ಫ್ಯಾನ್ಸ್‌ ಈಗಲೇ ಖುಷಿಪಡಬೇಡಿ.. ದರ್ಶನ್‌ಗೆ ಸಿಕ್ಕಿದ್ದು ʼಮಧ್ಯಂತರ ಬೇಲ್‌ʼ ಅಷ್ಟೇ..! 6 ವಾರಗಳ ನಂತರ ಮತ್ತೆ... 

Actor Darshan Bail : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ನಟ ದರ್ಶನ್ ಅವರಿಗೆ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಆಗಿದೆ. ಆರೋಗ್ಯದ ಕಾರಣದಿಂದ ಕರ್ನಾಟಕ ಹೈಕೋರ್ಟ್​ ನಟನಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.. ಆದರೆ.. 

Written by - Krishna N K | Last Updated : Oct 30, 2024, 02:09 PM IST
    • ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಹತ್ಯೆ ಪ್ರಕರಣ
    • ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್‌ ಮತ್ತು ಪವಿತ್ರಗೌಡ ಬಂಧನವಾಗಿತ್ತು..
    • ಸುದೀರ್ಘ ಸಮಯದ ನಂತರ ದರ್ಶನ್‌ ಅವರಿಗೆ ಮಧ್ಯಂತರ ಬೇಲ್‌ ಸಿಕ್ಕಿದೆ..
ಫ್ಯಾನ್ಸ್‌ ಈಗಲೇ ಖುಷಿಪಡಬೇಡಿ.. ದರ್ಶನ್‌ಗೆ ಸಿಕ್ಕಿದ್ದು ʼಮಧ್ಯಂತರ ಬೇಲ್‌ʼ ಅಷ್ಟೇ..! 6 ವಾರಗಳ ನಂತರ ಮತ್ತೆ...  title=

Darshan Bail : ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್‌ ಮತ್ತು ಪವಿತ್ರಗೌಡ ಬಂಧನವಾಗಿತ್ತು.. ಸುದೀರ್ಘ ಸಮಯದ ನಂತರ ದರ್ಶನ್‌ ಅವರಿಗೆ ಮಧ್ಯಂತರ ಬೇಲ್‌ ಸಿಕ್ಕಿದೆ.. ಈ ವಿಚಾರ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಖುಷಿ ನೀಡಿದೆ. ಇಂದೇ ನಟ ಬಳ್ಳಾರಿ ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.. 

ನಟ ದರ್ಶನ್ ಅವರಿಗೆ 6 ವಾರಗಳ ಮಧ್ಯಂತರ ಜಾಮೀನು ಮಂಜೂರಾಗಿದೆ. ಆದರೆ ಕೋರ್ಟ್ ಆದೇಶ ಬಳ್ಳಾರಿ ಜೈಲಿಗೆ ತಲುಪಿ, ಕಾನೂನು ಪ್ರಕ್ರಿಯೆ ಸಂಜೆ 5 ಗಂಟೆ ವೇಳೆಗೆ ಮುಕ್ತಾಯವಾದರೆ ಮಾತ್ರ ದರ್ಶನ್ ಇಂದೇ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎನ್ನಲಾಗಿದೆ. ಇಲ್ಲವೇ ನಾಳೆ ಬಿಡುಗಡೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ:ಬಿಷ್ಣೋಯಿ ಜೊತೆ ನಿಶ್ಚಿತಾರ್ಥ ಬ್ರೇಕ್‌, ಅನುಷ್ಕಾ ಶರ್ಮಾ ಜೊತೆ ಸಿನಿರಂಗಕ್ಕೆ ಎಂಟ್ರಿ..! ಪಡ್ಡೆ ಹುಡುಗರ ಕ್ರಶ್‌ ಈಕೆ..

ಈ ಕುರಿತು ಪ್ರತಿಕ್ರಿಯೆ ನೀಡಿರುವ ದರ್ಶನ್‌ ಪರ ವಕೀಲ ಸುನೀಲ್ ಕುಮಾರ್, ನಟ ದರ್ಶನ್‌ ಅವರಿಗೆ ಹೈಕೋರ್ಟ್​ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಸಧ್ಯ ನಾವು ನ್ಯಾಯಾಲಯದ ದೃಢಿಕೃತ ಪ್ರತಿ ಪಡೆದುಕೊಳ್ಳುತ್ತೇವೆ. ಆ ಬಳಿಕ ಸೆಕ್ಷನ್ ಕೋರ್ಟ್‌ಗೆ ಅಡ್ವಾನ್ಸ್ ಮೆಂಟ್ ಅರ್ಜಿಯನ್ನು ಸಲ್ಲಿಕೆ ಮಾಡಬೇಕು, ನಂತರ ಸೂಕ್ತ ಶ್ಯೂರಿಟಿ ದಾಖಲಾತಿ ಪತ್ರಗಳನ್ನು ಸಲ್ಲಿಸಬೇಕಾಗುತ್ತದೆ ಎಂದರು.. 

ಅಲ್ಲದೆ, ಕೋರ್ಟ್‌ ದರ್ಶನ್‌ ಅವರ ಪಾಸ್​ಪೋರ್ಟ್​ ಸಲ್ಲಿಕೆ ಮಾಡಲು ಹೇಳಿದೆ, ಅದನ್ನು ನಾವು ಕೂಡಲೇ ಮಾಡ್ತೇವೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಮುಕ್ತಾಯವಾದ ಬಳಿಕ ಅವರು ಬಿಡುಗಡೆ ಆಗಲಿದ್ದಾರೆ. ನಾವು ಕೊಟ್ಟ ಶ್ಯೂರಿಟಿಗಳನ್ನು ಕೆಳ ಹಂತದ ನ್ಯಾಯಾಲಯ ಅಂಗೀಕೃತ ಮಾಡಬೇಕು. ಆ ನಂತರವೇ ಬಿಡುಗಡೆ ಆಗಲು ಸಾಧ್ಯ ಎಂದು ತಿಳಿಸಿದ್ದಾರೆ. ದರ್ಶನ್‌ ಅವರಿಗೆ ಸಿಕ್ಕಿರುವುದು ಮಧ್ಯಂತರ ಜಾಮೀನು ಅಷ್ಟೇ, ರೆಗ್ಯುಲರ್ ಬೇಲ್ ಪಡೆದುಕೊಳ್ಳುವ ಕಾನೂನು ಹೋರಾಟ ಮುಂದುವರೆಯುತ್ತದೆ ಎಂದು ವಕೀಲ್ ಸಂತೋಷ್ ಅವರು ತಿಳಿಸಿದ್ದಾರೆ..

ಇದನ್ನೂ ಓದಿ:ತಾತ ಪ್ರಧಾನಿ.. ಪತಿ ಸ್ಟಾರ್ ಹೀರೋ.. ಈಕೆ ಬ್ಯಾಗ್ರೌಂಡ್‌ ಕೇಳಿದ್ರೆ ನಿಮ್ಮ ತಲೆ ಗಿರ್‌.. ಅನ್ನುತ್ತೆ...!

ಒಟ್ಟಾರೆಯಾಗಿ ಹೇಳುವುದಾದರೆ, ಇದು ಆರೋಗ್ಯದ ಸಲುವಾಗಿ ನೀಡಲಾದ ಮಧ್ಯಂತರ ಜಾಮೀನು, ವೈದ್ಯರ ತಪಾಸಣೆ ಮತ್ತು ಚಿಕಿತ್ಸೆಯ ಎಲ್ಲಾ ವಿವರಗಳನ್ನು ಕೋರ್ಟ್‌ಗೆ ನೀಡಬೇಕಾಗುತ್ತದೆ.. ಹಾಗಾದ್ರೆ 6 ವಾರಗಳ ನಂತರ ದರ್ಶನ್‌ ಮತ್ತೇ ಜೈಲಿಗೆ ಹೋಗ್ತಾರಾ.. ಅಥವಾ ರೆಗ್ಯೂಲರ್‌ ಬೇಲ್‌ ಪಡೆಯುತ್ತಾರಾ ಅಂತ ಕಾಯ್ದು ನೋಡಬೇಕಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News