IND Vs SA Final : ಇನ್ನೂ ಸ್ವಲ್ಪ ಹೊತ್ತಿನಲ್ಲೇ ಫೈನಲ್ ಹೋರಾಟ, ಬಾರ್ಬಡೋಸ್ ನಲ್ಲಿ ಹವಾಮಾನ ಸ್ಥಿತಿ ಹೇಗಿದೆ!!!

IND Vs SA Final : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ T20 ವಿಶ್ವಕಪ್ 2024 ರ ಅಂತಿಮ ಪಂದ್ಯಕ್ಕೆ ಕೆಲವೇ ಕ್ಷಣಗಳು ಉಳಿದಿದ್ದು, ಇನ್ನೂ ಸ್ವಲ್ಪ ಹೊತ್ತಿನಲ್ಲೇ ಫೈನಲ್ ಪಂದ್ಯ ಪ್ರಾರಂಭವಾಗಲಿದೆ. 

Written by - Zee Kannada News Desk | Last Updated : Jun 29, 2024, 07:40 PM IST
  • ಇಂದು ಬಾರ್ಬಡೋಸ್‌ನಲ್ಲಿ ಟೀಮ್ ಇಂಡಿಯಾದ ನಾಲ್ಕನೇ ಟಿ20 ಪಂದ್ಯ ಆಗಿದೆ.
  • ಬಾರ್ಬಡೋಸ್ ನಲ್ಲಿ ಹವಾಮಾನ ಸ್ಥಿತಿ ಹೇಗಿರಲಿದೆ ಎನ್ನುವುದು ಇನ್ನೊಂದು ದೊಡ್ಡ ಪ್ರಶ್ನೆಯಾಗಿದೆ.
  • ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ T20 ವಿಶ್ವಕಪ್ 2024 ರ ಅಂತಿಮ ಪಂದ್ಯಕ್ಕೆ ಕೆಲವೇ ಕ್ಷಣಗಳು ಉಳಿದಿವೆ.
IND Vs SA Final : ಇನ್ನೂ ಸ್ವಲ್ಪ ಹೊತ್ತಿನಲ್ಲೇ ಫೈನಲ್ ಹೋರಾಟ, ಬಾರ್ಬಡೋಸ್ ನಲ್ಲಿ ಹವಾಮಾನ ಸ್ಥಿತಿ ಹೇಗಿದೆ!!!  title=

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಈ ಫೈನಲ್ ಕಾದಾಟದಲ್ಲಿ ಏನಾಗಲಿದೆ ಎನ್ನುವುದು ಎಲ್ಲರ ಕುತೂಹಲಕಾರಿ ಪ್ರಶ್ನೆಯಾಗಿದೆ ಮತ್ತು ಈ ಸಮಯದಲ್ಲಿ ಬಾರ್ಬಡೋಸ್ ನಲ್ಲಿ ಹವಾಮಾನ ಸ್ಥಿತಿ ಹೇಗಿರಲಿದೆ ಎನ್ನುವುದು ಇನ್ನೊಂದು ದೊಡ್ಡ ಪ್ರಶ್ನೆಯಾಗಿದೆ. 

ಇಂದಿನ ಈ ಪಂದ್ಯ ಕೆನ್ಸಿಂಗ್ಟನ್ ಓವಲ್ ಬಾರ್ಬಡೋಸ್ ನಲ್ಲಿ ನಡೆಯಲಿದೆ ಮತ್ತು ಮೊನ್ನೆ ಗಯಾನಾ ದಲ್ಲಿ ನಡೆದ ಪಂದ್ಯದಲ್ಲಿ ಮಳೆ ಅಡ್ಡಿಯಾಗಿ ಪಂದ್ಯ ತಡವಾಗಿ ಮುಗಿದಿತ್ತು ಇಂದಿನ ಪಂದ್ಯದಲ್ಲಿ ಏನಾಗಲಿದೆ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ ಬಾರ್ಬಡೋಸ್‌ನಲ್ಲಿ ICC ಪುರುಷರ T20 ವಿಶ್ವಕಪ್ 2024 ರ ಫೈನಲ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಎದುರಿಸುವಾಗ  ಮತ್ತೆ ಮಳೆಯಾಗುವ ಸಾಧ್ಯತೆ ಕಂಡುಬಂದಿದೆ. 

ಇದನ್ನು ಓದಿ : ರಾಷ್ಟ್ರ ರಾಜಧಾನಿಯಲ್ಲಿ 88 ವರ್ಷಗಳ ಹಿಸ್ಟರಿ ಬ್ರೇಕ್, 2 ದಿನ ಭಾರೀ  ಮಳೆ ಅಲರ್ಟ್!!

ಇಂದು  ಬಾರ್ಬಡೋಸ್‌ನಲ್ಲಿ ಟೀಮ್ ಇಂಡಿಯಾದ ನಾಲ್ಕನೇ ಟಿ20 ಪಂದ್ಯ ಆಗಿದೆ. ಈ ಹಿಂದೆ ಇಲ್ಲಿ 3 ಪಂದ್ಯಗಳು ನಡೆದಿದ್ದು, 1ರಲ್ಲಿ ಮಾತ್ರ ಜಯ ಸಾಧಿಸಿತ್ತು. ಆದರೆ ಈ ಹಂತದಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ T20 ವಿಶ್ವಕಪ್ 2024 ರ ಅಂತಿಮ ಪಂದ್ಯಕ್ಕೆ ಕೆಲವೇ ಕ್ಷಣಗಳು ಉಳಿದಿವೆ. ವೆಸ್ಟ್ ಇಂಡೀಸ್‌ನ ಬಾರ್ಬಡೋಸ್ ಮೈದಾನವು ಈ ಹೈ ವೋಲ್ಟೇಜ್ ಪಂದ್ಯವನ್ನು ಆಯೋಜಿಸುತ್ತಿದೆ.  ವಿಶ್ವಕಪ್ ಟೂರ್ನಿಯಲ್ಲಿ ಈ ಎರಡು ತಂಡಗಳು ಅಜೇಯರಾಗದೆ ಫೈನಲ್ ತಲುಪಿರುವುದು ಈ ಪಂದ್ಯದ ವಿಶೇಷ. ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿ ದಕ್ಷಿಣ ಆಫ್ರಿಕಾ ಫೈನಲ್‌ಗೆ ಅರ್ಹತೆ ಪಡೆದರೆ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಭಾರತ ಫೈನಲ್ ತಲುಪಿದೆ ಇಂದು ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡವು ಫೈನಲ್ ನಲ್ಲಿ ಮುಖಾಮುಖಿಯಾಗಲಿವೆ. 

ಇದನ್ನು ಓದಿ : Google Translateನಲ್ಲಿ 110 ಹೊಸ ಭಾಷೆಗಳ ಸೇರ್ಪಡೆ, ಅದರಲ್ಲಿ ದಕ್ಷಿಣ ಕನ್ನಡದ ತುಳು ಭಾಷೆಯೂ ಒಂದು!

ಬಾರ್ಬಡೋಸ್‌ನಲ್ಲಿನ ಹವಾಮಾನ ಪರಿಸ್ಥಿತಿಗಳನ್ನು ಗಮನಿಸಿದರೆ, ಒಂದು ವೇಳೆ ಮಳೆಯಾದರೆ ಇಲ್ಲಿಯವರೆಗೂ ಒಂದು ಪಂದ್ಯವನ್ನು ಸೋಲದೆ ಫೈನಲ್ ತಲುಪಿರುವ ಎರಡು ತಂಡಗಳನ್ನು ವಿಜಯಶಾಲಿಗಳು ಎಂದು ಘೋಷಿಸಲಾಗುವುದು ಎಂದು ತಿಳಿಸಿದೆ. ಮತ್ತು ಎರಡೂ ತಂಡಗಳು ಚಾಂಪಿಯನ್ ಆಗಿ ಕಿರೀಟವನ್ನು ಪಡೆಯುವುದು ನ್ಯಾಯಯುತವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News