ತಮಿಳು ಯುವನಟನ ಜೊತೆ ಐಶ್ವರ್ಯಾ ʻಪ್ರೇಮಬರಹʼ, ಅರ್ಜುನ್ ಸರ್ಜಾ ಅಳಿಯ ಇವರೇ !

Arjun Sraja Daughter Marriage : ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಸದ್ಯಕ್ಕೆ ಲಿಯೋ ಸಿನಿಮಾದ ಬಿಡುಗಡೆ ತಯಾರಿಯಲ್ಲಿದ್ದಾರೆ. ಇನ್ನೊಂದು ಕಡೆ ತಾವು ಕಥೆ ಬರೆದಿರುವ ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಪ್ಯಾನ್‌ ಇಂಡಿಯಾ ಸಿನಿಮಾ ಮಾರ್ಟಿನ್‌ ರಿಲೀಸ್‌ ಆಗಬೇಕಿದೆ. ಈ ಸಂಭ್ರಮಗಳ ನಡುವೆ ಅರ್ಜುನ್‌ ಸರ್ಜಾ ತಮಿಳಿನ ಯುವನಟನ ಜೊತೆ ತಮ್ಮ ಮಗಳ ಮದುವೆ ಮಾಡಲು ಮುಂದಾಗಿದ್ದಾರೆ.   

Written by - Savita M B | Last Updated : Jun 26, 2023, 12:24 PM IST
  • ಅರ್ಜುನ್‌ ಸರ್ಜಾ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನ ಎರಡರಲ್ಲೂ ಸಿಕ್ಕಾಪಟ್ಟೆ ಬ್ಯೂಸಿ
  • ದಳಪತಿ ವಿಜಯ್‌ ನಟಿಸಿರುವ ಬಹುನಿರೀಕ್ಷಿತ ʼಲಿಯೋʼ ಸಿನಿಮಾದಲ್ಲಿ ಅರ್ಜುನ್‌ ಸರ್ಜಾ ನಟಿಸಿದ್ದಾರೆ.
  • ಇಷ್ಟೆಲ್ಲಾ ಸಂಭ್ರಮಗಳ ನಡುವೆ ಅರ್ಜುನ್‌ ಸರ್ಜಾ ತಮ್ಮ ಮಗಳು ಐಶ್ವರ್ಯಾ ಅವರ ಮದುವೆ ಮಾಡಲು ಸಜ್ಜಾಗಿದ್ದಾರೆ
ತಮಿಳು ಯುವನಟನ ಜೊತೆ ಐಶ್ವರ್ಯಾ ʻಪ್ರೇಮಬರಹʼ, ಅರ್ಜುನ್ ಸರ್ಜಾ ಅಳಿಯ ಇವರೇ ! title=

Arjun Sarja Upcomig Movie : ಅರ್ಜುನ್‌ ಸರ್ಜಾ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನ ಎರಡರಲ್ಲೂ ಸಿಕ್ಕಾಪಟ್ಟೆ ಬ್ಯೂಸಿ. ಇನ್ನು ದಳಪತಿ ವಿಜಯ್‌ ನಟಿಸಿರುವ ಬಹುನಿರೀಕ್ಷಿತ  ʼಲಿಯೋʼ ಸಿನಿಮಾದಲ್ಲಿ ಅರ್ಜುನ್‌ ಸರ್ಜಾ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಲೋಕೆಶ್‌ ಕನಗರಾಜ್‌ ನಿರ್ದೇಶಿಸಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತೆ ಅನ್ನೋ ಗುಸುಗುಸು ಸುದ್ದಿಗಳು ಹರಿದಾಡುತ್ತಿವೆ. 

ಕನ್ನಡದ ಮತ್ತೊಂದು ಬಹುನಿರೀಕ್ಷಿತ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ ಅರ್ಜುನ್‌ ಸರ್ಜಾ. ಹೌದು ಕನ್ನಡ ಸಿನಿರಂಗದ ಆಕ್ಷನ್‌ ಫ್ರಿನ್ಸ್‌ ಧ್ರುವ ಸರ್ಜಾ ಅವರು ನಟಿಟಿಸರುವ ಪ್ಯಾನ್‌ ಇಂಡಿಯಾ ಸಿನಿಮಾ ಮಾರ್ಟಿನ್‌ಗೆ ಕಥೆ ಬರೆದಿದ್ದು ಇವರೇ , ಸದ್ಯಕ್ಕೆ ಈ ಸಿನಿಮಾದ ಬಿಡುಗಡೆಗಾಗಿ ನಟ ಅರ್ಜುನ್‌ ಸರ್ಜಾ ಕಾಯುತ್ತಿದ್ದಾರೆ. 

ಇಷ್ಟೆಲ್ಲಾ ಸಂಭ್ರಮಗಳ ನಡುವೆ ಅರ್ಜುನ್‌ ಸರ್ಜಾ ತಮ್ಮ ಮಗಳು ಐಶ್ವರ್ಯಾ ಅವರ ಮದುವೆ ಮಾಡಲು ಸಜ್ಜಾಗಿದ್ದಾರೆ ಅನ್ನೊ ಸುದ್ದಿ ಹರಿದಾಡುತ್ತಿದೆ. ಇನ್ನು ಈ ಕಾರ್ಯ ಮಾತು ಕಥೆಯ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಮದುವೆಯೂ ನೆರವೇರಲಿದೆ ಎನ್ನಲಾಗುತ್ತಿದೆ. ಹಾಗಾದ್ರೆ ಸರ್ಜಾ ಅವರ ಮೊದಲ ಪುತ್ರಿಯ ಕೈ ಹಿಡಿಯಲಿರೋ ವರ ಯಾರು..? ಅವರು ಸಿನಿರಂಗದಲ್ಲಿದ್ದಾರಾ..? ಮುಂದೆ ಓದಿ..

ಇದನ್ನೂ ಓದಿ-Sanchith Sanjeev: ಸ್ಯಾಂಡಲ್‌ವುಡ್‌ಗೆ ಜೂ ಕಿಚ್ಚನ ಎಂಟ್ರಿ, ಮಾವನಿಗೆ ತಕ್ಕ ಅಳಿಯ ಎಂದ ಫ್ಯಾನ್ಸ್‌!

ಅರ್ಜುನ್‌ ಸರ್ಜಾ ತಮಿಳಿನ ಖ್ಯಾತ ಹಾಸ್ಯ ನಟ ತಂಬಿ ರಾಮಯ್ಯ ಅವರ ಜೊತೆ ಸಂಬಂಧ ಬೆಳೆಸುತ್ತಿದ್ದಾರೆ ಅನ್ನೊ ಸುದ್ದಿ ವೈರಲ್‌ ಆಗುತ್ತಿದೆ. ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಕೂಡ ತಮಿಳು ಸಿನಿಮಾಗಳಲ್ಲಿ ನಟಿಸುತ್ತಾರೆ. ಇನ್ನು ಶೀಘ್ರದಲ್ಲಿಯೇ ಉಮಾಪತಿ ಹಾಗೂ ಐಶ್ವರ್ಯ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ. 

ಉಮಾಪತಿ ರಾಮಯ್ಯ ಅವರು 2017ರಲ್ಲಿ ʼಅಧಗಪ್ಪಟ್ಟಾಥು ಮಗಜನಂಗಳೈʼ ಸಿನಿಮಾ ಮೂಲಕ ತಮಿಳು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಫೇಮಸ್‌ ಆಗಲಿಲ್ಲ. ಇನ್ನು ʼಮನಿಯಾರ್‌ ಕುಟುಂಬಂʼ ಇದು ಉಮಾಪತಿ ಅವರ ಎರಡನೇ ಸಿನಿಮಾ ಇದನ್ನು ಅವರ ತಂದೆ ತಂಬಿ ರಾಮಯ್ಯ ನಿರ್ದೇಶನ ಮಾಡಿದ್ದರು. ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.  

ಈ ನಟ ಇತ್ತೀಚೆಗೆ ತಮಿಳಿನ ರಿಯಾಲಿಟಿ ಶೋ ʼಸರ್ವವೈರ್‌ ತಮಿಳ್‌ʼನಲ್ಲಿ ಭಾಗವಹಿಸಿದ್ದರು. ಈ ಮೂಲಕ ತಮಿಳುನಾಡಿನಲ್ಲಿ ಜನಪ್ರಿಯವಾಗಿದ್ದಾರೆ. ಇವರು ಒಬ್ಬ ನಟ ಮಾತ್ರನಲ್ಲ, ಒಳ್ಳೆ ಡ್ಯಾನ್ಸ್‌ ಹಾಗೂ ಕೊರಿಯೋಗ್ರಾಫರ್ ಕೂಡಾ ಹೌದು. ಸದ್ಯ ಉಮಾಪತಿ ರಾಮಯ್ಯ ಅವರು ಅರ್ಜುನ್‌ ಸರ್ಜಾ ಪುತ್ರಿಯನ್ನು ಮದುವೆ ಮಾಡಿಕೊಳ್ಳುವ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. 

ಇದನ್ನೂ ಓದಿ-Rishab Shetty : ತಾವು ಹುಟ್ಟಿಬೆಳೆದ ಮನೆಯಲ್ಲೇ ಮಗಳ ಕಿವಿ ಚುಚ್ಚುವ ಶಾಸ್ತ್ರ ಮಾಡಿದ ಕಾಂತಾರ ನಾಯಕ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News