Prarambha Movie : 'ಪ್ರಾರಂಭ' ಬಿಡುಗಡೆಗೆ ಕೌಂಟ್‌ಡೌನ್!‌ ಲವರ್ಸ್‌ಗೆ ಕ್ರೇಜಿಸ್ಟಾರ್‌ ಪುತ್ರನ ಸಲಹೆ

ಪ್ರೀ ರಿಲೀಸ್‌ ಇವೆಂಟ್‌ ಆಯೋಜನೆ ಮಾಡಿದ್ದ ಚಿತ್ರತಂಡ, ಹಲವು ವಿಚಾರಗಳನ್ನ ಮುಕ್ತವಾಗಿ ಹಂಚಿಕೊಂಡಿದೆ. ಅ‌ದ್ರಲ್ಲೂ ಮನೋರಂಜನ್ ಭಗ್ನ ಪ್ರೇಮಿಗಳಿಗೆ ಈ ಚಿತ್ರದ ಮೂಲಕ ಕೆಲವು ಸಲಹೆ ಹಾಗೂ ಸಂದೇಶಗಳನ್ನ ನೀಡಲು ಹೊರಟಿದ್ದಾರೆ.

Written by - Malathesha M | Last Updated : May 17, 2022, 07:12 PM IST
  • ಕ್ರೇಜಿಸ್ಟಾರ್‌ ಪುತ್ರ ಮನೋರಂಜನ್ ಅಭಿನಯದ 'ಪ್ರಾರಂಭ' ಬಿಡುಗಡೆಗೆ ಸಿದ್ಧ
  • ಪ್ರೀ ರಿಲೀಸ್‌ ಇವೆಂಟ್‌ ಆಯೋಜನೆ ಮಾಡಿದ್ದ ಚಿತ್ರತಂಡ
  • ಭಗ್ನ ಪ್ರೇಮಿಗಳಿಗೆ ಈ ಚಿತ್ರದ ಮೂಲಕ ಸಲಹೆ ಹಾಗೂ ಸಂದೇಶಗಳನ್ನ ನೀಡಲು ಹೊರಟಿದ್ದಾರೆ.
Prarambha Movie : 'ಪ್ರಾರಂಭ' ಬಿಡುಗಡೆಗೆ ಕೌಂಟ್‌ಡೌನ್!‌ ಲವರ್ಸ್‌ಗೆ ಕ್ರೇಜಿಸ್ಟಾರ್‌ ಪುತ್ರನ ಸಲಹೆ title=

ಬೆಂಗಳೂರು : ಕ್ರೇಜಿಸ್ಟಾರ್‌ ರವಿಚಂದ್ರನ್‌ರ ಪುತ್ರ ಮನೋರಂಜನ್ ಅಭಿನಯದ 'ಪ್ರಾರಂಭ' ಬಿಡುಗಡೆಗೆ ಸಿದ್ಧವಾಗಿದೆ. ಈ ಹೊತ್ತಲ್ಲೇ ಪ್ರೀ ರಿಲೀಸ್‌ ಇವೆಂಟ್‌ ಆಯೋಜನೆ ಮಾಡಿದ್ದ ಚಿತ್ರತಂಡ, ಹಲವು ವಿಚಾರಗಳನ್ನ ಮುಕ್ತವಾಗಿ ಹಂಚಿಕೊಂಡಿದೆ. ಅ‌ದ್ರಲ್ಲೂ ಮನೋರಂಜನ್ ಭಗ್ನ ಪ್ರೇಮಿಗಳಿಗೆ ಈ ಚಿತ್ರದ ಮೂಲಕ ಕೆಲವು ಸಲಹೆ ಹಾಗೂ ಸಂದೇಶಗಳನ್ನ ನೀಡಲು ಹೊರಟಿದ್ದಾರೆ.

ಚಿತ್ರರಂಗವೇ ತಮ್ಮ ಜಗತ್ತು ಎಂಬಂತೆ ಕ್ರೇಜಿಸ್ಟಾರ್‌ ಫ್ಯಾಮಿಲಿ ಸಿನಿಮಾಗಾಗಿ ಎಲ್ಲವನ್ನೂ ಅರ್ಪಿಸಿದೆ. ಇತ್ತೀಚೆಗೆ ನಡೆದಿದ್ದ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ತಮ್ಮ ಪ್ಯಾನ್‌ ಇಂಡಿಯನ್‌ ಸಿನಿಮಾಗಳ ಕುರಿತು ಮುಕ್ತವಾಗಿ ಮಾತನಾಡಿದ್ದರು. ಇದೀಗ ಕ್ರೇಜಿಸ್ಟಾರ್‌ ಪುತ್ರನ ಮತ್ತೊಂದು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು, ಈ ಹಿಂದೆ ಆಹ್ವಾನ ಪತ್ರಿಕೆ ಮೂಲಕವೇ ಸಾಕಷ್ಟು ಕುತೂಹಲ ಕೆರಳಿಸಿದ್ದ 'ಪ್ರಾರಂಭ' ಮೇ 20ರ ಶುಕ್ರವಾರ ರಿಲೀಸ್‌ ಆಗುತ್ತಿದೆ.

ಇದನ್ನೂ ಓದಿ : Actress Chetana Raj Death: ಸೊಂಟ ದಪ್ಪವೆಂದು ಮನನೊಂದಿದ್ದ ಚೇತನಾ: ಫ್ಯಾಟ್‌ ಸರ್ಜರಿ ವೇಳೆ ಸಾವು

ಮದುವೆ ಆಹ್ವಾನ ಪತ್ರಿಕೆಯ ರೂಪದಲ್ಲಿ ಸಿನಿ ಪ್ರೇಮಿಗಳಿಗೆ ಚಿತ್ರಮಂದಿರಕ್ಕೆ ಆಹ್ವಾನ ನೀಡುವ ಮೂಲಕ ಕೆಲದಿನಗಳ ಹಿಂದೆ 'ಪ್ರಾರಂಭ' ಚಿತ್ರತಂಡ ಸಂಚಲನ ಸೃಷ್ಟಿಸಿತ್ತು. ಇದೀಗ ಪ್ರೀ ರಿಲೀಸ್‌ ಇವೆಂಟ್‌ನಲ್ಲೂ ಹಲವಾರು ಇಂಟರೆಸ್ಟಿಂಗ್‌ ವಿಚಾರಗಳನ್ನ 'ಪ್ರಾರಂಭ' ಹಂಚಿಕೊಂಡಿದೆ.

ಆತ್ಮಹತ್ಯೆ ದಾರಿಯಲ್ಲ

ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಮಾತನಾಡಿದ ನಟ ಮನೋರಂಜನ್, ಅನೇಕರು ಲವ್‌ ಫೆಲ್ಯೂರ್‌ ಆಗಿದ್ದೇ ತಡ ಸೂಸೈಡ್‌ ದಾರಿ ಹಿಡಯುತ್ತಾರೆ. ಆದರೆ ಇದಕ್ಕೆ ಆತ್ಮಹತ್ಯೆ ಒಂದೇ ದಾರಿಯಲ್ಲ. ಅಪ್ಪ-ಅಮ್ಮ ಹಾಗೂ ಅಕ್ಕ-ತಂಗಿಯ ಮುಖ ನೋಡಬೇಕು. ಆತ್ಮಹತ್ಯೆ ಅಥವಾ ಡ್ರಗ್ಸ್‌ ಒಂದೇ ಲವ್‌ ಫೆಲ್ಯೂರ್‌ ಆಗಿರುವ ವ್ಯಕ್ತಿಗೆ ದಾರಿಯಲ್ಲ. ಇಂತಹ ಎಲ್ಲಾ ವಿಚಾರಗಳನ್ನೂ ಅಚ್ಚುಕಟ್ಟಾಗಿ 'ಪ್ರಾರಂಭ' ತಂಡ ಬೆಳ್ಳಿತೆರೆ ಮೇಲೆ ತರಲಿದೆ ಎಂದರು.

ಒಟ್ಟಾರೆ ಹೇಳೋದಾದ್ರೆ ಕನ್ನಡದಲ್ಲಿ ಮತ್ತೊಂದು ಡಿಫರೆಂಟ್‌ ಟೈಟಲ್‌ ಚಿತ್ರ ಡಿಫರೆಂಟ್‌ ಆ್ಯಂಗಲ್‌ನಲ್ಲಿ ಕಥೆ ಹೇಳಲು ಎಂಟ್ರಿಯಾಗುತ್ತಿದೆ. ಮೇ 20ರಂದು 'ಪ್ರಾರಂಭ'ದ ಕಥೆ ಆರಂಭವಾಗಲಿದೆ. ಇನ್ನು ಈ ಚಿತ್ರಕ್ಕೆ ಪ್ರೇಕ್ಷಕ ಪ್ರಭು ಎಷ್ಟು ಮಾರ್ಕ್ಸ್‌ ಕೊಡ್ತಾನೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ : ಖ್ಯಾತ ನಿರೂಪಕಿಗೆ ಸಂಕಷ್ಟ ತಂದ ʼಗಡ್ಡʼ: ಅಪಹಾಸ್ಯ ಮಾಡಿದಕ್ಕೆ ದಾಖಲಾಯ್ತು FIR!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News