"ಅವರ ಖಾಸಗಿ ಭಾಗಗಳಿಗೆ ರೇಟಿಂಗ್‌ ನೀಡಲು Bigg Boss ಮನೆಗೆ ಹೋಗಬೇಕಂತೆ ಈ ನಟಿ"

Bigg Boss : ಸೋಮವಾರ ನಟಿ ಶೆರ್ಲಿನ್ ಚೋಪ್ರಾ ಈ ರೀತಿ ಟ್ವೀಟ್‌ ಮಾಡಿದ್ದು, ಇದು ಎಲ್ಲರೂ ಬೆರಗಾಗುವಂತೆ ಮಾಡಿದೆ. 

Written by - Chetana Devarmani | Last Updated : Oct 12, 2022, 10:16 AM IST
  • 'ಬಿಗ್ ಬಾಸ್ ಹಿಂದಿ 16' ಮನೆ ಸೇರಿರುವ ನಿರ್ದೇಶಕ ಸಾಜಿದ್ ಖಾನ್
  • ಅನೇಕ ನಟಿಯರು ಅವರ ವಿರುದ್ಧ #MeToo ಆರೋಪ ಮಾಡಿದ್ದರು
  • ಅನೇಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ
"ಅವರ ಖಾಸಗಿ ಭಾಗಗಳಿಗೆ ರೇಟಿಂಗ್‌ ನೀಡಲು Bigg Boss ಮನೆಗೆ ಹೋಗಬೇಕಂತೆ ಈ ನಟಿ" title=
ಬಿಗ್ ಬಾಸ್

Bigg Boss 16 : 'ಬಿಗ್ ಬಾಸ್ ಹಿಂದಿ 16' ಮನೆ ಸೇರಿರುವ ನಿರ್ದೇಶಕ ಸಾಜಿದ್ ಖಾನ್ ಅವರ ಮೇಲೆ ನಟಿ ತನ್ನ ಅಸಮಾಧಾನ ಹೊರಹಾಕಿದ್ದಾರೆ. ಸೋಮವಾರ ನಟಿ ಶೆರ್ಲಿನ್ ಚೋಪ್ರಾ ಈ ರೀತಿ ಟ್ವೀಟ್‌ ಮಾಡಿದ್ದು, ಇದು ಎಲ್ಲರೂ ಬೆರಗಾಗುವಂತೆ ಮಾಡಿದೆ. ನಿರ್ದೇಶಕ ಸಾಜಿದ್ ಖಾನ್ ಸಾಕಷ್ಟು ವಿವಾದಗಳಲ್ಲಿ ನಿರ್ದೇಶಕ ಸಾಜಿದ್ ಖಾನ್ ಹೆಸರು ಕೇಳಿಬಂದಿತ್ತು. ಅನೇಕ ನಟಿಯರು ಅವರ ವಿರುದ್ಧ #MeToo ಆರೋಪ ಮಾಡಿದ್ದರು. ಈಗ ಸಾಜಿದ್ ಖಾನ್ ಅವರು ‘ಬಿಗ್ ಬಾಸ್‌ ಹಿಂದಿ ಸೀಸನ್ 16’ಗೆ ಹೋಗಿದ್ದಾರೆ. ಅನೇಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ : ʼನಾನು ಇರೋದೆ ಹೀಗೆ.. ಏನ್‌ ಮಾಡ್ತೀರಾʼ : ಗುರೂಜಿ ಘರ್ಜನೆಗೆ ಬಿಗ್‌ಬಾಸ್‌ ಗಡಗಡ..!

ನಿರ್ದೇಶಕ ಸಾಜಿದ್ ಖಾನ್ 'ಬಿಗ್ ಬಾಸ್ 16' ಗೆ ಹೋದಾಗಿನಿಂದ ಅನೇಕರು ವಿರೋಧಿಸುತ್ತಿದ್ದಾರೆ. ಹಲವು ಸೆಲೆಬ್ರಿಟಿಗಳು ಸಾಜಿದ್ ಖಾನ್ ಮೇಲೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದರೊಂದಿಗೆ, ಸಲ್ಮಾನ್ ಖಾನ್ ಮನೆಯೊಳಗೆ ಲೈಂಗಿಕ ಪರಭಕ್ಷಕನನ್ನು ಹೇಗೆ ಅನುಮತಿಸಬಹುದು ಎಂದು ಪ್ರಶ್ನಿಸಿದ್ದಾರೆ. ಎಲ್ಲರಂತೆ ನನಗೂ ಎರಡನೇ ಅವಕಾಶ ಸಿಗಬೇಕು ಎನ್ನುತ್ತಾರೆ ಸಾಜಿದ್ ಖಾನ್. ಈ ಎಲ್ಲದರ ಮಧ್ಯೆ ನಟಿ ಶೆರ್ಲಿನ್ ಚೋಪ್ರಾ ಮತ್ತೊಮ್ಮೆ ಸಾಜಿದ್ ಖಾನ್ ವಿರುದ್ಧ ತಿರುಗಿಬಿದ್ದಿದ್ದಾರೆ. ವಾಸ್ತವವಾಗಿ, ಸಾಜಿದ್ ಖಾನ್ ವಿರುದ್ಧ #MeToo ಆರೋಪ ಮಾಡಿದ 9 ಮಹಿಳೆಯರಲ್ಲಿ ಶೆರ್ಲಿನ್ ಚೋಪ್ರಾ ಕೂಡ ಒಬ್ಬರು. ನಟಿ ಶೆರ್ಲಿನ್ ಚೋಪ್ರಾ ತಾವೂ ಸಹ ಬಿಗ್ ಬಾಸ್ ಮನೆಗೆ ಹೋಗುವ ಮನವಿ ಮಾಡಿದ್ದಾರೆ. ಅಲ್ಲಿ ಅವರು ಸಾಜಿದ್ ಖಾನ್ ಗುಪ್ತಾಂಗಕ್ಕೆ ರೇಟಿಂಗ್ ಕೊಡುತ್ತಾರೆ ಎಂದು ಹೇಳಿದ್ದಾರೆ.

 

 

ಶೆರ್ಲಿನ್ ಚೋಪ್ರಾ ಮತ್ತೊಮ್ಮೆ ಟ್ವಿಟರ್ ಮೂಲಕ ಸಲ್ಮಾನ್ ಖಾನ್ ಗೆ ಮನವಿ ಮಾಡಿದ್ದಾರೆ. ಶೆರ್ಲಿನ್ ಚೋಪ್ರಾ ಟ್ವೀಟ್ ಮಾಡಿ ಹೀಗೆ ಬರೆದುಕೊಂಡಿದ್ದಾರೆ, "ಅವರು ನನ್ನ ಮೇಲೆ ತಮ್ಮ ಖಾಸಗಿ ಅಂಗವನ್ನು ತೋರಿಸಿದರು. ಅವರಿಗೆ 0 ರಿಂದ 10 ರ ಪ್ರಮಾಣದಲ್ಲಿ ರೇಟಿಂಗ್ ನೀಡುವಂತೆ ಕೇಳಿದರು. ನಾನು ಬಿಗ್ ಬಾಸ್ ಮನೆಗೆ ಹೋಗಿ ಅವರಿಗೆ ರೇಟಿಂಗ್ ನೀಡಲು ಬಯಸುತ್ತೇನೆ. ಸಲ್ಮಾನ್ ಖಾನ್ ಸರ್, ದಯವಿಟ್ಟು ಈ ವಿಷಯದ ಬಗ್ಗೆ ಒಂದು ನಿಲುವು ತೆಗೆದುಕೊಳ್ಳಿ" ಎಂದಿದ್ದಾರೆ.

ಇದನ್ನೂ ಓದಿ : ಶೀಘ್ರದಲ್ಲಿ ಡಾಲಿಯ ಕನಸಿನ ಕೂಸು ‘ಹೆಡ್ ಬುಷ್’ ರಿಲೀಸ್: ಟೆನ್ಶನ್ ನಲ್ಲಿರೋದ್ಯಾಕೆ ‘ನಟ’ರಾಕ್ಷಸ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News