ಸುದೀಪ್ ಕನ್ನಡ ಪ್ರೇಮಕ್ಕೆ ನೆಟ್ಟಿಗರು ಫಿದಾ.. ಕನ್ನಡ ಪದ ತಪ್ಪಾಗಿ ಉಚ್ಛರಿಸಿದ ಆ್ಯಂಕರ್‌ಗೆ ಕಿಚ್ಚನ ಪಾಠ

Kiccha Sudeep : ಕಾರ್ಯಕ್ರಮದಲ್ಲಿ ಮಾತನಾಡುವಾಗ ಆ್ಯಂಕರ್‌ ಕನ್ನಡ ಪದವನ್ನು ಕನ್ನಡ್ ಎಂದು ತಪ್ಪಾಗಿ ಉಚ್ಛರಿಸುತ್ತಾರೆ. ಆಗ ನಟ ಸದೀಪ್‌, "ಕನ್ನಡ್‌ ಅಲ್ಲ.. ಕನ್ನಡ ಮೇಡಂ, ಹೇಗೆ ಹಿಂದಿ, ಹಿಂದ್ ಆಗುವುದಿಲ್ಲವೋ ಹಾಗೇ ಕನ್ನಡ, ಕನ್ನಡ್ ಆಗಲ್ಲ" ಎಂದು ಖಡಕ್‌ ಆಗಿ ಹೇಳಿದ್ದಾರೆ. 

Written by - Chetana Devarmani | Last Updated : Aug 3, 2022, 02:09 PM IST
  • ಸುದೀಪ್ ಭಾಷೆ ವಿಚಾರಕ್ಕೆ ಹಲವು ಬಾರಿ ಸುದ್ದಿಯಾಗಿದ್ದಾರೆ
  • ನಟ ಕಿಚ್ಚ ಸುದೀಪ್ ಕನ್ನಡ ಪ್ರೇಮಕ್ಕೆ ನೆಟ್ಟಿಗರು ಫಿದಾ
  • ಕನ್ನಡ ಪದ ತಪ್ಪಾಗಿ ಉಚ್ಛರಿಸಿದ ಆ್ಯಂಕರ್‌ಗೆ ಕಿಚ್ಚನ ಪಾಠ
ಸುದೀಪ್ ಕನ್ನಡ ಪ್ರೇಮಕ್ಕೆ ನೆಟ್ಟಿಗರು ಫಿದಾ.. ಕನ್ನಡ ಪದ ತಪ್ಪಾಗಿ ಉಚ್ಛರಿಸಿದ ಆ್ಯಂಕರ್‌ಗೆ ಕಿಚ್ಚನ ಪಾಠ title=
ನಟ ಕಿಚ್ಚ ಸುದೀಪ್

Kiccha Sudeep : ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು... ರಾಷ್ಟ್ರಕವಿ ಕುವೆಂಪು ರಚಿತ ಈ ಕವಿತೆಯನ್ನು ಕನ್ನಡಿಗರೆಲ್ಲರೂ ಕೇಳಿಯೇ ಇರುತ್ತಾರೆ. ಕನ್ನಡ ಕಣ್ಮರೆಯಾಗುತ್ತಿದೆ ಎಂಬ ಕೂಗಿನ ನಡುವೆ ಪ್ರತಿ ಕನ್ನಡಿಗನು ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿಯ ಉಳಿವಿಗೆ ಶ್ರಮಿಸುತ್ತಿದ್ದಾನೆ. ಕನ್ನಡದ ಅನೇಕ ಸಿನಿಮಾ ತಾರೆಯರು ಸಹ ಕನ್ನಡ ಉಳಿಯಲು ತಮ್ಮದೇ ಕೊಡುಗೆ ನೀಡಿದ್ದಾರೆ. ಸದ್ಯ ಅಂತಹ ನಟ-ನಟಿಯರ ಸಾಲಿಗೆ ಕನ್ನಡದ ಅಭಿನಯ ಚಕ್ರವರ್ತಿ ಸುದೀಪ್‌ ಸಹ ಸೇರುತ್ತಿದ್ದಾರೆ. ಎಲ್ಲೇ ಇರಲಿ.. ಹೇಗೆ ಇರಲಿ.. ಕನ್ನಡದ ಮೇಲಿನ ತಮ್ಮ ಅಭಿಮಾನವನ್ನು ಪ್ರತಿಬಿಂಬಿಸುತ್ತಿದ್ದಾರೆ.

ಇದನ್ನೂ ಓದಿ: Vikrant Rona : ಧರೆಗುರುಳಿದ ‘ವಿಕ್ರಾಂತ್ ರೋಣ’ ಕಟೌಟ್..!

ಸುದೀಪ್ ಭಾಷೆ ವಿಚಾರಕ್ಕೆ ಹಲವು ಬಾರಿ ಸುದ್ದಿಯಾಗಿದ್ದಾರೆ. ಈ ಹಿಂದೆ ಸಿನಿಮಾ ಕಾರ್ಯಕ್ರಮವೊಂದರ ವೇದಿಕೆಯ ಮೇಲೆ ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿ ಗಮನ ಸೆಳೆದಿದ್ದರು. ಬಳಿಕ ಬಾಲಿವುಡ್ ನಟ ಅಜಯ್ ದೇವಗನ್‌ ಅವರ ಟ್ವೀಟ್‌ಗೆ ಕಿಚ್ಚಿನಂತೆ ಉತ್ತರಿಸಿದ್ದರು ಕಿಚ್ಚ. ವಿಕ್ರಾಂತ್ ರೋಣ ಚಿತ್ರದ ಪತ್ರಿಕಾಗೋಷ್ಠಿಯೊಂದರಲ್ಲಿ ಸುದೀಪ್ ಅವರ ಪಕ್ಕದಲ್ಲೇ ಕುಳಿತಿದ್ದ ವ್ಯಕ್ತಿಯೊಬ್ಬರು ಕನ್ನಡ್ ಎನ್ನುವುದನ್ನು ಗಮನಿಸಿ ಕನ್ನಡ ಎಂದು ಹೇಳಿಕೊಟ್ಟಿದ್ದರು. 

ಇದೀಗ ವಿಕ್ರಾಂತ್‌ ರೋಣ ಚಿತ್ರ ಬಿಡುಗಡೆಯಾಗಿ, ಭರ್ಜರಿ ಪ್ರದರ್ಶನವನ್ನೂ ಕಾಣುತ್ತಿದೆ. ವಿಕ್ರಾಂತ್‌ ರೋಣ ಸಿನಿಮಾ ಬಳಿಕ ಸುದೀಪ್​​ಗೆ ಉತ್ತರ ಭಾರತದಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಕರ್ಲಿ ಟೇಲ್ಸ್ ಯೂಟ್ಯೂಬ್​​ ಬ್ಲಾಗ್​​​ನಲ್ಲಿ ಊಟ ಸವಿಯುತ್ತಾ, ನಿರೂಪಕಿ ಕಾಮಿಯಾ ಜಾನಿ ಜೊತೆ ಸಂದರ್ಶನದಲ್ಲಿ ಸುದೀಪ್‌ ಭಾಗಿಯಾಗಿದ್ದರು. ಆಗ ನಿರೂಪಕಿಗೆ ಸುದೀಪ್ ಕೆಲವೊಂದು ಕನ್ನಡ ಪದಗಳನ್ನು ಹೇಳಿಕೊಟ್ಟಿದ್ದರು. ಇದೀಗ ಮತ್ತೊಂದು ಹಿಂದಿ ಕಾರ್ಯಕ್ರಮದಲ್ಲಿ ಸುದೀಪ್ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಆ್ಯಂಕರ್‌ಗೆ ಕನ್ನಡದ ಬಗ್ಗೆ ಸುದೀಪ್‌ ಪಾಠ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: ‘ಕಿಚ್ಚ’ನಿಗೆ ಥ್ಯಾಂಕ್ಸ್ ಹೇಳಿ ಗುಡ್ಡಿ ಫ್ರೆಂಡ್ ಭಾಸ್ಕರ್ ಬಗ್ಗೆ ರಾಜಮೌಳಿ ಟ್ವೀಟ್

ಈ ಕಾರ್ಯಕ್ರಮದಲ್ಲಿ ಮಾತನಾಡುವಾಗ ಆ್ಯಂಕರ್‌ ಕನ್ನಡ ಪದವನ್ನು ಕನ್ನಡ್ ಎಂದು ತಪ್ಪಾಗಿ ಉಚ್ಛರಿಸುತ್ತಾರೆ. ಆಗ ನಟ ಸದೀಪ್‌, "ಕನ್ನಡ್‌ ಅಲ್ಲ.. ಕನ್ನಡ ಮೇಡಂ, ಹೇಗೆ ಹಿಂದಿ, ಹಿಂದ್ ಆಗುವುದಿಲ್ಲವೋ ಹಾಗೇ ಕನ್ನಡ, ಕನ್ನಡ್ ಆಗಲ್ಲ" ಎಂದು ಖಡಕ್‌ ಆಗಿ ಹೇಳಿದ್ದಾರೆ. ಆಗ "ನಾವೂ ಇನ್ನೂ ಭಾಷೆ ಕಲಿಯುತ್ತಿದ್ದೇವೆ" ಎಂದು ನಿರೂಪಕಿ ಹೇಳುತ್ತಾರೆ. "ಭಾಷೆ ಕಲಿಯೋದಿರಲಿ, ಭಾಷೆಯ ಹೆಸರನ್ನಾದರೂ ಸರಿಯಾಗಿ ಹೇಳಿ. ನೀವು ತೆಲುಗು, ತಮಿಳು ಎಂದು ಸರಿಯಾಗಿ ಹೇಳ್ತೀರಾ. ಆದರೆ ಕನ್ನಡದ ವಿಚಾರಕ್ಕೆ ಬಂದರೆ ಕನ್ನಡ್ ಅಂತೀರಾ. ಅದು ಕನ್ನಡ" ಎಂದು ಸುದೀಪ್‌ ಹೇಳುತ್ತಾರೆ. ಆಗ ನಿರೂಪಕಿ ಸುದೀಪ್‌ ಅವರ ಬಳಿ ಕ್ಷಮೆ ಕೇಳಿ, ನಂತರ ಕನ್ನಡ ಎಂದು ಸರಿಯಾಗಿ ಹೇಳುತ್ತಾರೆ. ಈ ವಿಡಿಯೋ ಎಲ್ಲ ನೆಟ್ಟಿಗರ ಮನಗೆದ್ದಿದ್ದು, ಕಿಚ್ಚನ ಕನ್ನಡ ಪ್ರೇಮಕ್ಕೆ ಅನೇಕ ಜನರು ಫಿದಾ ಆಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News