Nivedita Gowda Viral Video: 2024 ನೇ ಸಾಲು ಮುಗಿದು 2025 ನೇ ಸಾಲನ್ನು ಜನರು ಅತೀ ವಿಜೃಂಭಣೆಯಿಂದ ಬರಮಾಡಿಕೊಂಡಿದ್ದಾರೆ. ಅದರಲ್ಲೂ ತಾರೆಯರು ಪಬ್ನಲ್ಲಿ ಪಾರ್ಟಿ ಮಾಡಿ, ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷವನ್ನು ವೆಲ್ಕಮ್ ಮಾಡಿದ್ದಾರೆ. ಅಷ್ಟೆ ಅಲ್ಲ ಕಳೆದ ವರ್ಷ ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ನಿವೇದಿತಾ ಗೌಡ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ರೀಲ್ಸ್ ಶೇರ್ ಮಾಡಿಕೊಳ್ಳುವ ಮೂಲಕ ಟ್ರೋಲ್ ಪೇಜ್ಗಳಿಗೆ ಆಹಾರವಾಗುತ್ತಿದ್ದಾರೆ. ಇದೀಗ ಹೊಸ ವರ್ಷದ ಸಂಭ್ರಮದ ಖಷಿಯಲ್ಲಿ ನಿವೇದಿತ ಗೌಡ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೌದು, ನಿವೇದಿತಾ ಗೌಡ ಇತ್ತೀಚೆಗೆ ಹಾಟ್ ಹಾಟ್ ರೀಲ್ಸ್ ಮಾಡುವ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ತುಂಡು ತುಂಡು ಬಟ್ಟೆ ಧರಿಸಿ ರೀಲ್ಸ್ ಮಾಡಿ ಪೋಸ್ಟ್ ಮಾಡಿ ಪಡ್ಡೆ ಹುಡುಗರ ಹಾರ್ಟ್ ಬೀಟ್ ಜಾಸ್ತಿ ಮಾಡುತ್ತಿದ್ದಾರೆ. ಸದ್ಯ, 10-12 ದಿನಗಳಿಂದ ನ್ಯೂಯಾರ್ಕ್ ನಗರಕ್ಕೆ ಹಾರಿರುವ ನಿವ್ವಿ ತಮ್ಮ ಸುಂದರ್ ಕ್ಷಣಗಳನ್ನು ಪೋಸ್ಟ್ ಮಾಡಿ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಕಳೆದ ವಾರವಷ್ಟೆ ಕಟು ಮಸ್ತಾದ ಹುಡುಗನ ಜೊತೆ ಆಕಾಶ ಬುಟ್ಟಿಯನ್ನು ತೇಲಿ ಬಿಟ್ಟು ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದರು. ನಿಮ್ಮ ಜೊತೆ ಇರುವ ಆ ಸಿಕ್ಸ್ ಪ್ಯಾಕ್ ಹುಡುಗ ಯಾರು ಎಂದು ನೆಟ್ಟಿಗರು ಪ್ರಶ್ನಿಸಲು ಆರಂಭಿಸಿದ್ದರು. ಇದೀಗ ಇದರ ಬೆನ್ನಲ್ಲೆ ನಿವೇದಿತಾ ಗೌಡ ಮತ್ತೊಂದು ರೀಲ್ಸ್ ಪೋಸ್ಟ್ ಮಾಡಿದ್ದಾರೆ.
ಸದ್ಯ ನಿವೇದಿತಾ ಗೌಡ ಶೇರ್ ಮಾಡಿರುವ ಪೋಸ್ಟ್ನಲ್ಲಿ ಅವರು ಕಪ್ಪು ಬಣ್ಣದ ಉಡುಪನ್ನು ಧರಿಸಿ ನ್ಯೂಯಾರ್ಕ್ ನಗರದ ಪಬ್ನಲ್ಲಿ ಡ್ಯಾನ್ಸ್ ಆಡುತ್ತಿರುವುದು ಕಂಡು ಬರುತ್ತದೆ. ಇದರಲ್ಲಿ ವಿಶೇಷ ಏನಪ್ಪಾ ಅಂದ್ರೆ ಕುಣಿಯುತ್ತಾ ಕುಣಿಯುತ್ತಾ ನಿವ್ವಿ ಕಂಭೌಣಣೂ ಎರಿಬಿಟ್ಟಿದ್ದಾರೆ. ಕಂಬವನ್ನು ಬಿಗಿದಪ್ಪಿ ವಿಚಿತ್ರವಾಗಿ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಇದಕ್ಕೆ ಸಂದಬಂಧ ಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿದ ಹಲವು ಜನರು ಹಲವು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವೊಬ್ಬರು ಪಾಸಿಟಿವ್ ಕಾಮೆಂಟ್ಸ್ ಮಾಡುತ್ತಿದ್ದರೆ, ಇನ್ನೂ ಕೆಲವರು ಅಸಭ್ಯಾವಗಿ ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನೂ, ನಿವೇದಿತಾ ಗೌಡ ಹಂಚಿಕೊಂಡಿರುವ ಈ ವಿಡಿಯೋವನ್ನು ಈವರೆಗೂ 30000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕೇವಲ 15 ತಾಸುಗಳಲ್ಲಿ ಈ ವಿಡಿಯೋ 300 ಕ್ಕೂ ಹೆಚ್ಚು ಕಾಮೆಂಟ್ಗಳನ್ನು ಪಡೆದುಕೊಂಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್