ಆರು ವರ್ಷದ ಪುಟ್ಟ ತಂಗಿಯೊಂದಿಗೆ ರಶ್ಮಿಕಾ ಮಂದಣ್ಣ ಡ್ಯಾನ್ಸ್

ತಮ್ಮ 6 ವರ್ಷದ ಪುಟ್ಟ ತಂಗಿಯೊಂದಿಗೆ  ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪುನೀತ್ ರಾಜ್‌ಕುಮಾರ್ ಹಾಗೂ ಲೂಸ್ ಮಾದ ಅಭಿನಯದ 'ಯಾರೆ ಕೂಗಾಡಲಿ...' ಚಿತ್ರದ 'ಪಡುವಾರಳ್ಳಿ ಪಾಂಚಾಲಿ' ಹಾಡಿಗೆ ರಶ್ಮಿಕಾ ಹೆಜ್ಜೆ ಹಾಕಿದ್ದಾರೆ.

Last Updated : Jan 24, 2019, 09:13 PM IST
ಆರು ವರ್ಷದ ಪುಟ್ಟ ತಂಗಿಯೊಂದಿಗೆ ರಶ್ಮಿಕಾ ಮಂದಣ್ಣ ಡ್ಯಾನ್ಸ್ title=

ಬೆಂಗಳೂರು: ಕನ್ನಡದ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಅಭಿನಯಿಸಿ ಭಾರೀ ಹೆಸರು ಮಾಡಿದ್ದ ಮುದ್ದು ಬೆಡಗಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲೀಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.

ಹೌದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ #10YearsChallengeನಲ್ಲಿ ಎಲ್ಲರೂ ತಮ್ಮ ಇತ್ತೀಚಿನ ಫೋಟೋವನ್ನು 10 ವರ್ಷಗಳ ಹಿಂದಿನ ಫೋಟೋ ಜೊತೆ ಹಾಕಿ ಪೋಸ್ಟ್ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಈ ಚಾಲೆಂಜ್ ಅನ್ನು ರಶ್ಮಿಕಾ ಮಂದಣ್ಣ ಬಹಳ ವಿಭಿನ್ನವಾಗಿ ಸ್ವೀಕರಿಸಿದ್ದಾರೆ.

ತಮ್ಮ 6 ವರ್ಷದ ಪುಟ್ಟ ತಂಗಿಯೊಂದಿಗೆ  ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪುನೀತ್ ರಾಜ್‌ಕುಮಾರ್ ಹಾಗೂ ಲೂಸ್ ಮಾದ ಅಭಿನಯದ 'ಯಾರೆ ಕೂಗಾಡಲಿ...' ಚಿತ್ರದ 'ಪಡುವಾರಳ್ಳಿ ಪಾಂಚಾಲಿ' ಹಾಡಿಗೆ ರಶ್ಮಿಕಾ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Trending News