Natabhayankara: "ನಟ ಭಯಂಕರ" ನಿಗೆ "ಮದಗಜ"ನ ಸಾಥ್.!

Natabhayankara: ತಮ್ಮ ಮಾತಿನ‌ ಮೂಲಕವೇ ಮನೆಮಾತಾಗಿರುವ ಒಳ್ಳೆ ಹುಡುಗ ಪ್ರಥಮ್ (Pratham) ಪ್ರಥಮ ಬಾರಿಗೆ ನಿರ್ದೇಶಿಸಿರುವ ಚಿತ್ರ " ನಟ ಭಯಂಕರ". ಈ ಚಿತ್ರದ ನಾಯಕ ಕೂಡ ಪ್ರಥಮ್ ಅವರೆ.

Written by - YASHODHA POOJARI | Edited by - Chetana Devarmani | Last Updated : Mar 24, 2022, 01:32 PM IST
  • "ನಟ ಭಯಂಕರ" ನಿಗೆ "ಮದಗಜ"ನ ಸಾಥ್.!
  • ನಟ ಭಯಂಕರ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ
  • ಈ ಚಿತ್ರದ ನಾಯಕ ಕೂಡ ಪ್ರಥಮ್
Natabhayankara: "ನಟ ಭಯಂಕರ" ನಿಗೆ "ಮದಗಜ"ನ ಸಾಥ್.!  title=
ನಟ ಭಯಂಕರ

ತಮ್ಮ ಮಾತಿನ‌ ಮೂಲಕವೇ ಮನೆಮಾತಾಗಿರುವ ಒಳ್ಳೆ ಹುಡುಗ ಪ್ರಥಮ್ (Pratham) ಪ್ರಥಮ ಬಾರಿಗೆ ನಿರ್ದೇಶಿಸಿರುವ ಚಿತ್ರ " ನಟ ಭಯಂಕರ". ಈ ಚಿತ್ರದ ನಾಯಕ ಕೂಡ ಪ್ರಥಮ್ ಅವರೆ.

ಇದನ್ನೂ ಓದಿ:House Party: ಹೌಸ್ ಪಾರ್ಟಿ ಮಾಡೋರಿಗೆ ಸಿಹಿ ಸುದ್ದಿ, ರಿಲೀಸ್ ಆಯ್ತು ಆಲ್ ಓಕೆ ನ್ಯೂ ಸಾಂಗ್!

ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. "ಮದಗಜ" ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಹಾಡುಗಳನ್ನು ಬಿಡುಗಡೆ  ಮಾಡಿದರು.‌ ಲಹರಿ ಸಂಸ್ಥೆಯ ವೇಲು, ಜಿಲ್ಲಾಧಿಕಾರಿ ದಯಾನಂದ್, ಗೀತರಚನೆಕಾರ ಡಾ.ವಿ.ನಾಗೇಂದ್ರಪ್ರಸಾದ್, ಗಿರೀಶ್, ಅರ್ಜುನ್ ಕುಮಾರ್ ಬಂಗಾರಪ್ಪ ಸೇರಿದಂತೆ ಅನೇಕ ಗಣ್ಯರು ಆಡಿಯೋ ರಿಲೀಸ್ ಗೆ ಸಾಕ್ಷಿಯಾದರು.

ಪ್ರಥಮ್ ಕಾನ್ಫಿಡೆನ್ಸ್ ಇರುವ ಹುಡುಗ. ಬಿಗ ಬಾಸ್ ನ (Bigg Boss) ಆರಂಭದಲ್ಲಿ  ಇವರನ್ನು ನೋಡಿ, ಏನಪ್ಪಾ, ಹೀಗೆ ಮಾತಾಡುತ್ತಾರೆ? ಅಂದು ಕೊಂಡೆ. ನಂತರ ನಾನೇ ಅವರ ಅಭಿಮಾನಿಯಾದೆ. ಈಗ ನಟನೆ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ರಘು ದೀಕ್ಷಿತ್ (Raghu Dikshit) ಹಾಗೂ ನಾನು ಇಷ್ಟಪಡುವ ಉಪ್ಪಿ ಸರ್ ಹಾಡಿರುವ ಹಾಡುಗಳು ನನಗೆ ಇಷ್ಟವಾಯಿತು. ಸಿನಿಮಾ ಕೂಡ ಉತ್ತಮವಾಗಿ ಮೂಡಿಬಂದಿರುತ್ತದೆ ಎಂಬ ನಂಬಿಕೆಯಿದೆ ಎಂದ ಶ್ರೀಮುರಳಿ,  ಪ್ರಥಮ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಒಳಿತನ್ನು ಹಾರೈಸಿದರು.

ಜಿಲ್ಲಾಧಿಕಾರಿ ದಯಾನಂದ್, ಲಹರಿ ವೇಲು ಹಾಗೂ ವಿ.ನಾಗೇಂದ್ರಪ್ರಸಾದ್ ಸಹ ಪ್ರಥಮ್ ಬಗ್ಗೆ ಮೆಚ್ಚುಗೆಯ ಮಾತನಾಡಿ ಚಿತ್ರಕ್ಕೆ ಶುಭ ಕೋರಿದರು. 

ಇದನ್ನೂ ಓದಿ:ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಬಿಚ್ಚುಗತ್ತಿ ಹೀರೋ.. ಯುವಕರಿಗೆ ಮಾದರಿ ರಾಜವರ್ಧನ್ ನಡೆ!

ಇದು ನಮ್ಮ ಚಿತ್ರದ ಮೊದಲ ಪತ್ರಿಕಾಗೋಷ್ಠಿ. ನನ್ನ ಮೊದಲ ನಿರ್ದೇಶನದ ಚಿತ್ರ ಕೂಡ. ಭಾರೀ ಅಹಂಕಾರವಿರುವ ಮನುಷ್ಯ ಒಬ್ಬರಿಗೆ ಮಾತು ಕೊಟ್ಟಾಗ ಹೇಗೆ ಬದಲಾಗುತ್ತಾನೆ ಎಂಬುದೇ ಚಿತ್ರದ ಮುಖ್ಯ ಕಥಾವಸ್ತು. ಇನ್ನೊಂದು ಕಡೆ ಸ್ಟುಪಿಡ್ ಸೂಪರ್ ಸ್ಟಾರ್ ಹಾಗೂ ಕುರುಡಿ ದೆವ್ವದ ನಡುವೆ ನಡೆಯುವ ಕಥೆ ಕೂಡ ಅನ್ನಬಹುದು. ಇಂದು ನಟಭಯಂಕರ ಆಡಿಯೋ ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ಟ್ರೇಲರ್ ಅನಾವರಣಗೊಳಿಸುತ್ತೇವೆ. ಮೇ 13 ರಂದು ಚಿತ್ರವನ್ನು ತೆರೆಗೆ ತರುತ್ತೇವೆ ಎಂದ ಪ್ರಥಮ್, ಕಾರ್ಯಕ್ರಮಕ್ಕೆ ಆಗಮಿಸಿದ್ದ ಶ್ರೀಮುರಳಿ ಸೇರಿದಂತೆ ಎಲ್ಲಾ ಗಣ್ಯರಿಗೆ ಧನ್ಯವಾದ ತಿಳಿಸಿದರು.

ನಾಯಕಿ ಫ್ರಾನ್ಸ್ ನಿವಾಸಿ ನಿಹಾರಿಕ, ಪ್ರಮುಖ ಪಾತ್ರಧಾರಿ ಚಂದನ, ಸಂಗೀತ ನೀಡಿರುವ ಪ್ರದ್ಯೋತನ್ ಚಿತ್ರದ ಕುರಿತು ಮಾತನಾಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News