ನಟ ಪ್ರಭಾಸ್‌ ಕೆನ್ನೆಗೆ ಹೊಡೆದ ಯುವತಿ..! ವಿಡಿಯೋ ವೈರಲ್‌

Fan slapped actor Prabhas : ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್‌ ಕೆನ್ನೆಗೆ ಯುವತಿಯೊಬ್ಬಳು ಹೊಡೆದಿರುವ ಘಟನೆ ನಡೆದಿದೆ. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅಷ್ಟಕ್ಕೂ ಆ ಯುವತಿ ಡಾರ್ಲಿಂಗ್ ಕೆನ್ನೆಗೆ ಹೊಡೆಯಲು ಕಾರಣ ಏನು..?  ಈ ಕುರಿತ ಕಂಪ್ಲೀಟ್‌ ವರದಿ ಇಲ್ಲಿದೆ.

Written by - Krishna N K | Last Updated : Oct 5, 2023, 12:25 PM IST
  • ನಟ ಪ್ರಭಾಸ್‌ ಕೆನ್ನೆಗೆ ಯುವತಿಯೊಬ್ಬಳು ಹೊಡೆದಿರುವ ಘಟನೆ ನಡೆದಿದೆ.
  • ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
  • ಡಾರ್ಲಿಂಗ್‌ ಪ್ರಭಾಸ್ ನಕ್ಕಿರುವುದು ಅವರ ಫ್ಯಾನ್ಸ್‌ಗೆ ತುಂಬಾ ಇಷ್ಟವಾಗಿದೆ.
ನಟ ಪ್ರಭಾಸ್‌ ಕೆನ್ನೆಗೆ ಹೊಡೆದ ಯುವತಿ..! ವಿಡಿಯೋ ವೈರಲ್‌ title=

Prabhas fans: ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್‌ಗೆ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ. 'ಬಾಹುಬಲಿ' ಸರಣಿಯ ಮೂಲಕ ಪ್ರಭಾಸ್ ವಿಶ್ವ ಮಟ್ಟದಲ್ಲಿ ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದಾರೆ. ಅದರಲ್ಲೂ ಜಪಾನ್‌ನಲ್ಲಿ 'ಬಾಹುಬಲಿ' ಸಿನಿಮಾ ಸಖತ್‌ ಕ್ರೇಜ್‌ ಪಡೆದುಕೊಂಡಿತ್ತು. ಸಧ್ಯ ಪ್ರಭಾಸ್‌ಗೆ ಯುವತಿಯೊಬ್ಬಳು ಕೆನ್ನೆಗೆ ಹೊಡೆದಿರುವ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

ಹೌದು.. ಪ್ರಭಾಸ್‌ಗೆ ಸಾಕಷ್ಟು ಡೈ ಹಾರ್ಡ್ ಫ್ಯಾನ್ಸ್‌ಗಳಿದ್ದಾರೆ. ಪ್ರಭಾಸ್‌ ಕೂಡ ತಮ್ಮ ಅಭಿಮಾನಿಗಳನ್ನ ಡಾರ್ಲಿಂಗ್ಸ್‌ ಅಂತ ಪ್ರೀತಿಯಿಂದ ಕರಿತಾರೆ. ಅಷ್ಟೆ ಅಲ್ಲದೆ, ಕಷ್ಟ ಅಂತ ಬಂದವರಿಗೆ ಸಹಾಯ ಮಾಡುತ್ತಾರೆ. ಹಾಗಾಗಿಯೇ ಪ್ರಭಾಸ್ ಮತ್ತು ಅವರ ಅಭಿಮಾನಿಗಳ ಮಧ್ಯ ಅಪಾರ ಪ್ರೀತಿ ಇದೆ. ಇತ್ತೀಚಿಗೆ ಪ್ಯಾನ್ಸ್‌ ಜೊತೆ ಪ್ರಭಾಸ್‌ ಫೋಟೋಗೆ ಪೋಸ್‌ ನೀಡುತ್ತಿದ್ದಾಗ ತಮಾಷೆಯ ಘಟನೆ ನಡೆದಿದೆ. 

 
 
 
 

 
 
 
 
 
 
 
 
 
 
 

A post shared by telugutiktokofficial (@telugutiktok_official)

ಇದನ್ನೂ ಓದಿ: ಕರಾವಳಿ ಭಾಗದ ಕಥಾಹಂದರ ಹೊಂದಿರುವ "ಕುದ್ರು" ಚಿತ್ರ ಅಕ್ಟೋಬರ್ 13 ರಂದು ತೆರೆಗೆ

ವಿಮಾನ ನಿಲ್ದಾಣದಲ್ಲಿ ಪ್ರಭಾಸ್‌ ನೋಡಿ ಹುಚ್ಚೆದ್ದು ಕುಣಿದ ಯುವತಿ ಅವರ ಜೊತೆ ಫೋಟೊ ತೆಗೆಸಿಕೊಳ್ಳುತ್ತಾಳೆ. ಇದರಿಂದ ಫುಲ್‌ ಖುಷಿಯಾಗಿ ಡಾರ್ಲಿಂಗ್‌ ಕೆನ್ನೆ ಮುಟ್ಟಿ ಕುಣಿದಾಡುತ್ತಾಳೆ. ಈ ಕುರಿತ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದ್ದಾರೆ. ಯುವತಿಯ ಪ್ರೀತಿ ನೋಡಿ ಪ್ರಭಾಸ್ ನಕ್ಕಿರುವುದು ಅವರ ಫ್ಯಾನ್ಸ್‌ಗೆ ತುಂಬಾ ಇಷ್ಟವಾಗಿದೆ.

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸದ್ಯ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮೊದಲನೆಯದು ಸಲಾರ್.. ಈ ವರ್ಷ ಡಿಸೆಂಬರ್ 22 ರಂದು ಬಿಡುಗಡೆಗೆ ಸಿದ್ಧವಾಗಿದೆ. ನಿರ್ದೇಶಕ ನಾಗ್ ಅಶ್ವಿನ್ ಜೊತೆಯಲ್ಲಿ ತಯಾರಾಗುತ್ತಿರುವ ‘ಕಲ್ಕಿ’ ಸಿನಿಮಾದ ಶೂಟಿಂಗ್ ಅಂತಿಮ ಹಂತದಲ್ಲಿದೆ. ಈ ಸಿನಿಮಾ ಮುಂದಿನ ವರ್ಷ ಅಂದರೆ 2024ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ಸಂದೀಪ್ ರೆಡ್ಡಿ ವಂಗ ನಿರ್ದೇಶನದಲ್ಲಿ ‘ಸ್ಪಿರಿಟ್’ ಸಿನಿಮಾ ಕೂಡ ತಯಾರಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News