Actor Vishal want to date with Rashmika : ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಮೊದಲ ಸಿನಿಮಾದ ನಿರ್ಮಾಣ ಸಂಸ್ಥೆಯ ಹೆಸರನ್ನು ಬಹಿರಂಗಪಡಿಸದೆ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಕಿರಿಕ್ ಬ್ಯೂಟಿ ಹೊಸ ವಿಷಯವಾಗಿ ಸದ್ದು ಮಾಡುತ್ತಿದ್ದಾರೆ. ಕಾಲಿವುಡ್ ಸ್ಟಾರ್ ನಟ ವಿಶಾಲ್ ರಶ್ಮಿಕಾ ಜೊತೆ ಡೇಟ್ ಮಾಡಲು ಬಯಸಿದ್ದಾರೆ. ಈ ಕುರಿತ ವಿಶಾಲ್ ಹೇಳಿಕೆ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಇದನ್ನೂ ಓದಿ : Thalapathy Vijay : ಸರಳ ವ್ಯಕ್ತಿತ್ವದ ನಟ ವಿಜಯ್ ಧರಿಸಿರುವ ಈ ಚಪ್ಪಲಿಯ ಬೆಲೆ ಗೊತ್ತಾ?
ಸೌತ್ ಸ್ಟಾರ್ ವಿಶಾಲ್ ಸದ್ಯ 'ಲಾಠಿ' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಬಗ್ಗೆ ವಿಶಾಲ್ ಅಚ್ಚರಿಯ ವಿಚಾರ ವ್ಯಕ್ತಪಡಿಸಿದ್ದಾರೆ. ರಶ್ಮಿಕಾ ಟ್ರೋಲ್ ಆಗಿದ್ದರೂ ಅವರ ಅಭಿಮಾನಿಗಳು ಮಾತ್ರ ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ಸ್ಟಾರ್ ನಟರಿಗೂ ರಶ್ಮಿಕಾ ತುಂಬಾ ಇಷ್ಟ. ಕೆಲವು ದಿನಗಳ ಹಿಂದೆ ತೆಲುಗು ನಟ ಬಾಲಕೃಷ್ಣ ರಶ್ಮಿಕಾ ತಮ್ಮ ಇತ್ತೀಚಿನ ಕ್ರಶ್ ಎಂದು ಹೇಳಿಕೊಂಡಿದ್ದರು. ಇದೀಗ ಮತ್ತೋರ್ವ ನಟ ವಿಶಾಲ್ ರಶ್ಮಿಕಾ ಜೊತೆ ಸೆಲೆಬ್ರಿಟಿ ಡೇಟ್ ಗೆ ಹೋಗಬೇಕು ಎಂದು ಹೇಳಿದ್ದಾರೆ.
ತಮಿಳು ನಟ ವಿಶಾಲ್ ರಶ್ಮಿಕಾ ಜೊತೆ ಸೆಲೆಬ್ರಿಟಿ ಡೇಟ್ ಹೋಗುವ ಬಗ್ಗೆ ಸುಳಿವು ನೀಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ, ವಿಶಾಲ್ ಲಾಠಿ ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರಚಾರದ ವೇಳೆ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ : ʻನೆಹರೂಜಿ ಡೋಪ್ ಹೊಡಿತಿದ್ರು, ಗಾಂಧೀಜಿ..': ವಿವಾದಕ್ಕೆ ಕಾರಣವಾದ ಸಚಿವರ ಹೇಳಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.