Adipurush review : ಪ್ರಭಾಸ್‌ ʼಆದಿಪುರುಷʼ ರಿಲೀಸ್‌ : ಹೇಗಿದೆ ಸೀತಾ-ರಾಮ ಪ್ರೇಮಕಥಾ ಸಿನಿಮಾ..!

Adipurush fans reaction : ಪ್ಯಾನ್-ಇಂಡಿಯಾ ಮಟ್ಟದಲ್ಲಿ ಭಾರಿ ನಿರೀಕ್ಷೆ ಕಾರಣವಾಗಿದ್ದ ಆದಿಪುರುಷ ಚಿತ್ರ ಇಂದು ರಿಲೀಸ್‌ ಆಗಿದೆ. ಟ್ವಿಟ್ಟರ್‌ನಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಉತ್ಸಾಹ ಭರಿತ ವಿಮರ್ಶೆಗಳನ್ನು ನೀಡುತ್ತಿದ್ದಾರೆ. ಈ ಸಿನಿಮಾ ಪ್ರಭಾಸ್ ಕೆರಿಯರ್‌ನಲ್ಲಿ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಆಗುತ್ತಾ..? ಆದಿಪುರುಷ ಪ್ರೇಕ್ಷಕನಿಗೆ ಇಷ್ಟವಾಯಿತೇ..? ಇಲ್ಲಿದೆ ನೋಡಿ ವಿವರ..

Written by - Krishna N K | Last Updated : Jun 16, 2023, 09:22 AM IST
  • ಓಂ ರಾವುತ್‌ ನಿರ್ದೇಶನದ ಆದಿಪುರುಷ ಸಿನಿಮಾ ರಿಲೀಸ್‌ ಆಗಿದೆ.
  • ಆದಿಪುರುಷ ಸಿನಿಮಾದಲ್ಲಿ ಪ್ರಭಾಸ್‌, ಕೃತಿ ನಟಿಸಿದ್ದಾರೆ.
  • ಆದಿಪುರುಷ ಪ್ರೇಕ್ಷಕನಿಗೆ ಇಷ್ಟವಾಯಿತೇ..? ಇಲ್ಲಿದೆ ನೋಡಿ ವಿವರ..
Adipurush review : ಪ್ರಭಾಸ್‌ ʼಆದಿಪುರುಷʼ ರಿಲೀಸ್‌ : ಹೇಗಿದೆ ಸೀತಾ-ರಾಮ ಪ್ರೇಮಕಥಾ ಸಿನಿಮಾ..! title=

Adipurush Review: ರೆಬೆಲ್ ಸ್ಟಾರ್ ಪ್ರಭಾಸ್ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳ ಬಹು ನಿರೀಕ್ಷಿತ ಸಿನಿಮಾ ಆದಿಪುರುಷ. ಓಂ ರಾವುತ್ ನಿರ್ದೇಶನದ ಈ ಸಿನಿಮಾದಲ್ಲಿ ಜಾನಕಿ ದೇವಿಯಾಗಿ ಬಾಲಿವುಡ್ ಬೆಡಗಿ ಕೃತಿ ಸನನ್ ನಟಿಸಿದ್ದಾರೆ. ಭೂಷಣ್ ಕುಮಾರ್ ಅವರು ಟಿ ಸಿರೀಸ್ ಬ್ಯಾನರ್ ಅಡಿಯಲ್ಲಿ 'ಆದಿಪುರುಷ' ನಿರ್ಮಿಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಆದಿಪುರುಷ ಸಿನಿಮಾದ ಟೀಸರ್ ಮತ್ತು ಟ್ರೇಲರ್ ಸೂಪರ್ ಆಗಿರುವುದರಿಂದ ಸಿನಿಮಾದ ಮೇಲೆ ಭಾರೀ ನಿರೀಕ್ಷೆಗಳು ಹೆಚ್ಚಿಸಿದ್ದವು. ಇಂದು ಪೌರಾಣಿಕ ಆ್ಯಕ್ಷನ್ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. 'ಆದಿಪುರುಷ' ಅನ್ನು 3ಡಿ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾಗಿದೆ. ರಾಘವ್ ಪಾತ್ರದಲ್ಲಿ ಪ್ರಭಾಸ್ ನಟನೆ ಹೇಗಿದೆ..? ಲಂಕೇಶ್ವರನಾಗಿ ನಟಿಸಿರುವ ಸೈಫ್ ಅಲಿ ಖಾನ್ ನಟನೆ ಎಷ್ಟು ಪ್ರಭಾವಶಾಲಿಯಾಗಿದೆ..? ಎನ್ನುವ ಕುರಿತು ಪ್ರೇಕ್ಷಕರು ಟ್ವಿಟ್ಟರ್ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇದನ್ನೂ ಓದಿ:  ಧೋನಿ ನಿರ್ಮಾಣದ ಚೊಚ್ಚಲ ಸಿನಿಮಾ ಬಿಡುಗಡೆಗೆ ರೆಡಿ...ಕರ್ನಾಟಕದಲ್ಲಿಯೂ ರಿಲೀಸ್ ಆಗಲಿದೆ LGM-ಲೆಟ್ಸ್ ಗೆಟ್ ಮ್ಯಾರೀಡ್

ಟ್ವಿಟ್ಟರ್ ನಲ್ಲಿ ಆದಿಪುರುಷನಿಗೆ ಹೊಗಳಿಕೆಯ ಸುರಿಮಳೆಯಾಗುತ್ತಿದೆ. ಈಗಿನ ಜನರೇಷನ್‌ಗಾಗಿ ಸಿನಿಮಾ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರಕಥೆ ಮತ್ತು ಸಂಗೀತ ಸೂಪರ್ ಎಂದು ವಿಮರ್ಶೆ ಮಾಡಲಾಗುತ್ತಿದೆ. ಕೆಲವು ದೃಶ್ಯಗಳಲ್ಲಿ ಗೂಸ್ ಬಮ್ಸ್ ಬರಿಸುತ್ತವೆ ಅಂತ ಕಾಮೆಂಟ್ ಮಾಡಲಾಗುತ್ತಿದೆ. ಆದ್ರೆ, ವಿಎಫ್‌ಎಕ್ಸ್ ಇನ್ನೂ ಉತ್ತಮವಾಗಿದ್ದರೆ ಒಳ್ಳೆಯದಾಗಿತ್ತು ಅಂತ ಹೇಳುತ್ತಿದ್ದಾರೆ. ಸಾಹಸ ದೃಶ್ಯಗಳು ಅದ್ಭುತವಾಗಿವೆ ಎಂದು ಚಿತ್ರ ನೋಡಿದವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇಡೀ ಚಿತ್ರಮಂದಿರಗಳು ಜೈಶ್ರೀರಾಮ್ ಅಬ್ಬರದಿಂದ ಗಿಜಿಗುಡುತ್ತಿವೆ. ಸಿನಿಮಾ ನೋಡಿದ ಮೇಲೂ ಸಹ ಜೈ ಶ್ರೀರಾಮ್ ಘೋಷ ಮೊಳಗುತ್ತಿದೆ. ನೆಟಿಜನ್ ಮೊದಲಾರ್ಧ ಚೆನ್ನಾಗಿದೆ, ಆದರೆ ದ್ವಿತೀಯಾರ್ಧದ ಮಧ್ಯ ಸ್ವಲ್ಪ ಡ್ರ್ಯಾಗ್‌ ಆಗಿದೆ, ವಿಎಫ್‌ಎಕ್ಸ್ ಇನ್ನೂ ಉತ್ತಮವಾಗಿದ್ದರೆ ಚನ್ನಾಗಿರುತ್ತಿತ್ತು ಅಂತ ರಿವ್ಯೂ ನೀಡಿದ್ದಾರೆ.

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News