ಶೂಟಿಂಗ್‌ ವೇಳೆ ಕಾಲುಜಾರಿ ಬಿದ್ದ ನಟಿ ರಾಧಿಕಾ ಕುಮಾರಸ್ವಾಮಿ

ಶಾಂತಿನಗರದ ಸ್ಮಶಾನದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ನಡೆದಿರುವ ಘಟನೆ.

Last Updated : Feb 10, 2019, 10:35 AM IST
ಶೂಟಿಂಗ್‌ ವೇಳೆ ಕಾಲುಜಾರಿ ಬಿದ್ದ ನಟಿ ರಾಧಿಕಾ ಕುಮಾರಸ್ವಾಮಿ title=
File Image

ಬೆಂಗಳೂರು: 'ಭೈರಾದೇವಿ' ಚಿತ್ರದ ಶೂಟಿಂಗ್ ವೇಳೆ ಕಾಲುಜಾರಿ ಬಿದ್ದ ನಟಿ ರಾಧಿಕಾ ಕುಮಾರಸ್ವಾಮಿ ತೀವ್ರವಾಗಿ ಗಾಯಗೊಂಡಿದ್ದು, ಇನ್ನೊಂದು ತಿಂಗಳು ಅವರು ಓಡಾಡಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಶಾಂತಿನಗರದ ಸ್ಮಶಾನದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ನಟಿ ರಾಧಿಕಾ ಕುಮಾರಸ್ವಾಮಿ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ಅವರ ಬೆನ್ನುಹುರಿ(ಸ್ಪೈನಲ್ ಕಾರ್ಡ್)ಗೆ ಪೆಟ್ಟಾಗಿದ್ದು, ಚಿಕಿತ್ಸೆ ಪಡೆದ ನಂತರ ಅವರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರು ಅವರಿಗೆ ತಿಂಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ.

ಬಿಗ್ ಬಜೆಟ್ 'ಭೈರಾದೇವಿ' ಚಿತ್ರವನ್ನು 'ಶಮಿಕಾ ಎಂಟರ್‌ಪ್ರೈಸಸ್' ಬ್ಯಾನರ್ ಅಡಿಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಅವರೇ ನಿರ್ಮಿಸುತ್ತಿದ್ದಾರೆ. 'ಶ್ರೀಜಯ್' ಭೈರಾದೇವಿ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ಖಳ ನಟ ರವಿಶಂಕರ್ ಹಾಗೂ ನಟ ರಮೇಶ್ ಅರವಿಂದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

Trending News