Actress: ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ನಟಿ..! ಮೃತದೇಹ ನೋಡಲು ಬರದ ಕುಟುಂಬಸ್ಥರು!!

Noor Malabika Das Death: ಮಾಜಿ ಗಗನಸಖಿ ಹಾಗೂ ನಟಿ ನೂರ್ ಮಾಲಾಬಿಕಾ ದಾಸ್ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Written by - Savita M B | Last Updated : Jun 10, 2024, 04:08 PM IST
  • ಮಾಜಿ ಗಗನಸಖಿ, ನಟಿ ನೂರ್ ಮಾಲಾಬಿಕಾ ದಾಸ್ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
  • ಮುಂಬೈನಲ್ಲಿರುವ ಆಕೆಯ ಅಪಾರ್ಟ್‌ಮೆಂಟ್‌ನಿಂದ ದುರ್ವಾಸನೆ ಬರುತ್ತಿದ್ದಂತೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
 Actress: ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ನಟಿ..! ಮೃತದೇಹ ನೋಡಲು ಬರದ ಕುಟುಂಬಸ್ಥರು!! title=

Noor Malabika Das: ಮಾಜಿ ಗಗನಸಖಿ, ನಟಿ ನೂರ್ ಮಾಲಾಬಿಕಾ ದಾಸ್ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮುಂಬೈನಲ್ಲಿರುವ ಆಕೆಯ ಅಪಾರ್ಟ್‌ಮೆಂಟ್‌ನಿಂದ ದುರ್ವಾಸನೆ ಬರುತ್ತಿದ್ದಂತೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಅಲ್ಲಿಗೆ ಬಂದು ಬಾಗಿಲು ಒಡೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ನೂರ್ ಶವ ಪತ್ತೆಯಾಗಿದೆ. ಮೃತದೇಹವನ್ನು ಹೊರತೆಗೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ-ಈ ಸ್ಟಾರ್‌ ನಟಿಯನ್ನು ಕಾಡ್ತಿದೆ ಅಪರೂಪದ ಕಾಯಿಲೆ.. 48 ದಿನಗಳಿಂದ ನರಕಯಾತನೆ.!

32 ವರ್ಷದ ಮಾಲಾಬಿಕಾ ಅಸ್ಸಾಂ ಮೂಲದವಳು.. ತನ್ನ ವೃತ್ತಿಜೀವನವನ್ನು ಗಗನಸಖಿಯಾಗಿ ಪ್ರಾರಂಭಿಸಿ, ನಟನೆಯ ಆಸಕ್ತಿಯಿಂದ ಅವರು ಅನೇಕ ವಯಸ್ಕ ಚಿತ್ರಗಳಲ್ಲಿ ನಟಿಸಿದ್ದಾರೆ. 2023 ನಟಿ ಕಾಜೋಲ್ ಅವರೊಂದಿಗೆ ಕಾನೂನು ನಾಟಕ 'ದಿ ಟ್ರಯಲ್' ನಲ್ಲಿ ಕೆಲಸ ಮಾಡಿದರು.  ಈ ಸರಣಿಯು ನಟಿಯಾಗಿ ಅವರಿಗೆ ಉತ್ತಮ ಮನ್ನಣೆಯನ್ನು ತಂದುಕೊಟ್ಟಿತು.

ಇದನ್ನೂ ಓದಿ-ಶ್ರೀಲೀಲಾಗೆ ಒಲಿದ ಅದೃಷ್ಟ.. ಸ್ಟಾರ್‌ ಹೀರೋ ಮಗನಿಗೆ ಜೋಡಿಯಾಗಲಿರುವ ಸೌತ್‌ ಬ್ಯೂಟಿ.!

ಇನ್ನು ಆಕೆಯ ಸಾವಿಗೆ ಎರಡು ವಾರಗಳ ಮೊದಲು ಕುಟುಂಬ ಸದಸ್ಯರು ಮುಂಬೈನಲ್ಲಿರುವ ನಟಿಯ ನಿವಾಸಕ್ಕೆ ಭೇಟಿ ನೀಡಿದ್ದರು.ಆದರೆ, ಆಕೆಯ ಸಾವಿನ ನಂತರ ಕುಟುಂಬಸ್ಥರು ಮೃತ ದೇಹವನ್ನು ನೋಡಲು ಸಹ ಬಂದಿಲ್ಲ.ಮೃತ ದೇಹವನ್ನು ತೆಗೆದುಕೊಂಡು ಹೋಗುವಂತೆ ಪೊಲೀಸರು ಕರೆ ಮಾಡಿದರೂ ಕ್ಯಾರೇ ಎನ್ನಲಿಲ್ಲ. NGO ದ ಸಹಾಯದಿಂದ ಆಕೆಯ ಅಂತಿಮ ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಗಿದೆ ಎಂದು ವರದಿ ಮಾಡಲಾಗಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News