ಕುರಿತು ರಾಜ್ಯ ಸರ್ಕಾರ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಒಂದು ವೇಳೆ ಘೋಷಣೆ ಬಂದರೆ ಒಟ್ಟು ಎಷ್ಟು ದಿನಗಳ ರಜೆಗಳ ಬಗ್ಗೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ದಸರಾ ಹಬ್ಬವನ್ನು ಶನಿವಾರ 12 ರಂದು ಆಚರಿಸಲಾಗುತ್ತದೆ..

ಮತ್ತೊಂದೆಡೆ, ದೀಪಾವಳಿ ಅಕ್ಟೋಬರ್ 31 ರಂದು ಬರುವುದರಿಂದ, ಆ ದಿನ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಇರಲಿದೆ. ಒಟ್ಟಿನಲ್ಲಿ ಅಕ್ಟೋಬರ್ ತಿಂಗಳಲ್ಲಿ 13 ದಿನ ರಜೆ ಇರುವ ಸಾಧ್ಯತೆ ಇದೆ. ಡಿಸೆಂಬರ್ 22 ರಿಂದ 29 ರವರೆಗೆ ಕ್ರಿಸ್ಮಸ್ ರಜಾದಿನಗಳನ್ನು ನೀಡಲಾಗುತ್ತದೆ. ಸಂಕಾಂತಿ ರಜಾದಿನಗಳು 2025 ಜನವರಿ 10 ರಿಂದ 19 ರವರೆಗೆ ಇರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News