Adipurush collection day 2: ಟೀಕೆಗಳ ನಡುವೆಯೂ ಭರ್ಜರಿ ಕಲೆಕ್ಷನ್‌ ಮಾಡಿದ ಆದಿಪುರುಷ.! ಎರಡನೇ ದಿನ ಗಳಿಸಿದ್ದೆಷ್ಟು?

Adipurush Box Office Collection Day 2: ಚಿತ್ರದ ಕೆಲವು ಸಂಭಾಷಣೆಗಳಿಗೆ ಸಂಬಂಧಿಸಿದಂತೆ ಪ್ರೇಕ್ಷಕರಿಂದ ತೀವ್ರ ಟೀಕೆಗಳು ಕೇಳಿಬರುತ್ತಿವೆ. ಬಿಡುಗಡೆಯಾದಾಗಿನಿಂದ ಹಲವು ವಿವಾದಗಳಲ್ಲಿ ಸಿಲುಕಿರುವ ಆದಿಪುರುಷ ಚಿತ್ರವು ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆತರುವಲ್ಲಿ ನಿರಂತರವಾಗಿ ಯಶಸ್ವಿಯಾಗುತ್ತಿದೆ.  

Written by - Chetana Devarmani | Last Updated : Jun 18, 2023, 08:58 PM IST
  • ಪ್ರಭಾಸ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ ಆದಿಪುರುಷ
  • ಹಲವು ವಿವಾದಗಳಲ್ಲಿ ಸಿಲುಕಿರುವ ಆದಿಪುರುಷ ಸಿನಿಮಾ
  • ಟೀಕೆಗಳ ನಡುವೆಯೂ ಆದಿಪುರುಷ ಎರಡನೇ ದಿನ ಗಳಿಸಿದ ಹಣವೆಷ್ಟು?
Adipurush collection day 2: ಟೀಕೆಗಳ ನಡುವೆಯೂ ಭರ್ಜರಿ ಕಲೆಕ್ಷನ್‌ ಮಾಡಿದ ಆದಿಪುರುಷ.! ಎರಡನೇ ದಿನ ಗಳಿಸಿದ್ದೆಷ್ಟು? title=
Adipurush

Adipurush Box Office Collection Day 2: ಪ್ರಭಾಸ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ ಆದಿಪುರುಷ ಜೂನ್‌ 16 ರಂದು ಬಿಡುಗಡೆಯಾಗಿ, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದಾಗಿನಿಂದ ಹಲವು ವಿವಾದಗಳಲ್ಲಿ ಸಿಲುಕಿರುವ ಆದಿಪುರುಷ ಚಿತ್ರವು ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆತರುವಲ್ಲಿ ನಿರಂತರವಾಗಿ ಯಶಸ್ವಿಯಾಗುತ್ತಿದೆ. ಚಿತ್ರದ ಕೆಲವು ಸಂಭಾಷಣೆಗಳಿಗೆ ಸಂಬಂಧಿಸಿದಂತೆ ಪ್ರೇಕ್ಷಕರಿಂದ ತೀವ್ರ ಟೀಕೆಗಳು ಕೇಳಿಬರುತ್ತಿವೆ. ಬಿಡುಗಡೆಯಾದ ಎರಡು ದಿನಗಳಲ್ಲಿ ಚಿತ್ರವು ಭಾರತದಲ್ಲಿ 150 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಅದೇ ಸಮಯದಲ್ಲಿ, ಹಿಂದಿಯಲ್ಲೂ ಚಿತ್ರವು ತನ್ನ ಮೊದಲ ವಾರಾಂತ್ಯದಲ್ಲಿ 100 ಕೋಟಿ ರೂಪಾಯಿಗಳಿಗಿಂತ ಹೆಚ್ಚು ವ್ಯಾಪಾರ ಮಾಡುವ ನಿರೀಕ್ಷೆಯಿದೆ. ಅಭಿಮಾನಿಗಳ ಭಾವನೆಗಳನ್ನು ಗೌರವಿಸಿ, ಚಿತ್ರದ ನಿರ್ಮಾಪಕರು ಆದಿಪುರುಷನ ವಿವಾದಾತ್ಮಕ ಡೈಲಾಗ್‌ಗಳನ್ನು ತೆಗೆದುಹಾಕಲು ನಿರ್ಧರಿಸಿದ್ದಾರೆ.

ಆದಿಪುರುಷ ಎರಡನೇ ದಿನ ಗಳಿಸಿದ ಹಣವೆಷ್ಟು?

ಹಿಂದಿ ಭಾಷೆಯಲ್ಲಿ ಶನಿವಾರ ಆದಿಪುರುಷ 38 ಕೋಟಿ ರೂಪಾಯಿ ಕಬಳಿಸಿದೆ ಎಂದು ಚಲನಚಿತ್ರ ವ್ಯಾಪಾರ ವಿಶ್ಲೇಷಕ ಸುಮಿತ್ ಕಡೆಲ್ ಹೇಳಿದ್ದಾರೆ. ಈ ಚಿತ್ರ ಶುಕ್ರವಾರದಂದು 37.25 ಕೋಟಿ ರೂ. ಈ ಮೂಲಕ ಮೊದಲೆರಡು ದಿನದಲ್ಲಿ ಆದಿಪುರುಷ 75.25 ಕೋಟಿ ಬ್ಯುಸಿನೆಸ್ ಮಾಡಿದೆ.

ಇದನ್ನೂ ಓದಿ: ಪ್ರಭಾಸ್ ಅಭಿನಯದ ಆಧಿಪುರುಷ ಸಿನಿಮಾ ವಿರುದ್ಧ ಎಫ್ಐಆರ್ ದಾಖಲು 

ಭಾರತದಲ್ಲಿ 150 ಕೋಟಿಗೂ ಹೆಚ್ಚು ಕಲೆಕ್ಷನ್ 

ಆದಿಪುರುಷನ ಕುರಿತು ನಡೆಯುತ್ತಿರುವ ವಿವಾದಗಳ ನಡುವೆ, ಹಿಂದಿ ಹೊರತುಪಡಿಸಿ ಇತರ ಭಾಷೆಗಳಲ್ಲಿ ಚಿತ್ರವು ಎರಡನೇ ದಿನದಲ್ಲಿ 65 ಕೋಟಿ ರೂ. ಮತ್ತು ಶುಕ್ರವಾರ ಚಿತ್ರ 87 ಕೋಟಿ ಬ್ಯುಸಿನೆಸ್ ಮಾಡಿದೆ. ಈ ಮೂಲಕ ಚಿತ್ರ ಒಟ್ಟು 152 ಕೋಟಿ ಗಳಿಸಿದೆ. ಜಾಗತಿಕ ಕಲೆಕ್ಷನ್ ಬಗ್ಗೆ ಹೇಳುವುದಾದರೆ ಶುಕ್ರವಾರ 140 ಕೋಟಿ, ಶನಿವಾರ 100 ಕೋಟಿ ಗಳಿಕೆ ಮಾಡಿದೆ.

 

 

ಚಿತ್ರದ ವ್ಯವಹಾರದ ಟ್ರೆಂಡ್ ನೋಡಿದರೆ ಭಾನುವಾರ ಹಿಂದಿ ಭಾಷೆಯಲ್ಲಿ 40 ಕೋಟಿ ಗಳಿಸಬಹುದು ಎಂದು ಸುಮತ್ ಹೇಳಿದ್ದಾರೆ. ಅಂದಹಾಗೆ ಈ ಚಿತ್ರ ಭಾರತದಲ್ಲಿ ಒಟ್ಟು 215 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷೆಯಿದೆ.

ಪ್ರೇಕ್ಷಕರಿಂದ ತೀವ್ರ ಟೀಕೆ

ಆದಿಪುರುಷ ಚಿತ್ರದ ಬಿಡುಗಡೆಯೊಂದಿಗೆ ಚಿತ್ರದ ಕೆಲವು ಡೈಲಾಗ್‌ಗಳು ಪ್ರೇಕ್ಷಕರಿಂದ ತೀವ್ರ ಟೀಕೆಗೆ ಒಳಗಾಗಿವೆ. ಈ ವಿವಾದಗಳ ನಂತರ, ಚಿತ್ರದ ನಿರ್ಮಾಪಕರು ಅದನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ. ನಾನು ಮತ್ತು ಚಿತ್ರದ ನಿರ್ಮಾಪಕ-ನಿರ್ದೇಶಕರು ನಿಮಗೆ ನೋವುಂಟು ಮಾಡುವ ಕೆಲವು ಸಂಭಾಷಣೆಗಳನ್ನು ಸುಧಾರಿಸಲು ನಿರ್ಧರಿಸಿದ್ದೇವೆ ಎಂದು ಆದಿಪುರುಷ ಸಂಭಾಷಣೆ ಬರೆದ ಮನೋಜ್ ಮುಂತಾಶಿರ್ ಶುಕ್ಲಾ ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದಾರೆ.

 

 

ಇದನ್ನೂ ಓದಿ: Vijay To Quit Acting: ಆಕ್ಟಿಂಗ್‌ಗೆ ದಳಪತಿ ವಿಜಯ್‌ ಗುಡ್‌ ಬೈ!? ಇದು ಅವರ ಕೊನೆಯ ಚಿತ್ರವೇ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News