Adipurush Controversy: 'ಹನುಮಂತ ಭಗವಂತನಲ್ಲ...' ಮನೋಜ್ ಮುಂತಶೀರ್ ಹೇಳಿಕೆಗೆ ಸಿಡಿಮಿಡಿಗೊಂಡ ಜನ ಹೇಳಿದ್ದೇನು?

Manoj Muntashir In Controversy: ಸಂಭಾಷಣೆಯ ಹಿನ್ನೆಲೆ ಈಗಾಗಲೇ ಬಾಲೀವುಡ್ ಆದಿಪುರುಷ್ ಚಿತ್ರ ವಿವಾದದ ಸುಳಿಗೆ ಸಿಲುಕಿದೆ. ಆದರೆ ಇದೀಗ ಚಿತ್ರದ ಲೇಖಕ ಮನೋಜ್ ಮುಂತಶೀರ್ ಹನುಮಂತನ ಕುರಿತು ಮತ್ತೊಂದು ಹೇಳಿಕೆ ನೀಡಿ ಮತ್ತೊಂದು ವಿವಾದ ಮೈಮೇಲೆಳೆದುಕೊಂಡಿದ್ದಾರೆ. ಅಷ್ಟಕ್ಕೂ ಮನೋಜ್ ಹೇಳಿದ್ದೇನು ತಿಳಿದುಕೊಳ್ಳೋಣ ಬನ್ನಿ, 

Written by - Nitin Tabib | Last Updated : Jun 20, 2023, 04:28 PM IST
  • ವಾಸ್ತವದಲ್ಲಿ, ಖಾಸಗಿ ಸುದ್ದಿವಾಹಿಯಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮನೋಜ್ ಭಜರಂಗ್ ಬಲಿ ದೇವರಲ್ಲ, ಅವನೊಬ್ಬ ಭಕ್ತ,
  • ನಾವು ನಂತರದ ಕಾಲದಲ್ಲಿ ಅವನನ್ನು ದೇವರನ್ನಾಗಿಸಿದ್ದೇವೆ ಎಂದಿದ್ದಾರೆ. ಮನೋಜ್ ಅವರ ಈ ಸಂದರ್ಶನಕ್ಕೆ
  • ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಜನರು ಮೊನೋಜ್ ಗೆ ಮೌನವಾಗಿರಲು ಸಲಹೆ ನೀಡುತ್ತಿದ್ದಾರೆ.
Adipurush Controversy: 'ಹನುಮಂತ ಭಗವಂತನಲ್ಲ...' ಮನೋಜ್ ಮುಂತಶೀರ್ ಹೇಳಿಕೆಗೆ ಸಿಡಿಮಿಡಿಗೊಂಡ ಜನ  ಹೇಳಿದ್ದೇನು? title=

Manoj Muntashir In Controversy: ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ 'ಆದಿಪುರುಷ' ಚಿತ್ರ ಬಿಡುಗಡೆಯಾದಾಗಿನಿಂದ ವಿವಾದದ ಸುಳಿಗೆ ಸಿಲುಕಿದೆ. ಈಗಾಗಲೇ ಚಿತ್ರದ ಸಂಭಾಷಣೆಗಾಗಿ ಮನೋಜ್ ಮುಂತಾಶಿರ್ ಟೀಕೆಗೆ ಗುರಿಯಾಗಿದ್ದು, ಈಗ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂಥ ಮಾತುಗಳನ್ನಾಡಿದ್ದಾರೆ. ಹನುಮಾನ್ ದೇವರಲ್ಲ ಎಂದು ಮನೋಜ್ ಹೇಳಿದ್ದಾರೆ. ಮನೋಜ್‌ನ ಈ ಹೇಳಿಕೆಗೆ ಇದೀಗ ಜನರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಾಸ್ತವದಲ್ಲಿ, ಖಾಸಗಿ ಸುದ್ದಿವಾಹಿಯಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮನೋಜ್ ಭಜರಂಗ್ ಬಲಿ ದೇವರಲ್ಲ, ಅವನೊಬ್ಬ ಭಕ್ತ, ನಾವು ನಂತರದ ಕಾಲದಲ್ಲಿ ಅವನನ್ನು ದೇವರನ್ನಾಗಿಸಿದ್ದೇವೆ ಎಂದಿದ್ದಾರೆ. ಮನೋಜ್ ಅವರ ಈ ಸಂದರ್ಶನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಜನರು ಮೊನೋಜ್ ಗೆ ಮೌನವಾಗಿರಲು ಸಲಹೆ ನೀಡುತ್ತಿದ್ದಾರೆ.

ಕೆಲವು ಬಳಕೆದಾರರ ಪ್ರತಿಕ್ರಿಗಳು ಇಲ್ಲಿವೆ..

ಇದನ್ನೂ ಓದಿ-'Adipurush' ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಸರ್ಕಾರ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲು ಬಿಡುವುದಿಲ್ಲ ಎಂದ ಅನುರಾಗ್ ಠಾಕೂರ್

ಸೋಮವಾರ ಚಿತ್ರದ ಗಳಿಕೆಯಲ್ಲಿ ಭಾರಿ ಕುಸಿತ
ಸೋಮವಾರ ಚಿತ್ರದ ಕಲೆಕ್ಷನ್ ನಲ್ಲಿ ಭಾರೀ ಇಳಿಕೆಯಾಗಿದೆ. ಸೋಮವಾರದಂದು ಚಿತ್ರದ ಗಳಿಕೆ ಶೇ.70ರಷ್ಟು ಕಡಿಮೆಯಾಗಿದೆ. ವರದಿಗಳ ಪ್ರಕಾರ, ಚಿತ್ರದ ಹಿಂದಿ ಆವೃತ್ತಿ ಸೋಮವಾರ ಕೇವಲ 9 ಕೋಟಿ ಗಳಿಸಿದೆ. ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ಚಿತ್ರ ಉತ್ತಮ ಗಳಿಕೆ ಕಂಡಿದೆ, ಆದರೆ ಚಿತ್ರದ ಬಗ್ಗೆ ವಿವಾದಗಳು ಹೆಚ್ಚಾಗುತ್ತಿದ್ದಂತೆ, ಜನರು ಚಿತ್ರವನ್ನು ನೋಡುವ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ.

ಇದನ್ನೂ ಓದಿ-Adipurush Controversy: 'ಕೇವಲ ಸಂಭಾಷಣೆ ಬದಲಾಯಿಸುವುದು ಸಾಕಾಗುವುದಿಲ್ಲ, ಕ್ಷಮೆ ಕೋರಿ'

ವರದಿಗಳ ಪ್ರಕಾರ ಈ ಚಿತ್ರವನ್ನು 600 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಚಿತ್ರದಲ್ಲಿ ಪ್ರಭಾಸ್, ಕೃತಿ ಮತ್ತು ಸೈಫ್ ಅವರಲ್ಲದೆ, ಸನ್ನಿ ಸಿಂಗ್, ಸೋನಲ್ ಚೌಹಾಣ್, ಸಿದ್ಧಾರ್ಥ್ ನಿಗಮ್ ಸಹ ನಟಿಸಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News