Adah Sharma Health Issue : ಬಾಲಿವುಡ್ ನಟಿ ಅದಾ ಶರ್ಮಾಗೆ ಸಂಬಂಧಿಸಿದ ದೊಡ್ಡ ಸುದ್ದಿಯೊಂದು ವೈರಲ್ ಆಗಿದೆ. ಇತ್ತೀಚೆಗೆ ಬಸ್ತರ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಟಿ ಅದಾ ಶರ್ಮಾ ಅವರನ್ನು ಗಂಭೀರಿ ಕಾಯಿಲೆಯೊಂದು ಕಾಡಿತ್ತು. 5 ದಿನದಲ್ಲಿ ಮುಗಿದು ಹೋಗಬೇಕಾದ ಪಿರಿಯಡ್ಸ್ 48 ದಿನಗಳವರೆಗೆ ಇತ್ತು ಎಂದು ನಟಿ ಅದಾ ಶರ್ಮಾ ಹೇಳಿದ್ದಾರೆ. ಪಾತ್ರಕ್ಕಾಗಿ ದೈಹಿಕ ಪರಿವರ್ತನೆಯಿಂದಾಗಿ ಎಂಡೊಮೆಟ್ರಿಯೊಸಿಸ್ ಎಂಬ ಕಾಯಿಲೆ ನಟಿ ಅದಾ ಶರ್ಮಾ ಅವರನ್ನು ಕಾಡಿದ್ದಂತೆ.
ನಟಿ ಅದಾ ಶರ್ಮಾ ನಿರಂತರವಾಗಿ ಸಿನಿಮಾ ಮತ್ತು ವೆಬ್ ಸಿರೀಸ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ದಿ ಕೇರಳ ಸ್ಟೋರಿ ಸಿನಿಮಾ ಬಳಿಕ ಅದಾ ಶರ್ಮಾ ಖ್ಯಾತಿ ಹೆಚ್ಚಿತು. ಅನೇಕ ಆಫರ್‌ಗಳು ಬರಲು ಪ್ರಾರಂಭಿಸಿದವು. ಅದಾ ಶರ್ಮಾ ಇದಕ್ಕಾಗಿ ಪಾತ್ರಕ್ಕೆ ತಕ್ಕಂತೆ ತಮ್ಮ ದೆಹವನ್ನು ಮಾರ್ಪಡಿಸುವುದು ಅಗತ್ಯವಾಗಿತ್ತು.
ಇದನ್ನೂ ಓದಿ: ಶ್ರೀಲೀಲಾಗೆ ಒಲಿದ ಅದೃಷ್ಟ.. ಸ್ಟಾರ್ ಹೀರೋ ಮಗನಿಗೆ ಜೋಡಿಯಾಗಲಿರುವ ಸೌತ್ ಬ್ಯೂಟಿ.!
ಅದಾ ಶರ್ಮಾ ಇತ್ತೀಚೆಗೆ ಮಾರ್ಚ್‌ನಲ್ಲಿ ಬಿಡುಗಡೆಯಾದ 'ಬಸ್ತರ್: ದಿ ನಕ್ಸಲ್ ಸ್ಟೋರಿ' ಚಿತ್ರಕ್ಕಾಗಿ ಸುದ್ದಿಯಲ್ಲಿದ್ದರು. ಈಗ ನಟಿ ಸಂದರ್ಶನವೊಂದರಲ್ಲಿ ತಮ್ಮ ದೈಹಿಕ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. ದೇಹದಲ್ಲಿ ಬದಲಾವಣೆಗಳನ್ನು ಮಾಡಿಕೊಂಡ ಕಾರಣ 48 ದಿನಗಳವರೆಗೆ ಪಿರಿಯಡ್ಸ್ ಯಾತನೆ ಅನುಭವಿಸಬೇಕಾಯಿತು ಎಂದಿದ್ದಾರೆ.
ಈ ಚಿತ್ರಕ್ಕಾಗಿ ನನಗೆ ವಿಭಿನ್ನ ದೇಹ ಬೇಕಿತ್ತು. ದಿ ಕೇರಳ ಸ್ಟೋರಿಗಾಗಿ ಕಾಲೇಜು ಹುಡುಗಿಯಂತೆ ಕಾಣಲು ಮೊದಲು ನಾನು ತೆಳ್ಳಗಾದೆ. ಬಳಿಕ ಬಸ್ತಾರ್‌ಗೆ, ನಾನು ದಪ್ಪವಾಗಬೇಕಿತ್ತು. ತೂಕವನ್ನು ಹೆಚ್ಚಿಸಬೇಕೆಂದು ನಾನು ದಿನಕ್ಕೆ ಸುಮಾರು 10 ರಿಂದ 12 ಬಾಳೆಹಣ್ಣುಗಳನ್ನು ತಿನ್ನುತ್ತಿದ್ದೆ. ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ಇತ್ತು. ಎಂಟು ಕಿಲೋ ತೂಕದ ನಿಜವಾದ ಬಂದೂಕುಗಳಿದ್ದವು, ಕಲ್ಲಿನ ಭೂಪ್ರದೇಶ ಮತ್ತು ಪರ್ವತಗಳ ಮೇಲೆ ಮತ್ತು ಕೆಳಗೆ ಶೂಟಿಂಗ್ ಮಾಡಿದ್ದೇವೆ. ಇದಕ್ಕೆಲ್ಲ ನನಗೆ ಶಕ್ತಿ ಬೇಕಿತ್ತು. ಸ್ಟ್ರಾಂಗ್ ಆಗಲು ನಾನು ಡ್ರೈ ಫ್ರೂಟ್ಸ್, ಕಾಳುಗಳು ಮತ್ತು ಸಾಕಷ್ಟು ಅಗಸೆಬೀಜದ ಲಡ್ಡುಗಳು ತಿನ್ನುತ್ತಿದ್ದೆ ಎಂದು ಹೇಳಿದ್ದಾರೆ.
ಚಿತ್ರೀಕರಣದ ಸಮಯದಲ್ಲಿ ನಿರಂತರವಾಗಿ ಚಲಿಸುವ ಕಾರಣ ನನ್ನ ಸೊಂಟದ ನೋವು ಶುರುವಾಯಿತು. ನನಗೆ ಗಂಭೀರವಾದ ಬೆನ್ನುನೋವಿನ ಸಮಸ್ಯೆ ಇತ್ತು. ನಾನು ನನ್ನ ಜಿಮ್ನಾಸ್ಟ್ ಆಗಿದ್ದೇನೆ. ಆದರೆ ಈ ಸಂದರ್ಭದಲ್ಲಿ ನನ್ನ ಬೆನ್ನು ನೋವು ಕೆಟ್ಟದಾಗಿ ಕಾಡಿತು ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.