UKನಲ್ಲಿ ದಾಖಲೆ ಬರೆದ ದಳಪತಿ ವಿಜಯ್ : 24 ಗಂಟೆಗಳಲ್ಲಿ 'ಲಿಯೋ' 10,000 ಮುಂಗಡ ಟಿಕೆಟ್‌ ಬುಕ್‌

Leo update : ಯುಕೆನಲ್ಲಿ ದಳಪತಿ ವಿಜಯ್ ಮತ್ತು ತ್ರಿಶಾ ಹಾಗೂ ಸಂಜಯ್ ದತ್ ನಟನೆಯ 'ಲಿಯೋ' ಸಿನಿಮಾ ದಾಖಲೆ ನಿರ್ಮಿಸಿದೆ. ಕೇವಲ 24 ಗಂಟೆಗಳಲ್ಲಿ 10,000 ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾರಾಟವಾಗಿದೆ.

Written by - Krishna N K | Last Updated : Sep 9, 2023, 02:14 PM IST
  • ರಿಲೀಸ್‌ಗೂ ಮುನ್ನವೆ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ ಲಿಯೋ.
  • ಕೇವಲ 24 ಗಂಟೆಗಳಲ್ಲಿ 10,000 ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ.
  • ಲಿಯೋನಲ್ಲಿ ವಿಜಯ್, ತ್ರಿಶಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
UKನಲ್ಲಿ ದಾಖಲೆ ಬರೆದ ದಳಪತಿ ವಿಜಯ್ : 24 ಗಂಟೆಗಳಲ್ಲಿ 'ಲಿಯೋ' 10,000 ಮುಂಗಡ ಟಿಕೆಟ್‌ ಬುಕ್‌ title=

Leo movie ticket booking : ದಳಪತಿ ವಿಜಯ್ ಅಭಿನಯದ ಬಹು ನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್‌ ಸಿನಿಮಾ 'ಲಿಯೋ' ಮುಂಗಡ ಬುಕ್ಕಿಂಗ್ ಯುನೈಟೆಡ್ ಕಿಂಗ್‌ಡಂನಲ್ಲಿ ಪ್ರಾರಂಭವಾಗಿದೆ. 2023ರ ಅತ್ಯುತ್ತಮ ಚಿತ್ರಗಳಲ್ಲಿ ಈ ಚಿತ್ರವೂ ಒಂದು. ದಳಪತಿ ವಿಜಯ್, ತ್ರಿಶಾ ಮತ್ತು ಸಂಜಯ್ ದತ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಲಿಯೋ ಸಿನಿಮಾ ಅಕ್ಟೋಬರ್ 19 ರಂದು ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೆ ಬಿಡುಗಡೆಯಾದ ಚಿತ್ರವು UK ನಲ್ಲಿ £100k+ ಬುಕಿಂಗ್‌ಗಳನ್ನು ದಾಖಲಿಸಿದೆ. ಬಿಡುಗಡೆಗೆ ಇನ್ನೂ ಒಂದು ತಿಂಗಳ ಕಾಲಾವಕಾಶವಿದ್ದು, ಇಂದಿನಿಂದಲೇ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಸೃಷ್ಟಿಸುತ್ತಿದೆ.

ಇದನ್ನೂ ಓದಿ: ಡಾಲಿ ಹುಟ್ಟುಹಬ್ಬಕ್ಕೆ ಸಿಡಿಪಿ ರಿಲೀಸ್‌ ಮಾಡಲಿದ್ದಾರೆ ಆ ಸ್ಪೆಷಲ್‌ ಗೆಸ್ಟ್‌

ದಳಪತಿ ವಿಜಯ್‌ಗೆ ಫ್ಯಾನ್‌ ವರ್ಲ್ಡ್‌ ಲೆವೆಲ್‌ನಲ್ಲಿ ಅಭಿಮಾನಿಗಳಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಯುಕೆನಲ್ಲಿ ಕೇವಲ 24 ಗಂಟೆಗಳಲ್ಲಿ 'ಲಿಯೋ' ಚಿತ್ರದ 10,000 ಮುಂಗಡ ಟಿಕೆಟ್‌ ಬುಕ್‌ ಆಗಿವೆ ಎಂದು ವರದಿಯಾಗಿದೆ. ಅಲ್ಲದೆ, ಯುಕೆನಲ್ಲಿ ಇದು ಅತ್ಯಂತ ಯಶಸ್ವಿ ಕಾಲಿವುಡ್‌ ಓಪನರ್ ಸಿನಿಮಾ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. 

 
 
 
 

 
 
 
 
 
 
 
 
 
 
 

A post shared by Taran Adarsh (@taranadarsh)

ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಈ ಕುರಿತು X ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. "#Leo ಯುಕೆನಲ್ಲಿ 120 ಸ್ಥಳಗಳಲ್ಲಿ ಮುಂಗಡ ಟಿಕೆಟ್‌ ಬುಕ್ಕಿಂಗ್‌ ತೆರೆಯುವ ಹೊರತಾಗಿಯೂ ಮಾರಾಟದಲ್ಲಿ £100k ದಾಟಿದೆ ಎಂದು ಚಿತ್ರ ಸಂಗ್ರಹಣೆ ಕುರಿತು ಮಾಹಿತಿ ನೀಡಿದ್ದಾರೆ. ಮುಂಗಡ ಬುಕ್ಕಿಂಗ್‌ಗಳ ಪ್ರಕಾರ, 'ಲಿಯೋ' ಇದುವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರವಾಗುವ ಸಾಧ್ಯತೆ ಇದೆ. 

ಇದನ್ನೂ ಓದಿ: ರಣವೀರ್ ಸಿಂಗ್‌ನಿಂದ ಆಯುಷ್ಮಾನ್‌ವರೆಗೆ ಈ ನಟರು ಕಾಸ್ಟಿಂಗ್ ಕೌಚ್‌ನ ಕಪಿಮುಷ್ಠಿಗೆ ಸಿಲುಕಿದವರು!

14 ವರ್ಷಗಳ ನಂತರ ನಟ ವಿಜಯ್ ಮತ್ತು ತ್ರಿಷಾ ಮತ್ತೆ ಒಂದಾಗಿ ನಟಿಸುತ್ತಿರುವ ಸಿನಿಮಾ ಲಿಯೋ. ಈ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದಾರೆ. ಅಕ್ಟೋಬರ್ 19 ರಂದು ಲಿಯೋ ರಿಲೀಸ್‌ ಆಗಲಿದೆ. ಈಗಾಗಲೇ ನೆಟ್‌ಫ್ಲಿಕ್ಸ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ. ಈ ಸಿನಿಮಾ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News