ʼಅಲ್ಲು ಅರ್ಜುನ್‌ʼ ಒಡೆತನದ ಹೊಸ ಥಿಯೇಟರ್‌ನಲ್ಲಿ ʼಪ್ರಭಾಸ್‌ ಆದಿಪುರುಷʼ ಫಸ್ಟ್‌ ಶೋ..! 

Allu arjun AAA cinemas : ಸ್ಟೈಲಿಶ್‌ ಸ್ಟಾರ್‌ ನಟ ಅಲ್ಲು ಅರ್ಜುನ್ ಒಡೆತನದ ಹೊಸ ಸಿನಿಮಾ ಹಾಲ್ 'ಎಎಎ ಸಿನಿಮಾಸ್' ಜೂನ್ 15 ರಂದು ಉದ್ಘಾಟನೆಯಾಗಲಿದ್ದು, ಮೊದಲ ಬಾರಿಗೆ ಪ್ರಭಾಸ್ ಅಭಿನಯದ ಆದಿಪುರುಷ ಸಿನಿಮಾ ಪ್ರದರ್ಶನಗೊಳ್ಳಲಿದೆ.

Written by - Krishna N K | Last Updated : Jun 15, 2023, 03:43 PM IST
  • ನಾಳೆ ಪ್ರಭಾಸ್‌ ನಟನೆಯ ಆದಿಪುರುಷ ಸಿನಿಮಾ ತೆರೆ ಕಾಣಲಿದೆ.
  • ಆದಿಪುರುಷ ಸಿನಿಮಾ ಪ್ರದರ್ಶನ ಮೂಲಕ ಎಎಎ ಸಿನಿಮಾಸ್‌ ಲೋಕಾರ್ಪಣೆಯಾಗಲಿದೆ.
  • ಸ್ಟೈಲಿಶ್‌ ಸ್ಟಾರ್‌ ನಟ ಅಲ್ಲು ಅರ್ಜುನ್ ಒಡೆತನದ 'ಎಎಎ ಸಿನಿಮಾಸ್' ಮಲ್ಟಿಪ್ಲೇಕ್ಸ್‌.
ʼಅಲ್ಲು ಅರ್ಜುನ್‌ʼ ಒಡೆತನದ ಹೊಸ ಥಿಯೇಟರ್‌ನಲ್ಲಿ ʼಪ್ರಭಾಸ್‌ ಆದಿಪುರುಷʼ ಫಸ್ಟ್‌ ಶೋ..!  title=

Adipurush first show in Allu Arjun theater : ರೆಬಲ್‌ ಸ್ಟಾರ್‌ ಪ್ರಭಾಸ್, ಕೃತಿ ಸನನ್, ಸೈಫ್ ಅಲಿ ಖಾನ್ ಮತ್ತು ಸನ್ನಿ ಸಿಂಗ್ ಅಭಿನಯದ ಬಹು ನಿರೀಕ್ಷಿತ 'ಆದಿಪುರುಷ' ಚಿತ್ರ ಪ್ರದರ್ಶನದೊಂದಿಗೆ ಹೈದರಾಬಾದ್‌ನಲ್ಲಿರುವ ಅಲ್ಲು ಅರ್ಜುನ್ ಅವರ ಹೊಸ ಚಿತ್ರಮಂದಿರ ʼಎಎಎ ಸಿನಿಮಾಸ್‌ʼ ಗ್ರ್ಯಾಂಡ್‌ ಓಪನಿಂಗ್‌ ಪಡೆಯಲಿದೆ. ಜೂನ್ 16 ರಂದು ಎಎಎ ಸಿನಿಮಾಸ್‌ ಕಾರ್ಯಾಚರಣೆ ಪ್ರಾರಂಭಿಸಲಿದೆ.

ಭೂಷಣ್ ಕುಮಾರ್ ನಿರ್ಮಾಣದ ಓಂ ರಾವುತ್ ನಿರ್ದೇಶನ ಆದಿಪುರುಷ ಸಿನಿಮಾ, ಪ್ಯಾನ್-ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಮುಂಗಡ ಟಿಕೆಟ್‌ ಬುಕ್ಕಿಂಗ್‌ ದಾಖಲೆ ನಿರ್ಮಿಸಿದೆ. 'ಆದಿಪುರುಷ' ಚಿತ್ರಮಂದಿರಕ್ಕೆ ಬರಲು ಕೇವಲ ಒಂದು ದಿನ ಬಾಕಿ ಉಳಿದಿದ್ದು, ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಇದೇ ವೇಳೆ ನಟ ಅಲ್ಲು ಅರ್ಜುನ್‌ ಒಡೆತನದ ಎಎಎ ಸಿನಿಮಾಸ್‌ ಆದಿಪುರುಷ ಚಿತ್ರ ಪ್ರದರ್ಶನದ ಮೂಲಕ ಗ್ರ್ಯಾಂಡ್‌ ಓಪನಿಂಗ್ ಪಡೆಯಲಿದೆ.

ಇದನ್ನೂ ಓದಿ: Kantara 2 : 'ಕಾಂತಾರ 2' ಮುಹೂರ್ತಕ್ಕೆ ಡೇಟ್‌ ಫಿಕ್ಸ್‌.! ರಿಲೀಸ್‌ ಯಾವಾಗ ಗೊತ್ತಾ?

ಆದಿಪುರುಷ ಟಿಕೆಟ್ ಬೆಲೆ ಏರಿಕೆ : ತೆಲಂಗಾಣ ಸರ್ಕಾರದ ಆದಿಪುರುಷ ಚಿತ್ರದ ಟಿಕೆಟ್ ದರವನ್ನು 50 ರೂಪಾಯಿ ಹೆಚ್ಚಿಸುವ ಸೂಚನೆಯನ್ನು ನೀಡಿದೆ. ಈ ಕುರಿತು ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ. ಟೈಮ್ಸ್ ನೌ ವರದಿಯ ಪ್ರಕಾರ, ಕೆಲವು ಸಿನಿಮಾ ಹಾಲ್‌ಗಳು ಒಂದು ಟಿಕೆಟ್‌ 2000 ರೂ. ನಂತೆ ಮಾರಾಟ ಮಾಡಿದೆ ಎಂದು ಹೇಳಲಾಗುತ್ತಿದೆ. 250-ರೂ. ರಿಂದ 500 ವರೆಗಿನ ಟಿಕೆಟ್‌ಗಳು ಸಹ ಲಭ್ಯವಿದೆ.

'ಆದಿಪುರುಷ' ಮಹಾಕಾವ್ಯ ರಾಮಾಯಣದಿಂದ ಪ್ರೇರಿತವಾದ ಸಿನಿಮಾ. ಈ ಚಿತ್ರದಲ್ಲಿ, ಪ್ರಭಾಸ್ ರಾಘವ್, ಕೃತಿ ಜಾನಕಿ ಮತ್ತು ಸೈಫ್ ರಾವಣನ ಪ್ರಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಓಂ ರಾವುತ್ ನಿರ್ದೇಶಿಸಿದ್ದಾರೆ. ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಈ ಚಿತ್ರದವನ್ನು ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News