'ಅಮ್ಮಾವ್ರ ಗಂಡ' ಚಿತ್ರದಲ್ಲಿನ ನಟಿ ಭಾಗ್ಯಶ್ರೀ ಗಂಡನಿಂದ ದೂರಾಗಿದ್ದ ಬಗ್ಗೆ ಹೇಳಿದ್ದೇನು?

1990 ರಲ್ಲಿ ಹಿಮಾಲಯ ದಾಸಾನಿಯನ್ನು ಮದುವೆಯಾದ ಬಾಲಿವುಡ್ ನಟಿ ಭಾಗ್ಯಶ್ರೀ ಅವರು ಮಧ್ಯದಲ್ಲಿ ಒಂದೂವರೆ ವರ್ಷ ಬೇರೆಯಾಗಿದ್ದರು ಎನ್ನುವ ಸಂಗತಿಯನ್ನು ಬಹಿರಂಗಪಡಿಸಿದರು. ಅಂದಿನಿಂದ ಅವರು ಈ ವಿಚಾರವಾಗಿ ತೇಪೆ ಹಾಕಿದರೂ, ಆ ಹಂತವನ್ನು ನೆನಪಿಸಿಕೊಳ್ಳುವಾಗ ಅವರು ಈಗಲೂ ಹೆದರುತ್ತಾರೆ ಎಂದು ಹೇಳಿದರು.

Updated: Feb 27, 2020 , 04:30 PM IST
 'ಅಮ್ಮಾವ್ರ ಗಂಡ' ಚಿತ್ರದಲ್ಲಿನ ನಟಿ ಭಾಗ್ಯಶ್ರೀ ಗಂಡನಿಂದ ದೂರಾಗಿದ್ದ ಬಗ್ಗೆ ಹೇಳಿದ್ದೇನು?
file photo

ನವದೆಹಲಿ: 1990 ರಲ್ಲಿ ಹಿಮಾಲಯ ದಾಸಾನಿಯನ್ನು ಮದುವೆಯಾದ ಬಾಲಿವುಡ್ ನಟಿ ಭಾಗ್ಯಶ್ರೀ ಅವರು ಮಧ್ಯದಲ್ಲಿ ಒಂದೂವರೆ ವರ್ಷ ಬೇರೆಯಾಗಿದ್ದರು ಎನ್ನುವ ಸಂಗತಿಯನ್ನು ಬಹಿರಂಗಪಡಿಸಿದರು. ಅಂದಿನಿಂದ ಅವರು ಈ ವಿಚಾರವಾಗಿ ತೇಪೆ ಹಾಕಿದರೂ, ಆ ಹಂತವನ್ನು ನೆನಪಿಸಿಕೊಳ್ಳುವಾಗ ಅವರು ಈಗಲೂ ಹೆದರುತ್ತಾರೆ ಎಂದು ಹೇಳಿದರು.

ಆನ್‌ಲೈನ್‌ನಲ್ಲಿ ಶೇರ್ ಮಾಡಿಕೊಂಡಿರುವ ವೀಡಿಯೊವೊಂದರಲ್ಲಿ ಭಾಗ್ಯಶ್ರೀ, “ಹೌದು, ಹಿಮಾಲೆ ಜಿ ನನ್ನ ಮೊದಲ ಪ್ರೇಮ ಮತ್ತು ಹೌದು, ನಾನು ಅವರನ್ನು ಮದುವೆಯಾಗಿದ್ದೆ. ಲೆಕಿನ್ ಏಕ್ ಆರ್ಸಾ ಥಾ ಬೀಚ್ ಮೇ ಜಬ್ ಹಮ್ ಜುಡಾ ಹೋ ಗಯೆ (ಆದರೆ ನಾವು ಬೇರ್ಪಟ್ಟ ಸಮಯವಿತ್ತು). ಮತ್ತು ‘ನಾನು ಅವನನ್ನು ನನ್ನ ಜೀವನದಲ್ಲಿ ಪಡೆಯದಿದ್ದರೆ ಮತ್ತು ನಾನು ಬೇರೊಬ್ಬರನ್ನು ಮದುವೆಯಾಗಿದ್ದರೆ ಏನು ಫಲ?’ ಎಂಬ ಭಾವನೆ ನನ್ನಲ್ಲಿತ್ತು, ಏಕೆಂದರೆ ಅದು ನನಗೆ ಆ ಹಂತಕ್ಕೆ ತಲುಪಿತು. ಇದರಿಂದಾಗಿ ನಾವು ಒಂದೂವರೆ ವರ್ಷ ದೂರಾಗಿದ್ದೆವು.' ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್ ಎದುರು ಸೂರಜ್ ಬರ್ಜತ್ಯ ಅವರ ಮೈನೆ ಪ್ಯಾರ್ ಕಿಯಾ ಚಿತ್ರರಂಗದಲ್ಲಿ ಚಿತ್ರರಂಗದಲ್ಲಿ ಭರ್ಜರಿ ಪಾದಾರ್ಪಣೆ ಮಾಡಿದ ಭಾಗ್ಯಶ್ರೀ ಅವರು ಶಾಲೆಯಲ್ಲಿದ್ದಾಗ ಹಿಮಾಲಯ ಅವರನ್ನು ಭೇಟಿಯಾದರು. ಆಕೆಯ ಪೋಷಕರು ಇದಕ್ಕೆ ವಿರೋಧಿಸಿದ್ದರೂ ಕೂಡ, ಅವರು ಓಡಿ ಹೋಗಿ ಸ್ನೇಹಿತರ ಸಮ್ಮುಖದಲ್ಲಿ ದೇವಾಲಯವೊಂದರಲ್ಲಿ ವಿವಾಹವಾದರು.

ಮೈನೆ ಪ್ಯಾರ್ ಕಿಯಾ ಯಶಸ್ಸಿನ ನಂತರ ಆಫರ್‌ಗಳಿಂದ ತುಂಬಿ ತುಳುಕುತ್ತಿದ್ದರೂ, ಭಾಗ್ಯಶ್ರೀ ಚಲನಚಿತ್ರಗಳಲ್ಲಿನ ತನ್ನ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದರು. ಆದರೆ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು ಇದಕ್ಕೆ ತಮ್ಮದು ಯಾವುದೇ  ಪಶ್ಚಾತ್ತಾಪವಿಲ್ಲ, ನಾನು ನನ್ನ ಜೀವನವನ್ನು, ನನ್ನ ಕುಟುಂಬವನ್ನು ಈಗ ನೋಡುತ್ತೇನೆ ಮತ್ತು ನನಗೆ ತುಂಬಾ ಹೆಮ್ಮೆ ಎನಿಸುತ್ತದೆ. ಎಂದು ಹೇಳಿದ್ದಾರೆ.