Aditya Roy : ಮಳೆಯಲ್ಲಿ ರೂಮರ್ಡ್ ಲವ್​ಬರ್ಡ್ಸ್ ಜಾಲಿ ರೈಡ್..ಕ್ಯಾಮೆರಾ ನೋಡಿ ಮುಖ ಮುಚ್ಚಿಕೊಂಡ ಅನನ್ಯಾ ಪಾಂಡೆ

Aditya Roy-Ananya Panday Viral Photos :  : ಇತ್ತೀಚೆಗಷ್ಟೆ ವಿದೇಶದಲ್ಲಿ ಕದ್ದುಮುಚ್ಚಿ ಸುತ್ತಾಡಿದ್ದ ಬಾಲಿವುಡ್​ನ ರೂಮರ್ಡ್ ಲವ್​ಬರ್ಡ್ಸ್ ಆದಿತ್ಯ ರಾಯ್ ಕಪೂರ್ ಮತ್ತು ಅನನ್ಯಾ ಪಾಂಡೆ ಮಳೆಯಲ್ಲಿ ಜಾಲಿರೈಡ್‌ ಮಾಡಿದ್ದು, ಇದೀಗ ಆ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. 

Written by - Savita M B | Last Updated : Jul 25, 2023, 01:24 PM IST
  • ಕೆಲ ದಿನಗಳ ಹಿಂದಷ್ಟೇ ಸ್ಪೇನ್​ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಆದಿತ್ಯ ರಾಯ್ ಕಪೂರ್ ಮತ್ತು ಅನನ್ಯಾ ಪಾಂಡೆ
  • ತಮ್ಮಿಬ್ಬರ ಡೇಟಿಂಗ್‌ ವದಂತಿಗೆ ತುಪ್ಪ ಸುರಿದಂತೆ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
  • ಅದೇ ಪೋಟೋಗಳು ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿವೆ.
Aditya Roy : ಮಳೆಯಲ್ಲಿ ರೂಮರ್ಡ್ ಲವ್​ಬರ್ಡ್ಸ್ ಜಾಲಿ ರೈಡ್..ಕ್ಯಾಮೆರಾ ನೋಡಿ ಮುಖ ಮುಚ್ಚಿಕೊಂಡ ಅನನ್ಯಾ ಪಾಂಡೆ  title=

Aditya Roy-Ananya Panday : ಕೆಲ ದಿನಗಳ ಹಿಂದಷ್ಟೇ ಸ್ಪೇನ್​ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಆದಿತ್ಯ ರಾಯ್ ಕಪೂರ್ ಮತ್ತು ಅನನ್ಯಾ ಪಾಂಡೆ ತಮ್ಮಿಬ್ಬರ ಡೇಟಿಂಗ್‌ ವದಂತಿಗೆ ತುಪ್ಪ ಸುರಿದಂತೆ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 

ಮುಂಬೈನಲ್ಲಿ ಶನಿವಾರ (ಜುಲೈ 22) ರಾತ್ರಿ ಆದಿತ್ಯ ರಾಯ್ ಕಪೂರ್ ಮತ್ತು ಅನನ್ಯಾ ಪಾಂಡೆ ಜಾಲಿ ರೈಡ್​ ಮಾಡಿದೆ. ಮಳೆಯಲ್ಲಿ ಸುತ್ತಾಡುತ್ತಿದ್ದ ಜೋಡಿಯನ್ನು ಪಾಪಾರಾಜಿಗಳು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಅದೇ ಪೋಟೋಗಳು ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿವೆ. 

 
 
 
 

 
 
 
 
 
 
 
 
 
 
 

A post shared by HT City (@htcity)

ಇದನ್ನೂ ಓದಿ-Sakshi Dhoni: ಕೂಲ್ ಕ್ಯಾಪ್ಟನ್ ಧೋನಿ ಪತ್ನಿ ಸಾಕ್ಷಿ ಈ ಸೂಪರ್ ಸ್ಟಾರ್ ನಟನ ಬಿಗ್‌ ಫ್ಯಾನ್..!

ಗುಲಾಬಿ ಬಣ್ಣದ ಉಡುಪನ್ನು ಧರಿಸಿದ್ದ ಲೈಗರ್‌ ಬೆಡಗಿ ಅನನ್ಯಾ ಪಾಂಡೆ ಕ್ಯಾಮೆರಾ ಕಂಡ ಕೂಡಲೇ ನಗುತ್ತಾ ತಮ್ಮ ಮುಖ ಮುಚ್ಚಿಕೊಂಡು ಆದಿತ್ಯ ರಾಯ್​ ಕಡೆ ನೋಡಿದ್ದಾರೆ. ನಟ ಆದಿತ್ಯ ಕಪೂರ್​ ಮುಗುಳ್ನಗುತ್ತಲೇ ಕಾರು ಓಡಿಸಿದ್ದಾರೆ. 

ಪೋಟೋಗಳಿಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, "ಅದು ಅವರ ಜೀವನ..ಅವರಿಬ್ಬರು ಒಟ್ಟಿಗೆ ಚೆನ್ನಾಗಿದ್ದಾರೆ ಎಂದೆಲ್ಲಾ ಕಾಮೆಂಟ್‌ ಮಾಡಿದ್ದಾರೆ. ಇವರಿಬ್ಬರು ಅಧಿಕೃತವಾಗಿ ಹೇಳಿಕೊಂಡಿಲ್ಲವಾದರೂ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಯಲ್ಲಿರುವುದರ ಜೊತೆಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುತ್ತಿದ್ದಾರೆ. 

ಇದನ್ನೂ ಓದಿ- Uorfi Javed: ನಿಮ್ಮಿಂದ ಭಾರತದ ಪ್ರತಿಷ್ಠೆ ಹಾಳು ಎಂದ ಅಪರಿಚಿತ ವ್ಯಕ್ತಿಗೆ ಉರ್ಫಿ ಜಾವೇದ್ ಕ್ಲಾಸ್​..ವಿಡಿಯೋ ವೈರಲ್‌

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News