Thalapathy Vijay : ಸರಳ ವ್ಯಕ್ತಿತ್ವದ ನಟ ವಿಜಯ್ ಧರಿಸಿರುವ ಈ ಚಪ್ಪಲಿಯ ಬೆಲೆ ಗೊತ್ತಾ?

Thalapathy Vijay : ದಳಪತಿ ವಿಜಯ್ ಅವರ ಇತ್ತೀಚಿನ ಫೋಟೋ ಒಂದೆರಡು ದಿನಗಳ ಹಿಂದೆ ಆನ್‌ಲೈನ್‌ನಲ್ಲಿ ವೈರಲ್‌ ಆಗುತ್ತಿದೆ. ಇದು ಇಂಟರ್ನೆಟ್‌ನಲ್ಲಿ ಬಿರುಗಾಳಿಯಂತೆ ಹರಿದಾಡುತ್ತಿದೆ. ಸದಾ ಸರಳತೆ ಮೆರೆಯುವ ವಿಜಯ್‌ ಅವರ ಬಗ್ಗೆ ಇದೀಗ ವಿಚಾರವೊಂದು ಮುನ್ನೆಲೆಗೆ ಬಂದಿದೆ. ಅದು ಅವರು ಧರಿಸಿದ ಚಪ್ಪಲಿ. 

Written by - Chetana Devarmani | Last Updated : Dec 15, 2022, 03:19 PM IST
  • ಸರಳ ವ್ಯಕ್ತಿತ್ವದ ನಟ ದಳಪತಿ ವಿಜಯ್
  • ನಟ ವಿಜಯ್ ಧರಿಸಿರುವ ಈ ಚಪ್ಪಲಿಯ ಬೆಲೆ ಗೊತ್ತಾ?
  • ವೈರಲ್‌ ಆದ ನಟ ವಿಜಯ್ ಚಪ್ಪಲಿ ಬೆಲೆ
Thalapathy Vijay : ಸರಳ ವ್ಯಕ್ತಿತ್ವದ ನಟ ವಿಜಯ್ ಧರಿಸಿರುವ ಈ ಚಪ್ಪಲಿಯ ಬೆಲೆ ಗೊತ್ತಾ? title=
ದಳಪತಿ ವಿಜಯ್

Thalapathy Vijay slipper price : ದಳಪತಿ ವಿಜಯ್ ಅವರ ಇತ್ತೀಚಿನ ಫೋಟೋ ಒಂದೆರಡು ದಿನಗಳ ಹಿಂದೆ ಆನ್‌ಲೈನ್‌ನಲ್ಲಿ ವೈರಲ್‌ ಆಗುತ್ತಿದೆ. ಇದು ಇಂಟರ್ನೆಟ್‌ನಲ್ಲಿ ಬಿರುಗಾಳಿಯಂತೆ ಹರಿದಾಡುತ್ತಿದೆ. ಮಂಗಳವಾರ, ದಳಪತಿ ವಿಜಯ್ ಅವರು ನಾಲ್ಕು ಜಿಲ್ಲೆಗಳ ತಮ್ಮ ವಿಜಯ್ ಮಕ್ಕಳ್ ಇಯಕ್ಕಂನ ಕಾರ್ಯನಿರ್ವಾಹಕರನ್ನು ಭೇಟಿ ಮಾಡಿದರು ಮತ್ತು ಅವರಿಗೆ ರುಚಿಕರವಾದ ಊಟವನ್ನು ನೀಡಿದರು. ಅಭಿಮಾನಿಗಳು ಅವರೊಂದಿಗೆ ಮಾತನಾಡಿದರು, ಫೋಟೋ ತೆಗೆದುಕೊಂಡರು. ಈ ವೇಳೆ ವಿಶೇಷ ಚೇತನ ಅಭಿಮಾನಿಯನ್ನು ಹೊತ್ತ ನಟ ವಿಜಯ್‌ ಅವರ ಫೋಟೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಅವರು ತಮ್ಮ ಅಭಿಮಾನಿಗೆ ತೋರಿಸಿದ ಪ್ರೀತಿಯನ್ನು ಅನೇಕರು ಶ್ಲಾಘಿಸಿದರು. 

ಇದನ್ನೂ ಓದಿ : BBK 9 : ಗಳಿಸಿದ ಅಂಕ ಉಳಿಸಿಕೊಳ್ಳಲು ಪರದಾಟ! ಈ ವಾರ ಯಾರು ಔಟ್‌? ಯಾರಾಗ್ತಾರೆ ಇನ್‌!

ಸದಾ ಸರಳತೆ ಮೆರೆಯುವ ವಿಜಯ್‌ ಅವರ ಬಗ್ಗೆ ಇದೀಗ ವಿಚಾರವೊಂದು ಮುನ್ನೆಲೆಗೆ ಬಂದಿದೆ. ಅದು ಅವರು ಧರಿಸಿದ ಚಪ್ಪಲಿ. ಅತಿ ದೊಡ್ಡ ಮೊತ್ತದ ಸಂಭಾವನೆ ಪಡೆಯುವ ಭಾರತದ ಕೆಲವೇ ಕೆಲು ಸ್ಟಾರ್ ನಟರಲ್ಲಿ ನಟ ವಿಜಯ್‌ ಒಬ್ಬರು. ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ರಜನೀಕಾಂತ್ ಸಹ ವಿಜಯ್‌ ಅವರಷ್ಟು ಸಂಭಾವನೆ ಪಡೆಯಲ್ಲ ಎಂಬ ಮಾತಿದೆ.  

 

 

ವೈರಲ್‌ ಆಗುತ್ತಿರುವ ಫೋಟೋದ ಬಗ್ಗೆ ಹೇಳುವುದಾದರೆ, ದಳಪತಿ ಸರಳವಾದ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಜೊತೆ ಚಪ್ಪಲಿ ಧರಿಸಿದ್ದಾರೆ. ಡ್ರೆಸ್‌ ನೋಡಲು ಸಿಂಪಲ್‌ ಆಗಿಯೇ ಕಂಡರೂ ಅದು ದುಬಾರಿಯಾಗಿದೆ. ವಿಜಯ್‌ ಅವರ ಸರಳತೆ ಎಷ್ಟು ದುಬಾರಿ ಎಂಬ ವಿಚಾರ ಈಗ ಟ್ರೋಲ್‌ ಆಗ್ತಿದೆ. 

ಇದನ್ನೂ ಓದಿ : ಟ್ರೇಲರ್ ಮೂಲಕ ಸದ್ದು ಮಾಡುತ್ತಿದೆ "ನಾನು, ಅದು ಮತ್ತು ಸರೋಜ"

ಜನಪ್ರಿಯ ಪಾದರಕ್ಷೆ ಬ್ರಾಂಡ್ Birkenstockನ ವೆಬ್‌ಸೈಟ್‌ನಲ್ಲಿ ಈ ಚಪ್ಪಲಿಯ ಬೆಲೆಯ ನೋಡಿದ್ರೆ ನೀವು ದಂಗಾಗ್ತೀರಾ. ವೈರಲ್ ಫೋಟೋದಲ್ಲಿ Birkenstockನ ವೆಬ್‌ಸೈಟ್‌ನಲ್ಲಿ ವಿಜಯ್ ಧರಿಸಿದ್ದ ಮಾಡೆಲ್ ಪಾದರಕ್ಷೆಯನ್ನು ನೋಡಬಹುದು. ಈ ಮಾದರಿಯ ಚಪ್ಪಲಿಗಳ ಬೆಲೆ ರೂ. 5,999. ಆಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News